ಬೆಂಗಳೂರು : ಶಾಲೆಗಳ ಆವರಣದಲ್ಲಿ ಹೈಟೆನ್ಷನ್ ವೈರ್ ಅಪಾಯಕಾರಿಯಾಗಿದ್ದು, ವೈರ್ʼಗಳ ತಕ್ಷಣ ತೆರವಿಗೆ ರಾಜ್ಯ ಹೈಕೋರ್ಟ್ ಆದೇಶ ನೀಡಿದೆ. ಈ ಸಂಬಂಧ ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂಗಳಿಗೆ ನೋಟಿಸ್ ಜಾರಿ ಮಾಡಿದೆ.
2019ರಲ್ಲಿ ಕೊಪ್ಪಳದ ಐವರು ವಿದ್ಯಾರ್ಥಿಗಳು ಹಾಸ್ಟೆಲ್‌ನ ಧ್ವಜಸ್ತಂಭ ಇಳಿಸುವಾಗ ವಿದ್ಯುತ್ ಹರಿದು ಈ ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಹೀಗಾಗಿ ಸ್ವಯಂ ಪ್ರೇರಿತ ಪಿಐಎಲ್ ವಿಚಾರಣೆ ನಡೆಸಿ, ಹಿಂದುಳಿದ ವರ್ಗಗಳ ಹಾಸ್ಟೆಲ್ ಸರ್ವೆಗೂ ಸೂಚನೆ ನೀಡಿ, ಹಾಸ್ಟೆಲ್‌ಗಳ ಸೌಕರ್ಯ ಪರಶೀಲನೆಗೂ ಸೂಚಿಸಿತ್ತು.
ಶಾಲೆಗಳ ಆವರಣದಲ್ಲಿ ಹೈಟೆನ್ಷನ್ ವೈರ್ ಅಪಾಯಕಾರಿಯಾಗಿದ್ದು, ಶಾಲೆ ಅವರಣದಲ್ಲಿ ಹೈಟೆನ್ಷನ್ ವೈರ್ ತೆರವುಗೊಳಿಸಬೇಕು ಎಂದಿದೆ. ಈ ಸಂಬಂಧ ಕೆಪಿಟಿಸಿಎಲ್, ಎಸ್ಕಾಂಗಳಿಗೂ ನೋಟಿಸ್ ನೀಡಿದ್ದು, ವಿದ್ಯುತ್ ಅವಘಡದಲ್ಲಿ ವಿದ್ಯಾರ್ಥಿಗಳ ಸಾವಿಗೆ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಮಾಡದಂತೆ ಸೂಚನೆ ನೀಡಿದೆ.