ಬೆಂಗಳೂರು: ರಾಜ್‌ಗುರು ನಿರ್ದೇಶನದ, ಗೌರಿ ಶಂಕರ್ ನಾಯಕನಾಗಿ ನಟಿಸಿರುವ ‘ಕೆರೆಬೇಟೆ’ ಚಿತ್ರದ (Kerebete Movie) ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಹೌದು, ಕೆರೆಬೇಟೆ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಹಕ್ಕು ಎರಡು ತಿಂಗಳ ಮುಂಚೆಯೇ ಮಾರಾಟವಾಗಿತ್ತು. ಇದೀಗ ಚಿತ್ರದ ಇತರ ಭಾಷೆಯ ಹಕ್ಕುಗಳು ಸೇಲ್ ಆಗಿವೆ. ಒಂದು ಕೋಟಿಗೂ ಅಧಿಕ ಹಣ ನೀಡಿ ಕೆರೆಬೇಟೆ ಚಿತ್ರದ ರೈಟ್ಸ್‌ಗಳನ್ನು ಖರೀದಿ ಮಾಡಲಾಗಿದೆ
ಕೆರೆಬೇಟೆ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಹಕ್ಕು ಎರಡು ತಿಂಗಳ ಮುಂಚೆಯೇ ಮಾರಾಟವಾಗಿತ್ತು. ಇದೀಗ ಹೊಸ ವಿಷಯವೇನೆಂದರೆ ಕೆರೆಬೇಟೆ ಚಿತ್ರದ ತೆಲುಗು, ಮಲಯಾಳಂ, ತಮಿಳು ಡಬ್ಬಿಂಗ್ ರೈಟ್ಸ್ ಹಾಗೂ ಕನ್ನಡ ಅವತರಣಿಕೆಯ ಸ್ಯಾಟಲೈಟ್ ಡಿಜಿಟಲ್ ಹಕ್ಕು ಮಾರಾಟವಾಗಿದೆ. ಒಂದು ಕೋಟಿಗೂ ಅಧಿಕ ಹಣ ನೀಡಿ ಕೆರೆಬೇಟೆ ಚಿತ್ರದ ರೈಟ್ಸ್ ಗಳನ್ನ ಖರೀದಿ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ | Job Guide: ರಾಷ್ಟ್ರೀಯ ಕೆಮಿಕಲ್ & ಫರ್ಟಿಲೈಸರ್ಸ್ ಲಿಮಿಟೆಡ್‌ನಲ್ಲಿದೆ 378 ಹುದ್ದೆ; ಇಂದೇ ಅಪ್ಲೈ ಮಾಡಿ
ʼಕೆರೆಬೇಟೆʼ ಸಿನಿಮಾ ಅಪ್ಪಟ ಹಳ್ಳಿ ಸೊಗಡಿನ ಚಿತ್ರ. ಈ ಸಿನಿಮಾ ಮಾರ್ಚ್ 15ಕ್ಕೆ ರಾಜ್ಯದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿತ್ತು. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿಬಂದಿದ್ದ ಈ ಸಿನಿಮಾ ಮಲೆನಾಡಿನ ಮೀನು ಬೇಟೆ ಸಂಸ್ಕೃತಿಯನ್ನು ಪರಿಚಯಿಸಿತ್ತು. ಸಿನಿಮಾದಲ್ಲಿ ನಾಯಕ ಗೌರಿಶಂಕರ್, ನಾಯಕಿ ಬಿಂದು ಗೌಡ ಜತೆಗೆ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಹರಿಣಿ ಸೇರಿದಂತೆ ಅನೇಕ ದೊಡ್ಡ ಕಲಾವಿದರು ಅಭಿನಯಿಸಿದ್ದಾರೆ.