-ಅರವಿಂದ ಸಿಗದಾಳ್, ಮೇಲುಕೊಪ್ಪ
ಅರಣ್ಯ ಸಂರಕ್ಷಣೆ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಅರಿವಿಲ್ಲದೇ, ಈಗಾಗಲೆ ಇರುವ ಜಾನುವಾರುಗಳಿಗೂ ಅರಣ್ಯ ನಿಷಿದ್ಧ ನಿಯಮವನ್ನು ಮತ್ತಷ್ಟು ಕಠಿಣಗೊಳಿಸಿ ಜಾರಿ ಮಾಡುತ್ತಿದೆ. ಕಸ್ತೂರಿ ರಂಗನ್ ವರದಿ (Kasturirangan Report) ಬಂದ ಮೇಲೆ ಖಾಸಗೀ ಜಮೀನು ಮನೆ ಬಿಟ್ಟು ಉಳಿದೆಲ್ಲ ಸೂಕ್ಷ್ಮ (ESA) ಪ್ರದೇಶಗಳೂ ಮೀಸಲು ಅರಣ್ಯ ಆಗುತ್ತದೆ. ಸೊಪ್ಪಿನ ಬೆಟ್ಟ, ಗೋಮಾಳ, ದರಗಿನ ಹಾಡ್ಯಗಳ ಕಂದಾಯ ಭೂಮಿಗಳನ್ನು ಈಗಾಗಲೆ ಅರಣ್ಯ ಇಲಾಖೆ, ವಕ್ಫ್ ಆಕ್ರಮಣ ರೀತಿಯಲ್ಲೇ ತನ್ನದೆಂದು ನಕ್ಷೆ ಮಾಡಿಕೊಳ್ಳುತ್ತಿದೆ, ಪಹಣಿಗೆ ಸೇರಿಸಿಕೊಳ್ತಾ ಇದೆ.
ಅರಣ್ಯ ಇಲಾಖೆಯಲ್ಲಿ ಬರುವ ESA ಗಳನ್ನು ಮೀಸಲು ಅರಣ್ಯ ಮಾಡಿ ಬೇಲಿ ಹಾಕುವುದು ಅನಿವಾರ್ಯವಾಗಲಿದೆ. ಒಮ್ಮೆ ಮೀಸಲು ಅರಣ್ಯ ಆದರೆ, ಮತ್ತೆ ಯಾವಾಗಲು ಮೀಸಲು ಅರಣ್ಯವೇ. Once Reserve forest, always reserve forest ಅದೊಂಥರ ‘ಒನ್ಸ್ ವಕ್ಫ್ ಆಲ್ವೇಸ್ ವಕ್ಫ್’ ಇದ್ದ ಹಾಗೆ!
ಯಾವ ಜಾನುವಾರುಗಳು ಮೀಸಲು ಅರಣ್ಯ ಪ್ರವೇಶಿಸುವಂತಿಲ್ಲ ಎಂದು ಈಗಾಗಲೆ ಇರುವ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲು, ಕಠಿಣ ಕ್ರಮಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದಾಗಿವೆ. ಪಶ್ಚಿಮಘಟ್ಟದಲ್ಲಿ ಹತ್ತಾರು ದೊಡ್ಡ ಹೈನುಗಾರಿಕೆ, ಗೋಶಾಲೆಗಳು ಸಧ್ಯದಲ್ಲೇ ಮುಚ್ಚಬಹುದು? ಪ್ಲಾಸ್ಟಿಕ್ ಪ್ಯಾಕೇಟಿನ ಯೂರಿಯ ಹಾಲು ಬೇಡ ಅಂತ ಒಂದೆರೆಡು ಜಾನುವಾರು ಕಟ್ಟಿಕೊಂಡು ಒಳ್ಳೆಯ ಹಾಲು ಕುಡಿದು, ಸಾವಯವ ಕೃಷಿ ಮಾಡುವುದಕ್ಕೂ ಇನ್ನು ಸಾಧ್ಯವಿಲ್ಲ ಅನ್ನುವಷ್ಟು ಅರಣ್ಯ ನಿಯಮಗಳು ಕಠಿಣವಾಗಿ ಬರಲಿವೆ.
ಈ ಸುದ್ದಿಯನ್ನೂ ಓದಿ | BPL Ration Card: ಲಕ್ಷಾಂತರ ಬಿಪಿಎಲ್ ರೇಷನ್ ಕಾರ್ಡ್ ರದ್ದು, ಅನರ್ಹರು ಯಾರು?
