Friday, 13th December 2024

ಜನರ ಆಶೀರ್ವಾದಿಂದ ಗೆದ್ದೇ ಗೆಲುತ್ತೇವೆ: ಕೃಷ್ಣೇಗೌಡ

ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಅಂತಿಮ ಕ್ಷಣದವರೆಗೂ ಆ ಆಸೆ ನನ್ನ ಮನದಲ್ಲಿತ್ತು. ಆದರೆ ಪಕ್ಷ ನಮಗೆ ನಿರಾಸೆ ಮಾಡಿತು. ಟಿಕೆಟ್ ನೀಡುವ ಭರವಸೆ ನೀಡಿ ದ್ರೋಹ ಮಾಡಿದರು. ನಾನು ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿ ನಿಂತಿದ್ದೆ ಟಿಕೆಟ್ ತಪ್ಪಲು ಪ್ರಮುಖ ಕಾರಣವಾಗಿದೆ. ಅದರ ಜತೆಗೆ ಹಣವೂ ಕಾರಣವಾಯಿತು.

ಸಿದ್ದರಾಮಯ್ಯ ಅವರಿಗೆ ನಮ್ಮ ಕುಟುಂಬದ ಬಗ್ಗೆ ಅಪಾರ ಗೌರವವಿದೆ. ನಮ್ಮ ಮನೆಗೂ ಬಂದು ಟಿಕೆಟ್ ಕೊಡಿಸುವ ಆಶ್ವಾಸನೆ ನೀಡಿದ್ದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿಕು ಮಾರ್ ಜಗಳದಲ್ಲಿ ನಾವು ಬಲಿಪಶುವಾದೊ. ಟಿಕೆಟ್ ಕೈ ತಪ್ಪಿತು. ಕೃಷ್ಣೇಗೌಡ ಶಾಸಕ ರಾದರೆ ಡಿಕೆಶಿ ಸಿ.ಎಂ ಆಗಲು ಬೆಂಬಲ ನೀಡುವುದಿಲ್ಲ ಎಂಬುದೇ ಇದಕ್ಕೆ ಕಾರಣ.

ಕರ್ನಾಟಕದ ಎಲ್ಲಾ ಕ್ಷೇತ್ರಗಳಿಗೂ ಟಿಕೆಟ್ ಘೋಷಿಸಿದ್ದರೂ ನಮ್ಮ ಕ್ಷೇತ್ರವನ್ನು ಮಾತ್ರ ಹಾಗೆ ಉಳಿಸಿಕೊಳ್ಳಲಾಯಿತು. ಟಿಕೆಟ್ ನೀಡುವುದಾಗಿ ಹೇಳಿ ನಮ್ಮನ್ನು ಕರೆಸಿಕೊಂಡ ಡಿಕೆಶಿ, ಪೊಲೀಸ್ ಅಧಿಕಾರಿ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಪಡೆದು ಅವರಿಗೆ ಟಿಕೆಟ್ ನೀಡಿದರು.

ಈ ಕ್ಷೇತ್ರದಲ್ಲಿ ನೆಲಕಚ್ಚಿದ್ದ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು ನಾವು. ಇಷ್ಟಾದರೂ ಟಿಕೆಟ್ ಸಿಗಲಿಲ್ಲವಲ್ಲ ಎಂಬ ಅಸಮಾಧಾನ ನಮ್ಮಲ್ಲಿತ್ತು. ನಮ್ಮ ಕ್ಷೇತ್ರದ ಜನ ಪಕ್ಷೇತರವಾಗಿಯೇ ಸ್ಪರ್ಧಿಸಲು ಸೂಚಿಸಿದರು. ನಾಮಪತ್ರ ವಾಪಾಸು ಪಡೆಯಲು ನಮ್ಮ ಜನ ಒಪ್ಪಲಿಲ್ಲ. ಚುನಾವಣೆಯಲ್ಲಿ ಸ್ಫರ್ಧಿಸಲು ಒತ್ತಾಯಿಸಿದರು. ಬೆಂಬಲಿಸಿ, ಉತ್ಸಾಹ ತುಂಬಿದರು. ಈಗ ಅವರೇ ಗೆಲ್ಲಿಸುವ ನಿರ್ಧಾರ ಮಾಡಿದ್ದಾರೆ. ಆರಂಭದಲ್ಲಿದ್ದ ಉತ್ಸಾಹ ಈಗ ದುಪ್ಪಟ್ಟಾಗಿದೆ.