ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗುವಿನ ಅಪಹರಣವಾಗಿದ್ದು (Kidnap Case), ಕಂದಮ್ಮನಿಗಾಗಿ ತಾಯಿ ಹಾಗೂ ಅಜ್ಜಿ ಕಣ್ಣೀರು ಹಾಕುತ್ತಿರುವುದು ಕಂಡುಬಂದಿದೆ. ಅಜ್ಜಿ ಪಕ್ಕದಲ್ಲಿ ಮಲಗಿದ್ದ ಮಗು ಎದ್ದಾಗ ಆಟವಾಡಿಸುವ ನೆಪದಲ್ಲಿ ಒಂದು ವರ್ಷದ ಮಗುವನ್ನು ಖದೀಮನೊಬ್ಬ ಕಿಡ್ನ್ಯಾಪ್ ಮಾಡಿದ್ದಾನೆ.
ರಾಮೇಶ್ವರಿ ಎಂಬುವವರ ಮಗು ಅಪಹರಣವಾಗಿದೆ. ಇವರು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ತಾಯಿ ಪದ್ಮಾಗೆ ಚಿಕಿತ್ಸೆಕೊಡಿಸುತ್ತಿದ್ದರು. ಇಬ್ಬರು ಮಕ್ಕಳೊಂದಿಗೆ ರಾಮೇಶ್ವರಿ ಆಸ್ಪತ್ರೆಗೆ ಬಂದು ತಾಯಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ತಾಯಿಯ ಕಫದ ಮಾದರಿ ಪರೀಕ್ಷೆಗೆ ಕೊಡಲು ಹೋದ ವೇಳೆ ಮಗು ಮಲಗಿದೆ ಎಂದು ತಾಯಿ ಬಿಟ್ಟು ಹೋಗಿದ್ದರು. ಈ ವೇಳೆ ಮಗು ಎದ್ದಾಗ ಆಟವಾಡಿಸುವ ನೆಪದಲ್ಲಿ ಮಗುವನ್ನು ಅಪಹರಣ ಮಾಡಲಾಗಿದೆ.
ತನ್ನ ಮಗುವನ್ನು ಹುಡುಕಿಕೊಡಿ ಎಂದು ಗಾಂಧಿ ಚೌಕ್ ಠಾಣೆಯಲ್ಲಿ ತಾಯಿ ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿ ಕಳೆದ ಎರಡು ದಿನಗಳಿಂದ ಜಿಲ್ಲಾಸ್ಪತ್ರೆಯ ವಾರ್ಡ್ನಲ್ಲೇ ಬೀಡು ಬಿಟ್ಟಿದ್ದ ಎನ್ನಲಾಗಿದೆ. ಸಿಸಿ ಕ್ಯಾಮೆರಾ ವಿಡಿಯೊ ಆಧರಿಸಿ ಮಗುವಿನ ಪತ್ತೆಗೆ ಗಾಂಧಿ ಚೌಕ್ ಠಾಣಾ ಪೋಲಿಸರು ಮುಂದಾಗಿದ್ದಾರೆ.
ಈ ಸುದ್ದಿಯನ್ನೂ ಓದಿ | Assault Case: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದು ಪತ್ನಿ ಹೊಡೆದು ತಲಾಕ್ ನೀಡಿದ ಪತಿ, ಸೆರೆ
ಬಾಲಕಿಯನ್ನು ಗರ್ಭಿಣಿ ಮಾಡಿದ ಪಾತಕಿ ಸೋದರಮಾವ ಆರೆಸ್ಟ್!
ಬೆಂಗಳೂರು: ಬೆಂಗಳೂರಿನಲ್ಲಿ 16 ವರ್ಷದ ಬಾಲಕಿಯೊಬ್ಬಳು ಸೋದರ ಮಾವನಿಂದಲೇ ಗರ್ಭಿಣಿಯಾಗಿರುವ ಘಟನೆ (Physical Abuse) ಬೆಂಗಳೂರಿನ (Bengaluru Crime News) ನೆಲಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಬಾಲಕಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಸಮಯಕ್ಕೆ ಸರಿಯಾಗಿ ಮುಟ್ಟು ಆಗಲಿಲ್ಲ ಎಂದು ಮಗಳನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ತಾಯಿ ಕರೆದೊಯ್ದು ತಪಾಸಣೆ ಮಾಡಿಸಿದಾಗ ವೈದ್ಯರು ಬಾಲಕಿ ಗರ್ಭಿಣಿಯಾಗಿರುವುದನ್ನು ತಿಳಿಸಿದ್ದಾರೆ. ವಿಷಯ ತಿಳಿದ ಬಾಲಕಿಯ ತಾಯಿಗೆ ಅಘಾತವಾಗಿದೆ.
ಈ ಕುರಿತು ಬಾಲಕಿಯನ್ನು ವಿಚಾರಿಸಿದಾಗ, ಸೆಪ್ಟೆಂಬರ್ನಲ್ಲಿ ಸೋದರಮಾವ ಮನೆಗೆ ಬಂದಿದ್ದು ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂಬ ವಿಷಯ ಬಹಿರಂಗವಾಗಿದೆ. ಕೂಡಲೇ ಬಾಲಕಿಯ ತಾಯಿಯು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಸದ್ಯ ನೆಲಮಂಗಲ ಪೊಲೀಸರು 30 ವರ್ಷದ ಸೋದರ ಮಾವನನ್ನು ಬಂಧಿಸಿದ್ದಾರೆ. ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ನೆಲಮಂಗಲ ಟೌನ್ ಠಾಣೆಯಲ್ಲಿ ಬಿಎನ್ಎಸ್ ಜೊತೆಗೆ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Assault Case: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದು ಪತ್ನಿ ಹೊಡೆದು ತಲಾಕ್ ನೀಡಿದ ಪತಿ, ಸೆರೆ