Friday, 22nd November 2024

Kiccha Sudeep: ದುಬೈನಲ್ಲಿ ‘ಕನ್ನಡ್’ ಎಂದ ಪರಭಾಷಿಕರ ಬಾಯಲ್ಲಿ ‘ಕನ್ನಡ’ ಎಂದು ಹೇಳಿಸಿದ ಕಿಚ್ಚ ಸುದೀಪ್!

Kiccha Sudeep

ಬೆಂಗಳೂರು: ದುಬೈನಲ್ಲಿ ಶನಿವಾರ ಅದ್ಧೂರಿಯಾಗಿ ಸೈಮಾ ಅವಾರ್ಡ್ಸ್‌ 2024 (siima awards 2024) ಕಾರ್ಯಕ್ರಮ ನಡೆದಿದ್ದು, ಸಪ್ತ ಸಾಗರದಾಚೆ ಎಲ್ಲೋ – ಸೈಡ್​​ ಎ ಚಿತ್ರದಲ್ಲಿನ ಪಾತ್ರಕ್ಕಾಗಿ ರಕ್ಷಿತ್ ಶೆಟ್ಟಿ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದು, ಹಾಗೆಯೇ ಅತ್ಯುತ್ತಮ ಕನ್ನಡದ ಚಿತ್ರ ಪ್ರಶಸ್ತಿಯು ಕಾಟೇರ ಚಿತ್ರಕ್ಕೆ ಒಳಿದಿದೆ. ಈ ನಡುವೆ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಆಯೋಜಕರೊಬ್ಬರು, ‘ಕನ್ನಡ್’ ಎಂದು ಹೇಳಿದಾಗ ವೇದಿಕೆಯಲ್ಲಿದ್ದ ನಟ ಸುದೀಪ್ ಅವರು, ಅದು ಕನ್ನಡ್ ಅಲ್ಲ ʼಕನ್ನಡ’ ಎಂದು ಹೇಳಿಕೊಟ್ಟಿರುವುದು ಕಂಡುಬಂದಿದೆ. ಕಿಚ್ಚ ಸುದೀಪ್‌ (Kiccha Sudeep) ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕಾರ್ಯಕ್ರಮದಲ್ಲಿ ಆಯೋಜಕ ವಿಷ್ಣು ಇಂದೂರಿ, ‘ಕನ್ನಡ್’ ಎಂದು ಹೇಳಿದರು. ಈ ವೇಳೆ ವೇದಿಕೆಯಲ್ಲಿದ್ದ ನಟ ಸುದೀಪ್ ಅವರು, ಅದು ಕನ್ನಡ್ ಅಲ್ಲ ಕನ್ನಡ’ ಎಂದು ಅವರಿಗೆ ತಿಳಿಸಿದರು. ಒಂದು ವೇಳೆ ಹಿಂದಿ ಭಾಷಿಗ ಕನ್ನಡ್ ಎಂದರೆ ಒಪ್ಪಿಕೊಳ್ಳಬಹುದು, ಆದರೆ ನೀವು ಹೈದರಾಬಾದ್‌ನವರಾಗಿ ಕನ್ನಡ್ ಎಂದು ಹೇಳುವುದು ನಾಟ್ ಓಕೆ” ಎಂದು ಸುದೀಪ್ ಹೇಳಿದರು. ಇದರಿಂದ ತಕ್ಷಣವೇ ವಿಷ್ಣು ಅವರು ‘ಕನ್ನಡ’ ಎಂದು ಹೇಳಿದರು, ಅದಕ್ಕೆ ಸುದೀಪ್ ಧನ್ಯವಾದ ತಿಳಿಸಿದರು. ವಿದೇಶದಲ್ಲಿ ಪರಭಾಷಿಕರಿಗೆ ಕನ್ನಡ ಪಾಠ ಮಾಡಿದ ಕಿಚ್ಚ ಸುದೀಪ್‌ ಅವರ ಬಗ್ಗೆ ಅಭಿಮಾನಿಗಳು, “ಎಲ್ಲೇ ಹೋದರೂ ನಮ್ಮ ಮಾಣಿಕ್ಯ ಕನ್ನಡತನ ಮರೆಯುವುದಿಲ್ಲ” ಎಂದು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಕಾಟೇರ, ಸಪ್ತಸಾಗರದಾಚೆ ಎಲ್ಲೊ ಸಿನಿಮಾಗೆ ಹಲವು ಪ್ರಶಸ್ತಿಗಳು

