ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ಹಾಡಹಗಲೇ ಕಿಡ್ನ್ಯಾಪ್ (kidnap case) ಮಾಡಿರುವ ಘಟನೆ ಮಲ್ಲೇಶ್ವರಂ (Bengaluru Crime news) ಪೈಪ್ ಲೈನ್ ಮಕ್ಕಳ ಮಾರಮ್ಮ ದೇವಸ್ಥಾನದ ಬಳಿ ನಿನ್ನೆ ಬೆಳಗ್ಗೆ 9.20ರ ಸುಮಾರಿಗೆ ನಡೆದಿದೆ. ಸದ್ಯ ಮಗುವನ್ನು ಪೊಲೀಸರು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.
ನಾಪತ್ತೆಯಾಗಿದ್ದ ವೈಯ್ಯಾಲಿಕಾವಲ್ ಮಗು ದೇವಯ್ಯ ಪಾರ್ಕ್ ಬಳಿ ಮಗು ಪತ್ತೆಯಾಗಿದೆ. ಪೊಲೀಸರು ಮಗುವನ್ನ ರಕ್ಷಿಸಿ ಪೋಷಕರಿಗೆ ನೀಡಿದ್ದಾರೆ. ಮಗುವನ್ನು ಕರೆದೊಯ್ದಿದ್ದ ಸುಜಾತ ಎಂಬ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿದೆ. ಸದ್ಯ ಸುಜಾತಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ದಿವ್ಯ ಭಾರತಿ ಹಾಗು ಲೋಕೇಶ್ ದಂಪತಿಯ ಪುತ್ರಿ ನವ್ಯ ಕಿಡ್ನ್ಯಾಪ್ ಆಗಿದ್ದ ಮಗು. ಮೊದಲ ಮಗುವನ್ನ ಶಾಲೆಗೆ ಕಳಿಸಲು ತಾಯಿ ರೆಡಿ ಮಾಡುತ್ತಿದ್ದಳು. ಈ ವೇಳೆ ಎರಡೂವರೆ ವರ್ಷದ ಮಗು ನವ್ಯ ಹೊರಗೆ ಆಟವಾಡ್ತಿದ್ದು ಮನೆ ಬಳಿ ಬಂದ ಅಪರಿಚಿತ ಮಹಿಳೆಯಿಂದ ಮಗು ಕಿಡ್ನ್ಯಾಪ್ ಆಗಿದೆ ಎಂದು ಹೇಳಲಾಗಿತ್ತು.
ಮನೆ ಮುಂದೆ ಆಟವಾಡುತ್ತಿದ್ದ ನವ್ಯಳನ್ನು ಮಾತನಾಡಿಸುತ್ತಲೇ ಆ ಮಹಿಳೆ ಮಗುವನ್ನ ಕರೆದೊಯ್ದಿದ್ದಾಳೆ, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಕ್ಷಣವೇ ಪೋಷಕರು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಮಗುವಿಗಾಗಿ ಪೊಲೀಸರು ಹುಡುಕಾಟ ನಡೆಸಿದರು. ನಂತರ ಮಗು ವೈಯ್ಯಾಲಿಕಾವಲ್‌ನ ದೇವಯ್ಯಪಾರ್ಕ್ ಬಳಿ ಪತ್ತೆಯಾಯಿತು.
ಇದನ್ನೂ ಓದಿ: Viral video: ಬಸ್ ಓಡಿಸುತ್ತಿದ್ದಾಗಲೇ ಬಿಎಂಟಿಸಿ ಚಾಲಕ ಹೃದಯಾಘಾತದಿಂದ ಸಾವು; 50 ಜನರ ಜೀವ ಉಳಿಸಿದ ಕಂಡಕ್ಟರ್