ಜಾನುವಾರುಗಳನ್ನು ಕಟ್ಟಿ ಸಾಕಬೇಕು. ಭತ್ತ ಬೆಳೆಯುವುದು ನಷ್ಟದಾಯಕವಾದ ಕಾರಣ ಗದ್ದೆಗಳೆಲ್ಲ ಅಡಿಕೆ ತೋಟಗಳಾಗಿವೆ. ಒಣ ಹುಲ್ಲನ್ನು ಬಯಲು ಸೀಮೆಯಿಂದ ‘ಆಮದು’ ಮಾಡಿಕೊಳ್ಳಬೇಕು! ವರ್ಷಕ್ಕೊಂದು ಸಲ, ದೀಪಾವಳಿಯ ಗೋಪೂಜೆ ದಿನ ಅಂಗಳದ ತುದಿ ದೂರ್ವೆ ರೀತಿಯಲ್ಲಿ ಒಂದಿಷ್ಟು ಹಸಿ ಹುಲ್ಲು ಬೆಳೆದಿದ್ದರೆ ಅದನ್ನೇ ಪರಮಾನ್ನ ಅಂತ ಪರಮಾತ್ಮ ಸ್ವರೂಪಿ ದನಗಳಿಗೆ ಕುಯಿದು ಬಡಿಸಬೇಕು!
ಅದರ ಹೊರತಾಗಿ, ಜಾನುವಾರುಗಳಿಗೆ ರಾಸಾಯನಿಕ ಮಿಶ್ರಣದ ವೈಪಿಲ್ಲರ್! ಹಿಂಡಿ ಹಾಕಿ ಸಾಕಬೇಕು! ಅಷ್ಟೆ. ತಿಂದ ಬಯಲು ಸೀಮೆ ಒಣ ಹುಲ್ಲು ಸಗಣಿಯಾಗಿ ಬಂದಷ್ಟನ್ನೇ ‘ಸಾವಯವ ಗೊಬ್ಬರ’ ಮಾಡಿಕೊಂಡು ತೋಟಕ್ಕೆ ಬಳಸಬೇಕು. ಆ ಮುಷ್ಟಿ ಸಗಣಿಯನ್ನು ಗುಂಡಿಗೆ ಹಾಕಿದ ಮೇಲೆ, ದರಗಾಗಲಿ, ಸೊಪ್ಪಾಗಲಿ ತಂದು ಹಾಕಲು ದರಗಿನ ಹಾಡ್ಯಕ್ಕೆ, ಸೊಪ್ಪಿನ ಬೆಟ್ಟಕ್ಕೆ, ಗೋಮಾಳ್ಕೆ ಹೋಗುವಂತಿಲ್ಲ. ಅವೆಲ್ಲ ESA ರಿಸರ್ವ್ ಫಾರೆಸ್ಟ್.
ಈ ಸುದ್ದಿಯನ್ನೂ ಓದಿ | Job News: ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿ ಇರುವ 164 ಹುದ್ದೆಗಳಿಗೆ ಅರ್ಜಿ ಆಹ್ವಾನ
ನಿಯಮಗಳ ಬೇಲಿ!
ದನಗಳನ್ನು ಸಾಕದಂತೆ ಇಷ್ಟೆಲ್ಲ ನಿಯಮಗಳ ಬೇಲಿ ಹಾಕಿದರೆ, ಪಶ್ಚಿಮಘಟ್ಟದ ಯಾವ ಕೃಷಿಕರು ಜಾನುವಾರು ಸಾಕ್ತಾರೆ? ಖಂಡಿತವಾಗಿಯೂ ಸಾಕುವುದಿಲ್ಲ. ಅಕಸ್ಮಾತ್ ಪಶ್ಚಿಮಘಟ್ಟದಲ್ಲಿ ಮನೆ ಕಟ್ಟಿದರೆ (ನೆನಪಿರಲಿ ಪರಿಸರ ಸ್ನೇಹಿ ಮನೆ ಮಾತ್ರ ಕಟ್ಟಬೇಕು!! ಅಂತ ಕಾಂಕ್ರೇಟ್ AC ರೂಮಿನಲ್ಲಿ ಕುಳಿತವರು ಮಲೆನಾಡಿನ ಜನರಿಗೆ, ದನಗಳಿಗೆ ಮಾಡಿದಂತೆ ನಿಯಮ ಮಾಡಿದ್ದಾರೆ. ಪರಿಸರ ಸ್ನೇಹಿ ಮನೆ ಅಂದರೆ ದಶಕಗಳ ಹಿಂದಿನ ದನದ ಕೊಟ್ಟಿಗೆ!!?) ಗೃಹ ಪ್ರವೇಶದ ಗೋ ಪ್ರವೇಶಕ್ಕೆ ಗೋ ಚಿತ್ರ ಇರುವ ಒಂದು ಕ್ಯಾಲೆಂಡರ್ ಹಿಡ್ಕೊಂಡು ಹೊಸಿಲು ದಾಟಬೇಕು!
ಇಲ್ಲಾಂದ್ರೆ ಬಾಗಿಲು ದೊಡ್ಡದು ಇಟ್ಟು ಕಾಡು ಕೋಣಗಳನ್ನೇ ಗೃಹ ಪ್ರವೇಶದ ಮನೆ ಒಳಗೆ ಬಂದು ಹೋಗುವ ಹಾಗೆ ಮಾಡಬೇಕು!