ಬೆಂಗಳೂರು: ದಕ್ಷಿಣ ಭಾರತ ಚಿತ್ರರಂಗದಲ್ಲಿ ನೀಡಲಾಗುವ ಪ್ರತಿಷ್ಠಿತ ಸೈಮಾ ಪ್ರಶಸ್ತಿ (SIIMA awards 2024) ಸಮಾರಂಭವು ಶನಿವಾರ ರಾತ್ರಿ ದುಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ದಕ್ಷಿಣ ಭಾರತದ ಸಿನಿಮಾ ಕ್ಷೇತ್ರಗಳಾದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಪ್ರತ್ಯೇಕ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಅಂತೆಯೇ ಸ್ಯಾಂಡಲ್ವುಡ್ ವಿಭಾಗದಲ್ಲಿ ರಕ್ಷಿತ್ಶೆಟ್ಟಿ ಅಭಿನಯದ ಸಪ್ತಸಾಗರದಾಚೆ ಎಲ್ಲೋ ಹಾಗೂ ದರ್ಶನ್ ನಟನೆಯ ಕಾಟೇರಾ ಸಿನಿಮಾಗಳು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡವು.

ಸಪ್ತಸಾಗರದಾಚೆ ಎಲ್ಲೋ ಚಿತ್ರದ ತಮ್ಮ ನಟನೆಗಾಗಿ ರಕ್ಷಿತ್ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರು ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿ ಗೆದ್ದುಕೊಂಡರು. ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲಿ ನಟಿಸಿದ್ದ ಚೈತ್ರಾ ಆಚಾರ್ ತಮ್ಮ ಸುರಭಿ ಪಾತ್ರಕ್ಕಾಗಿ ವಿಮರ್ಶಕರ ಅತ್ಯುತ್ತಮ ನಟಿ ಪ್ರಶಸ್ತಿ ಗಿಟ್ಟಿಸಿಕೊಂಡರು. ಈ ಚಿತ್ರದ ನಿರ್ದೇಶಕ ಹೇಮಂತ್‌ರಾವ್‌ ಅತ್ಯುತ್ತಮ ನಿರ್ದೇಶಕ ಹಾಗೂ ರಮೇಶ್ ಇಂದಿರಾ ಹಾಗೂ ಅತ್ಯುತ್ತಮ ಖಳನಟ ಪ್ರಶಸ್ತಿ ಗಳಿಸಿದರು. ಗೀತೆಗಳಿಗಾಗಿ ಕಪಿಲ್ ಅತ್ಯುತ್ತಮ ಗಾಯಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಕಾಟೇರಾ ಗೂ ಮನ್ನಣೆ

ತಮ್ಮ ಮೊದಲ ಚಿತ್ರ ಕಾಟೇರಾ ಅಭಿನಯಕ್ಕಾಗಿ ಆರಾಧಾನಾ ರಾಮ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಸಂಭ್ರಮಿಸಿದರು. ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದೆ. ಪಸಂದಾಗ್ ಅವ್ನೇ ಗೀತೆ ಆಡಿದ ಮಾಂಗ್ಲಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಹಾಗೂ ವಿ.ಹರಿಕೃಷ್ಣ ಅವರು ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಈ ಸುದ್ದಿಯನ್ನೂ ಓದಿ: Tamannaah Bhatia: ಮೇಕಪ್ ಇಲ್ಲದೆ ಕಾಣಿಸಿಕೊಂಡ ಮಿಲ್ಕ್ ಬ್ಯೂಟಿ ತಮನ್ನಾ; ಹೇಗಿದ್ದಾರೆ ನೋಡಿ…

ಡಾಲಿಗೆ ಡಬಲ್ ಧಮಾಕ

ಅಂತಾರ್ಜಾತಿ ವಿವಾಹವನ್ನು ಕೇಂದ್ರಬಿಂದುವಾಗಿಸಿಕೊಂಡು ನಿರ್ಮಾಣಗೊಂಡಿದ್ದ ಗುರುದೇವ್ ಹೊಯ್ಸಳ ಸಿನಿಮಾದ ನಟನೆಗಾಗಿ ಡಾಲಿ ಧನಂಜಯ್ಗೆ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದ್ದರೆ, ತಾವೇ ನಿರ್ಮಿಸಿದ್ದ ಟಗರುಪಲ್ಯ ಚಿತ್ರದ ಗೀತೆಗಾಗಿ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ಅಲಂಕರಿಸಿದ್ದಾರೆ.

