Thursday, 19th September 2024

KPSC AEE Recruitment: 42 ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ನೇಮಕಾತಿಯ ಮಾಹಿತಿ ಇಲ್ಲಿದೆ

KPSC AEE Recruitment

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದದ 30 ಹಾಗೂ ಹೈದರಾಬಾದ್‌ ಕರ್ನಾಟಕ ವೃಂದದ 12 ಸೇರಿ ಒಟ್ಟು 42 ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಗ್ರೇಡ್-1) ಗ್ರೂಪ್ ‘ಎ’ ಹುದ್ದೆಗಳಿಗೆ (KPSC AEE Recruitment) ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ ಮುಖಾಂತರ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅ. 3ರಿಂದ ಅರ್ಜಿ ಸಲ್ಲಿಕೆ ಆರಂಭ ಆಗಲಿದ್ದು, ಅರ್ಜಿ ಸಲ್ಲಿಕೆಗೆ ನ. 4 ಕೊನೆಯ ದಿನಾಂಕವಾಗಿದೆ. ಆಯೋಗವು ಅಭ್ಯರ್ಥಿಗಳಿಗೆ ಒಂದು ಬಾರಿ ತಂತ್ರಾಂಶದ ಮುಖಾಂತರ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಿದ್ದು, ಅಭ್ಯರ್ಥಿಗಳೇ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿ ವಿವರ

ಹುದ್ದೆಯ ಹೆಸರು: ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (Assistant Executive Engineer)
ಹುದ್ದೆಗಳ ಸಂಖ್ಯೆ: ಉಳಿಕೆ ಮೂಲ ವೃಂದ 30+ಹೈ.ಕ. ವೃಂದ 12
ಇಲಾಖೆಯ ಹೆಸರು: ಲೋಕೋಪಯೋಗಿ ಇಲಾಖೆ
ವೇತನ ಶ್ರೇಣಿ: 83,700- 1,55,200 ರೂ.

ವಯೋಮಿತಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಈ ಕೆಳಕಂಡ ಕನಿಷ್ಠ ವಯೋಮಿತಿ ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿ ಮೀರಿರಬಾರದು.

  • ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ- 21 ವರ್ಷ
  • ಸಾಮಾನ್ಯ ಅಭ್ಯರ್ಥಿಗಳು- ಗರಿಷ್ಠ 35 ವರ್ಷ
  • ಪ್ರವರ್ಗ 2ಎ, 2ಬಿ, 3ಎ, 3 ಬಿ- ಗರಿಷ್ಠ 38 ವರ್ಷ
  • ಎಸ್‌ಸಿ, ಎಸ್‌ಟಿ, ಪ್ರವರ್ಗ 1 : ಗರಿಷ್ಠ 40 ವರ್ಷ

