Thursday, 19th September 2024

Kodimatha Swamiji: ಮತ್ತೊಂದು ವಯನಾಡ್‌ ಮಾದರಿ ಅನಾಹುತ! ಕೋಡಿಮಠದ ಶ್ರೀಗಳ ಭವಿಷ್ಯವಾಣಿ

Kodimatha Swamiji

ಹಾಸನ: ದೇಶದಲ್ಲಿ ಈ ವರ್ಷ ಮಳೆಯಿಂದ ಇನ್ನಷ್ಟು ತೊಂದರೆ ಇದೆ. ಮಳೆ (rain disaster) ಇನ್ನೂ ಮುಗಿದಿಲ್ಲ. ಭೂಮಿ ಬಿರುಕು ಬಿಡುತ್ತದೆ. ಗುಡ್ಡ (landslide) ಹೋಗುತ್ತದೆ. ಇನ್ನೂ ಅನಾಹುತಗಳು ಸಂಭವಿಸಲಿವೆ ಎಂದು ಹಾರನಹಳ್ಳಿ ಗ್ರಾಮದ ಕೋಡಿಮಠ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ (Kodimatha Swamiji prediction) ನುಡಿದು ಎಚ್ಚರಿಸಿದ್ದಾರೆ.

ಆ ಮೂಲಕ ಅವರು ವಯನಾಡ್‌ ಮಾದರಿಯ ಅನಾಹುತ (wayanad landslide) ಮತ್ತೊಮ್ಮೆ ಸಂಭವಿಸಬಹುದು ಎಂದು ಸೂಚಿಸಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಗ್ರಾಮದ ಕೋಡಿಮಠದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ದೇಶದಲ್ಲಿ ಮಳೆ ಇನ್ನೂ ಮುಕ್ತಾಯವಾಗಿಲ್ಲ. ನಾನು ಈ ಹಿಂದೆ ಪ್ರಾಕೃತಿಕ ದೋಷವಿದೆ ಎಂದು ಹೇಳಿದ್ದೆ. ಅದು ಇನ್ನೂ ಸಂಭವಿಸುತ್ತದೆ. ಈ ಬಾರಿ ಆಕಾಶದಿಂದ ಭಾರಿ ದೊಡ್ಡ ಆಪತ್ತು ಕಾದಿದೆ ಎಂದಿದ್ದಾರೆ.

ಈ ವರ್ಷ ನಮಗೆ ಪ್ರಾಕೃತಿಕ ದೋಷ ಇದೆ. ಮಳೆಯಿಂದ ದೇಶದಲ್ಲಿ ಜಾಸ್ತಿ ತೊಂದರೆ ಇದೆ. ಪಂಚ ಶಕ್ತಿಗಳಿಂದಲೂ ಆತಂಕ ಇದೆ. ಭೂಮಿ, ಅಗ್ನಿ, ವಾಯು, ಆಕಾಶ, ಪ್ರಕೃತಿ ಸೇರಿದಂತೆ ಎಲ್ಲವೂ ಸಂಕಷ್ಟ ನೀಡಲಿವೆ. ಆಕಾಶದಲ್ಲಿ ಉಂಟಾಗುವ ಅನಾಹುತ ಬಾಕಿ ಇದೆ. ಜನ ಇದ್ದಕ್ಕಿದ್ದಂತೆ ಸಾಯುತ್ತಾರೆ. ಭೂಮಿ ಬಿರುಕು ಬಿಡುತ್ತದೆ, ಗುಡ್ಡ ಹೋಗುತ್ತದೆ ಎಂದು ಹೇಳಿದ್ದೆ. ಪ್ರವಾಹದಲ್ಲಿ ಜಗತ್ತಿನಾದ್ಯಂತ ಹಲವು ದೇಶಗಳು ಮುಳುಗುತ್ತವೆ ಎಂದು ಹೇಳಿದ್ದೆ. ಇನ್ನೂ ಮಳೆ ಇದೆ, ಅದರಲ್ಲಿ ಇನ್ನೂ ಅನಾಹುತಗಳು ಸಂಭವಿಸಲಿವೆ ಎಂದು ಶ್ರೀಗಳು ಹೇಳಿದರು.

ಆಕಾಶ ತತ್ವದ ಪ್ರಕಾರ ತೊಂದರೆ ಆಗಬಹುದು. ಆಕಾಶ ತತ್ವವು ರಾಜನ ಮೇಲೆ ದುಷ್ಪ್ರಭಾವ ಬೀರುತ್ತದೆ. ಅಭಿಮನ್ಯುವಿನ ಬಿಲ್ಲಿನ ದಾರವನ್ನು ಮೋಸದಿಂದ ಕರ್ಣನ ಕೈಯಲ್ಲಿ ಕತ್ತರಿಸಿದ. ಮಹಾಭಾರತದಲ್ಲಿ ಕೃಷ್ಣ ಇದ್ದ, ಗದಾಯುದ್ಧದಲ್ಲಿ ಭೀಮ ಗೆದ್ದ. ಇದೀಗ ಕೃಷ್ಣ ಇಲ್ಲ ಹಾಗಾಗಿ ದುರ್ಯೋಧನ ಗೆಲ್ಲುತ್ತಾನೆ. ಸೆಂಟ್ರಲ್, ಸ್ಟೇಟ್‌ನಲ್ಲೂ ಇದೇ ಆಗೋದು. ಆದರೆ ಸರ್ಕಾರಕ್ಕೆ ಏನೂ ತೊಂದರೆ ಆಗಲ್ಲ ಅಂತ ಹೇಳಿದ್ದೇನೆ. ಜಲ, ಅಗ್ನಿ, ಪೃಥ್ವಿ, ವಾಯು ತತ್ವಗಳಿಂದ ತೊಂದರೆ ಆಗುವುದು ತಪ್ಪಿದ್ದಲ್ಲ ಎಂದು ತಿಳಿಸಿದರು.

ಈ ಸುದ್ದಿ ಓದಿ: ವಯನಾಡ್: ಕೇವಲ 16 ಗಂಟೆಗಳಲ್ಲಿ 190 ಅಡಿ ಉದ್ದದ ಸೇತುವೆ ನಿರ್ಮಾಣ