ಪ್ರಶಸ್ತಿಗಳ ವಿವರ:

ಡಾ.ಶಿವರಾಜ್‌ಕುಮಾರ್- ವಿಶೇಷ ಪ್ರಶಸ್ತಿ
ವೃಷಾ ಪಾಟೀಲ್- ಅತ್ಯುತ್ತಮ ಭರವಸೆಯ ನಟಿ- ಲವ್ ಸಿನಿಮಾ
ಶ್ವೇತಪ್ರಿಯ- ಛಾಯಾಗ್ರಹಣ- ಕೈವ
ಅನಿರುದ್ಧ್ ಆಚಾರ್- ಅತ್ಯುತ್ತಮ ಹಾಸ್ಯನಟ- ಆಚಾರ್ ಆ್ಯಂಡ್ ಕೋ

ಟಾಲಿವುಡ್‌ ಪ್ರಶಸ್ತಿ ವಿವರಗಳು

ಅತ್ಯುತ್ತಮ ನಟ-ನಾನಿ 

ಅತ್ಯುತ್ತಮ ನಟಿ- ಕೀರ್ತಿ ಸುರೇಶ್ (ದಸರಾ)

ಅತ್ಯುತ್ತಮ ನಟ (ಕ್ರಿಟಿಕ್)- ಆನಂದ್ ದೇವರಕೊಂಡ (ಬೇಬಿ)

ಅತ್ಯುತ್ತಮ ನಟಿ (ಕ್ರಿಟಿಕ್)- ಮೃಣಾಲ್ ಠಾಕೂರ್ (ಹಾಯ್ ನಾನ್ನ)

ಅತ್ಯುತ್ತಮ ನಿರ್ದೇಶಕ- ಶ್ರೀಕಾಂತ ಒಡೆಲಾ (ದಸರಾ)

ಅತ್ಯುತ್ತಮ ನಿರ್ದೇಶಕ (ಕ್ರಿಟಿಕ್ಸ್)- ಸಾಯಿ ರಾಜೇಶ್ (ಬೇಬಿ)

ಅತ್ಯುತ್ತಮ ವಿಲನ್- ದುನಿಯಾ ವಿಜಯ್ (ಭಗವಂತ ಕೇಸರಿ)

ಅತ್ಯುತ್ತಮ ಗಾಯಕ- ರಾಮ್ ಮಿರಿಯಾಲ (ಬಲಗಂ)

ಅತ್ಯುತ್ತಮ ಪೋಷಕ ನಟ- ದೀಕ್ಷಿತ್ ಶೆಟ್ಟಿ (ದಸರಾ)

ಅತ್ಯುತ್ತಮ ಪೋಷಕ ನಟಿ- ಕಿಯಾರಾ ಖನ್ನಾ (ಹೈ ನಾನ್ನ)

ಅತ್ಯುತ್ತಮ ಹೊಸ ನಿರ್ದೇಶಕ- ಶೌರ್ಯ (ಹೈ ನಾನ್ನ)

ಅತ್ಯುತ್ತಮ ಹೊಸ ನಟ- ಸಂಗೀತ್ (ಮ್ಯಾಡ್)

ಅತ್ಯುತ್ತಮ ಭರವಸೆಯ ನಟ- ಸುಮಂತ್ ಪ್ರಭಾಸ್ (ಮೇಮು ಫೇಮಸ್)

ಅತ್ಯುತ್ತಮ ಹೊಸ ನಟಿ- ವೈಷ್ಣವಿ (ಬೇಬಿ)

ಅತ್ಯುತ್ತಮ ಸಂಗೀತ ನಿರ್ದೇಶಕ- ಹೇಷಮ್ ಅದ್ಬುಲ್ ವಹಾಬ್ (ಹೈ ನಾನ್ನ)

ಅತ್ಯುತ್ತಮ ತೆಲುಗು ಸಿನಿಮಾ- ಭಗವಂತ ಕೇಸರಿ

ಅತ್ಯುತ್ತಮ ಸಾಹಿತ್ಯ- ಅನಂತ್ (ಬೇಬಿ)

ಅತ್ಯುತ್ತಮ ಸಿನಿಮಾಟೊಗ್ರಫರ್- ಭುವನ್ ಗೌಡ (ಸಲಾರ್)

ಅತ್ಯುತ್ತಮ ಹಾಸ್ಯನಟ- ವಿಷ್ಣು (ಮ್ಯಾಡ್)

ವರ್ಷದ ಅತ್ಯುತ್ತಮ ನಿರ್ಮಾಪಕ- ವಿವೈಆರ್​ಎ ಎಂಟರ್ಟೈನರ್ಸ್

ಎಂಟರ್ಟೈನರ್ ಆಫ್​ ದಿ ಇಯರ್- ಶ್ರುತಿ ಹಾಸನ್