Sunday, 28th April 2024

ಸರ್ವಧರ್ಮ ಸದ್ಭಾವನ ಸಮಾರಂಭ

ಕೊಲ್ಹಾರ: ಸೂಫಿ ಸಂತರಿಂದ ಜಗತ್ತಿನಲ್ಲಿ ಭಾವೈಕ್ಯತೆ ಜೀವಂತವಾಗಿದೆ ಎಂದು ಮಾಜಿ ಕೇಂದ್ರ ಸಚಿವ ರಹಮಾನ್ ಖಾನ್ ಹೇಳಿದರು.

ಕೊಲ್ಹಾರ ಪಟ್ಟಣದ ಖಾನ್ ಕಾಯೇ ಗಫ್ಫಾರೀಯಾ ಗುರುಕುಲದಲ್ಲಿ ಹಮ್ಮಿಕೊಂಡಿದ್ದ ಸರ್ವಧರ್ಮ ಸದ್ಭಾವನ ಸಮಾರಂಭದಲ್ಲಿ ಅಲಹಾಬಾದ್ ಮೌಲಾನ ಭಾವೈಕ್ಯತಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ರಾಜಕೀಯವನ್ನು ಬದಿಗಿಟ್ಟು ಮಾನವ ಕುಲ ಒಂದೇ ಎಂದು ಸಾರುವ ಕೆಲಸವಾಗಬೇಕಿದೆ ಎಂದು ಹೇಳಿದರು.

ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಮಾತನಾಡುತ್ತಾ ಭಾವೈಕ್ಯತೆ ಬೆಳೆಸುವಲ್ಲಿ ಇಂತಹ ಕಾರ್ಯ ಕ್ರಗಳು ಪ್ರಮುಖ ಪಾತ್ರ ವಹಿಸುತ್ತವೆ, ದೇಶದಲ್ಲಿ ನಾವುಗಳು ಪರಸ್ಪರ ಅಣ್ಣತಮ್ಮಂದಿರಂತೆ ಬದುಕಬೇಕಿದೆ. ಶರಣರ, ಸೂಫಿಸಂತರ ದ್ಯೆಯೋದ್ದೇಶ ಮಾನವ ಕುಲದ ಉದ್ಧಾರವಾಗಿದೆ ಎಂದು ಹೇಳಿದರು.

ಹಜರತ್ ಸೈಯ್ಯದ ಮೊಹಮ್ಮದ ತನ್ವೀರ್ ಹಾಶ್ಮಿ ಮಾತನಾಡುತ್ತಾ ಪ್ರಸ್ತುತ ಭಾವೈಕ್ಯತೆ ಸಾರಲು ಗಣನೀಯವಾಗಿ ಶ್ರಮಿಸಬೇಕಿದೆ, ಹಬ್ಬ ಹರಿದಿನಗಳಲ್ಲಿ ಪರಸ್ಪರರು ಪಾಲ್ಗೊಳ್ಳುವ ಮೂಲಕ ಏಕತೆಗೆ ನಾಂದಿ ಹಾಡಬೇಕು ಎಂದು ಹೇಳಿದರು.

ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಮಾತನಾಡುತ್ತ ಸೂಫಿ ಪರಂಪರೆಯನ್ನು ಡಾ.ಬಕ್ತಿಯಾರ್ ಖಾನ್ ಪಠಾಣ ಪ್ರಚೂರಪಡಿಸುತ್ತಾ ಭಾವೈಕ್ಯತೆ ಸಾರುತ್ತಿರುವುದು ಅನುಕರಣ ಯ ಎಂದು ಹೇಳಿದರು.

ಡಾ.ಶಿವಲಿಂಗ ಮುರುಗರಾಜೇಂದ್ರ, ಚಿತ್ತರಗಿಯ ಡಾ.ಬಸವಲಿಂಗ ಸ್ವಾಮಿಜಿ, ಶೀಲವಂತ ಹಿರೇಮಠದ ಕೈಲಾಸನಾಥ ಸ್ವಾಮಿಜಿಗಳು, ಬೇಲೂರು ಮಠದ ಪ್ರಭುಕುಮಾರ ಸ್ವಾಮಿಜಿಗಳು, ಮಾಜಿ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್, ಬಸನಗೌಡ ಪಾಟೀಲ್, ಹುಮಾಯುನ್ ಸುತಾರ್ ಮಾತನಾಡಿದರು.

ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಉಸ್ಮಾನ್ ಪಟೇಲ ಖಾನ್, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಆರ್.ಬಿ ಪಕಾಲಿ, ಅಂಜುಮನ್ ಕಮೀಟಿ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪುರ, ಪ.ಪಂ ಸದಸ್ಯ ಸಿ.ಎಸ್ ಗಿಡ್ಡಪ್ಪಗೋಳ ಇತರರು ಇದ್ದರು.

error: Content is protected !!