Sunday, 15th December 2024

ಹಿರಿಯ ದೃಶ್ಯ ಮಾಧ್ಯಮ ಪ್ರತಿನಿಧಿ ಕೆ.ಎಂ.ಖಲೀಲ್’ಗೆ ಕರ್ನಾಟಕ ಸಾಧನ ರತ್ನ ಗೌರವ

ಕಾರ್ಕಳ: ಕಿನ್ನಿಗೋಳಿಯ ಯುಗಪುರುಷ ಮತ್ತು ಕಿನ್ನಿಗೋಳಿಯ ಕಥಾಬಿಂದು ಪ್ರಕಾಶನ ಮಂಗಳೂರು ಜಂಟಿಯಾಗಿ ಆಯೋಜಿಸಿರುವ ಕಾವ್ಯ ಸಂಭ್ರಮದಲ್ಲಿ ಕಾರ್ಕಳದ ಹಿರಿಯ ದೃಶ್ಯ ಮಾಧ್ಯಮ ಪ್ರತಿನಿಧಿ ಕೆ.ಎಂ. ಖಲೀಲ್ ಅವರಿಗೆ ಮಾಧ್ಯಮ ಕ್ಷೇತ್ರದ ಸಾಧನೆ ಗಾಗಿ ಕರ್ನಾಟಕ ಸಾಧನ ರತ್ನ ಗೌರವ ನೀಡಲಾಗುತ್ತದೆ ಎಂದು ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ತಿಳಿಸಿದ್ದಾರೆ.

ಜೂ.25ರಂದು ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನ ಮಾಡಲಿರುವರು.

ಖಲೀಲ್ ಅವರು ಕಳೆದ 16 ವರ್ಷಗಳಿಂದ ಮಂಗಳೂರಿನ V4 ಚಾನಲ್ ನಲ್ಲಿ ಕಾರ್ಕಳ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದು ಐದು ವರ್ಷಗಳಿಂದ ಶಿಕ್ಷಣಕ್ಕೆ ಒತ್ತು ಕೊಡುವ ಜಮಿಯುತುಲ್ ಫಲಾ ಉಡುಪಿ ಘಟಕದ ಸಂಸ್ಥೆಯಲ್ಲಿ ಪತ್ರಿಕಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದು 2 ವರ್ಷಗಳಿಂದ ಕಾರ್ಕಳ ಅಂಚಿ ಕಟ್ಟೆ ಮಸೀದಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾರ್ಕಳ ವಲಯದ ಅಧ್ಯಕ್ಷರಾಗಿದ್ದು ಸುಮಾರು 40 ವರ್ಷಗಳಿಂದ ಛಾಯಾ ಗ್ರಾಹಕ ಹಾಗೂ ವಿಡಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.”