ಬೆಂಗಳೂರು : ಈಗಾಗಲೇ ಶಬರಿಮಲೆಯಲ್ಲಿ ಅಯ್ಯಪ್ಪನ (Sabarimale swamy ayyappa) ದರ್ಶನ ಪ್ರಾರಂಭವಾಗಿದ್ದು, ಭಕ್ತರು ಸಾಗರೋಪಾದಿಯಲ್ಲಿ ಜಮಾಯಿಸುತ್ತಿದ್ದಾರೆ. ಡಿಸೆಂಬರ್‌ನಿಂದ ಜನವರಿವರೆಗೆ ಕರ್ನಾಟಕದಿಂದ ಶಬರಿಮಲೆಗೆ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸುತ್ತಾರೆ. ಈ ಬಾರಿ ಭಕ್ತರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಗುಡ್ ನ್ಯೂಸ್ ನೀಡಿದ್ದು, ಇನ್ನು ಮುಂದೆ ಬೆಂಗಳೂರಿನಿಂದ ಶಬರಿಮಲೆ ಯಾತ್ರೆ ಸುಗಮವಾಗಲಿದೆ.
ಭಕ್ತರಿಗೆ ಅನುಕೂಲಕರವಾಗುವಂತೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ಸೇವೆಯನ್ನು ಆರಂಭಿಸಿದೆ. ರಾಜಧಾನಿ ಬೆಂಗಳೂರಿನಿಂದ ಕೇರಳದ ವರೆಗೆ ಇನ್ನು ಐರಾವತ ವೋಲ್ವೋ ಬಸ್‌ಗಳು ಸಂಚರಿಸಲಿವೆ. ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 29 ನವೆಂಬರ್‌ರಿಂದ ಬೆಂಗಳೂರು ಮತ್ತು ಕೇರಳದ ಪಂಪೆ ನಡುವೆ ಬಸ್ ಸಂಚಾರ ಆರಂಭವಾಗಿದೆ ಎಂದು ತಿಳಿಸಿದೆ.
ಎಲ್ಲಿಂದ ಸಂಚಾರ :
ನವೆಂಬರ್ 29ರಿಂದ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣ ಮತ್ತು ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಪ್ರತಿನಿತ್ಯ ಬಸ್ ಸೇವೆ ಆರಂಭವಾಗಿದೆ. ನಿತ್ಯ ಮಧ್ಯಾಹ್ನ 1.50 ಕ್ಕೆ ಶಾಂತಿ ನಗರದಿಂದ ಬಸ್ ಹೊರಡಲಿದ್ದು, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮಧ್ಯಾಹ್ನ 2. 20 ಕ್ಕೆ ಹೊರಟು ಮರುದಿನ ಬೆಳಿಗ್ಗೆ 06:45 ಕ್ಕೆ ನಿಲಕ್ಕಲ್ ಬಸ್ ನಿಲ್ದಾಣವನ್ನು ತಲುಪುತ್ತದೆ. ಅದೇ ದಿನ ಸಂಜೆ 6 ಗಂಟೆಗೆ ಶಬರಿಮಲೆನ ನಿಗದಿತ ಸ್ಥಳದಿಂದ ಪ್ರಯಾಣ ಆರಂಭಿಸಿ ಮರುದಿನ ಬೆಳಗ್ಗೆ 10 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ. ಎಂದು ಸಾರಿಗೆ ನಿಮಗದ ಅಧಿಕಾರಿಗಳು ತಿಳಿಸಿದ್ದಾರೆ.
ಆನ್‌ಲೈನ್ ಟಿಕೆಟ್ ಬುಕಿಂಗ್
ಪ್ರಯಾಣಿಕರು ಆನ್‌ಲೈನ್ ಕೂಡ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದ್ದು, ಕೆಎಸ್‌ಆರ್‌ಟಿಸಿ ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಟಿಕೆಟ್‌ಗಳು ಲಭ್ಯವಾಗಲಿದೆ. ಅಲ್ಲದೇ ನೆರೆಯ ರಾಜ್ಯಗಳಲ್ಲಿನ ಖಾಸಗಿ ಬುಕಿಂಗ್ ಕೌಂಟರ್‌ಗಳಲ್ಲದೆ, ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಬುಕಿಂಗ್ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಒಬ್ಬರಿಗೆ 1,750 ರೂ ಟಿಕೆಟ್ ದರ ನಿಗದಿ ಮಾಡಲಾಗಿದೆ.
ಈ ಮೊದಲು ಡಿಸೆಂಬರ್ 1 ರಿಂದ ಕೆಸ್‌ಆರ್‌ಟಿಸಿ ರಾಜಹಂಸ ಬಸ್ಸುಗಳು ಸಂಚರಿಸುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದರು. ಈ ಬಗ್ಗೆ ಮಾತನಾಡಿದ್ದ ಅವರು ವಿಶ್ವ ವಿಖ್ಯಾತ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗುವ ಯಾತ್ರಾರ್ಥಿಗಳಿಗೆ ಬೆಂಗಳೂರಿನಿಂದ ವೋಲ್ವೋ, ರಾಜಹಂಸ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ :Road Accident: ಕೆಎಸ್‌ಆರ್‌ಟಿಸಿ ಬಸ್‌ಗೆ ಟಿಪ್ಪರ್ ಡಿಕ್ಕಿ; ಬಸ್ಸಿಂದ ಕೆಳಗೆ ಬಿದ್ದ ಮಹಿಳೆಗೆ ಗಂಭೀರ ಗಾಯ