Thursday, 12th December 2024

ಗ್ಯಾರಂಟಿ ಇಡೇರಿಸದಿದ್ದರೆ ಹೋರಾಟ: ಕಾಸುಗೌಡ ಬಿರಾದಾರ ಎಚ್ಚರಿಕೆ

ಇಂಡಿ: ರಾಜ್ಯದ ಜನತೆ ೫ ಗ್ಯಾರಂಟಿ ಯೋಜನೆಗಳು ಜಾರಿಗೆ ತರುವ ವಿಶ್ವಾಸ ವ್ಯಕ್ತಪಡಿಸಿದ್ದು ಚುನಾವಣೆಯ ಪ್ರಚಾರದಲ್ಲಿ ಗ್ಯಾರಂಟಿ ಮಾಡುತ್ತೇವೆ ಎಂದು ರಾಜ್ಯದ ಜನರಿಂದ ಮತಪಡೇದು ದಿನಕ್ಕೊಂದು ಹೇಳಿಕೆ ನೀಡಿದರೆ ರಾಜ್ಯವ್ಯಾಪಿ ಉಗ್ರಹೋರಾಟ ಮಾಡಲಾಗುತ್ತದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಕಾಸುಗೌಡ ಬಿರಾದಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣಾ ಪೂರ್ವ ಗ್ಯಾರಂಟಿಗಳ ಬಗ್ಗೆ ಅಬ್ಬರದ ಪ್ರಚಾರ ಮಾಡಿ ಇಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಅಧಿಕಾರಕ್ಕೆ ಬಂದ ತಕ್ಷಣ ಎಂದಿರುವ ನಾಯಕರು ದಿನ ಕಳೆಯುತ್ತಿದ್ದಾರೆ ಏಕೆ ? ೨೦೦ ಯುನಿಟ್ ಉಚಿತ ವಿದ್ಯುತ ನನಗೂ ನಿಮಗೂ ಎಂದು ವೇದಿಕೆ ಮೇಲಿನ ಗಣ್ಯರಿಗೆ ಹೇಳಿ ಇಂದು ಬಿ.ಪಿ.ಎಲ್.ಎಪಿ.ಎಲ್ ಎಂದು ಸಾರ್ವಜನಿಕರಿಗೆ ಷೆರತ್ತುಗಳು ಹೇರಿ ಮತ್ತೊಂದು ಪ್ರಹಸ ಪ್ರಾರಂಭಿಸಿದ್ದಾರೆ. ಕೂಡಲೆ ನೀವು ಚುನಾವಣಾ ಪೂರ್ವ ಹೇಳಿರುವ ಎಲ್ಲಾ ಗ್ಯಾರಂಟಿಗಳು ಜನರಿಗೆ ಇಡೇರಿಸಬೇಕು ಒಂದು ವೆಳೆ ಇಡೇರಿಸದಿದ್ದರೆ ರಾಜ್ಯ ವ್ಯಾಪಿ ಬಿಜೆಪಿ ಪಕ್ಷದ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.