ವಿದ್ಯಾರ್ಹತೆ:
ಸಿವಿಲ್ ಎಂಜಿನಿಯರಿಂಗ್ ಅಥವಾ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ ಅಥವಾ
ಬಿಲ್ಡಿಂಗ್ ಆ್ಯಂಡ್ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ ಅಥವಾ ಸಿವಿಲ್ ಎಂಜಿನಿಯರಿಂಗ್ ಆ್ಯಂಡ್ ಪ್ಲಾನಿಂಗ್ ಅಥವಾ
ಸಿವಿಲ್ ಟೆಕ್ನಾಲಜಿ ಅಥವಾ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ ಅಥವಾ
ಕನ್‌ಸ್ಟ್ರಕ್ಷನ್ ಎಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ಅಥವಾ ಜಿಯೋಮೆಕ್ಯಾನಿಕ್ಸ್‌ & ಸ್ಟ್ರಕ್ಚರ್ ಅಥವಾ
ಸ್ಟ್ರಕ್ಚರಲ್ ಆ್ಯಂಡ್ ಫೌಂಡೇಷನ್ ಎಂಜಿನಿಯರಿಂಗ್ ಅಥವಾ
ಸ್ಟ್ರಕ್ಚರಲ್ ಎಂಜಿನಿಯರಿಂಗ್ ಮತ್ತು ಕನ್‌ಸ್ಟ್ರಕ್ಷನ್‌ ಪದವಿಯನ್ನು ನವದೆಹಲಿಯ ಎಐಸಿಟಿಇಯಿಂದ ಮಾನ್ಯತೆ ಪಡೆದ ಭಾರತದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು ಅಥವಾ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ (ಇಂಡಿಯಾ) ನೀಡಿದ ಡಿಪ್ಲೊಮಾ, ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ (ಇಂಡಿಯಾ)ನ ಅಸೋಸಿಯೇಟ್ ಮೆಂಬರ್‌ಶಿಪ್‌ ಪರೀಕ್ಷೆಯ (ಸಿವಿಲ್ ಅಥವಾ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಎಂಜಿನಿಯರಿಂಗ್‌ನಲ್ಲಿ) ಪಾರ್ಟ್‌ ಎ ಮತ್ತು ಬಿ ಉತ್ತೀರ್ಣರಾಗಿರಬೇಕು.

ಈ ಸುದ್ದಿಯನ್ನೂ ಓದಿ | Job Guide: 250 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ NTPC; ಅಪ್ಲೈ ಮಾಡುವ ವಿಧಾನ ಇಲ್ಲಿದೆ

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳಿಗೆ- 600 ರೂ.
  • ಪ್ರವರ್ಗ 2ಎ, 2ಬಿ, 3ಎ, 3 ಬಿ- 300 ರೂ.
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ-50 ರೂ.
  • ಎಸ್‌ಸಿ, ಎಸ್‌ಟಿ, ಪ್ರವರ್ಗ 1, ವಿಶೇಷ ಚೇತನ ಅಭ್ಯರ್ಥಿಗಳಿವೆ: ಶುಲ್ಕ ವಿನಾಯಿತಿ

ನೇಮಕಾತಿ ವಿಧಾನ
ಕರ್ನಾಟಕ ಲೋಕೋಪಯೋಗಿ ಇಲಾಖೆಯ ಗ್ರೂಪ್-ಎ ವೃಂದದ ಹುದ್ದೆಗಳ ನೇಮಕಾತಿಯು ಲಿಖಿತ ಪರೀಕ್ಷೆ (Writtern Exam) ಮತ್ತು ವ್ಯಕ್ತಿತ್ವ ಪರೀಕ್ಷೆ (Personality Test) ಗಳು ಸೇರಿ 02 ಹಂತಗಳನ್ನು ಒಳಗೊಂಡಿದ್ದು, ವಿವರಗಳು ಈ ಕೆಳಕಂಡಂತಿವೆ;

ಸ್ಪರ್ಧಾತ್ಮಕ ಪರೀಕ್ಷೆ:

(ಎ) ಕನ್ನಡ, ಇಂಗ್ಲಿಷ್, ಸಾಮಾನ್ಯ ಜ್ಞಾನ ಮತ್ತು ತಾಂತ್ರಿಕ ವಿಷಯಗಳ ಲಿಖಿತ ಪರೀಕ್ಷೆ
(ಬಿ) ವ್ಯಕ್ತಿತ್ವ ಪರೀಕ್ಷೆಯನ್ನು ಒಳಗೊಂಡಿರುತ್ತದೆ

ಲಿಖಿತ ಪರೀಕ್ಷೆ ಹೇಗಿರುತ್ತದೆ?

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುದ್ದೆಗಳ ಅಧಿಸೂಚನೆಗೆ ಇಲ್ಲಿ ಕ್ಲಿಕ್‌ ಮಾಡಿ
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಚಭೇಟಿ ನೀಡಿ

Leave a Reply

Your email address will not be published. Required fields are marked *