Thursday, 19th September 2024

Karnataka Weather: ರಾಜ್ಯದಲ್ಲಿ ತಗ್ಗಿದ ವರುಣಾರ್ಭಟ; ಇಂದು ಹಾಸನ, ಕೊಡಗು ಸೇರಿ ವಿವಿಧೆಡೆ ಹಗುರ ಮಳೆ

Karnataka Weather

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ವರುಣನ ಅಬ್ಬರ ಕಡಿಮೆಯಾಗಿದ್ದು, ಬಹುತೇಕ ಕಡೆ ಒಣ ಹವೆಯ ವಾತಾವರಣವಿದೆ. ಇನ್ನು ಸೆ.15ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆ ಹಾಗೂ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Karnataka Weather) ಸಾಧ್ಯತೆ ಇದ್ದು, ಬಹುತೇಕ ಕಡೆ ಒಣ ಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಸೆ. 16ರಂದು ಕೂಡ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Rain Fall) ಸಾಧ್ಯತೆ ಇದೆ. ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಮುಖ್ಯವಾಗಿ ಒಣ ಹವೆಯ ಸಾಧ್ಯತೆಯಿದ್ದು, ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಅದೇ ರೀತಿ ಸೆ.17ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯಲ್ಲಿ ಹಗುರ ಮಳೆಯಾಗುವ (Rain News) ಸಾಧ್ಯತೆಯಿದೆ. ಸೆ.20ವರೆಗೆ ಇದೇ ರೀತಿಯ ಹವಾಮಾನ ಇರಲಿದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ | Covid Lockdown: ಲಾಕ್‌ಡೌನ್‌ ಎಫೆಕ್ಟ್‌; ಹುಡುಗಿಯರಲ್ಲಿ ಮೆದುಳಿನ ವಯಸ್ಸಿನ ವೇಗ ಹೆಚ್ಚಳ!

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:
ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ಆಕಾಶ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30°C ಮತ್ತು 21°C ಆಗಿರಬಹುದು.

ಇನ್ನು ಸೆ.13 ರಿಂದ 14ರ ಬೆಳಗ್ಗೆವರೆಗೆ ರಾಜ್ಯದಲ್ಲಿ ನೈರುತ್ಯ ಮಾನ್ಸೂನ್ ಕರಾವಳಿಯಲ್ಲಿ ಸಾಮಾನ್ಯವಾಗಿತ್ತು ಮತ್ತು ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿಯ ಹಲವು ಸ್ಥಳಗಳಲ್ಲಿ ಮತ್ತು ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಳೆಯಾಗಿದೆ.

ಮಳೆಯ ಪ್ರಮಾಣ ನೋಡುವುದಾದರೆ ಕುಮಟಾ (ಉತ್ತರ ಕನ್ನಡ ಜಿಲ್ಲೆ) 3 ಸೆ.ಮೀ, ಮಂಗಳೂರು ವಿಮಾನ ನಿಲ್ದಾಣ ವೀಕ್ಷಣಾಲಯ (ದಕ್ಷಿಣ ಕನ್ನಡ ಜಿಲ್ಲೆ) 2, ಶಿರಾಲಿ ಪಿಟಿಒ (ಉತ್ತರ ಕನ್ನಡ ಜಿಲ್ಲೆ) 2, ಕಾರವಾರ ವೀಕ್ಷಣಾಲಯ (ಉತ್ತರ ಕನ್ನಡ ಜಿಲ್ಲೆ) 1, ಪಣಂಬೂರು ವೀಕ್ಷಣಾಲಯ (ದಕ್ಷಿಣ ಕನ್ನಡ ಜಿಲ್ಲೆ) 1, ಮಂಗಳೂರು (ದಕ್ಷಿಣ ಕನ್ನಡ ಜಿಲ್ಲೆ) 1, ಲೋಂಡಾ (ಬೆಳಗಾವಿ ಜಿಲ್ಲೆ) 1, ಪೊನ್ನಂಪೇಟೆ ಪಿಡಬ್ಲ್ಯೂಡಿ (ಕೊಡಗು ಜಿಲ್ಲೆ) 1, ಶೃಂಗೇರಿ ಎಚ್‌ಎಂಎಸ್ (ಚಿಕ್ಕಮಗಳೂರು ಜಿಲ್ಲೆ) 1 ಸೆ.ಮೀ.ಮಳೆಯಾಗಿದೆ.

Leave a Reply

Your email address will not be published. Required fields are marked *