Thursday, 12th December 2024

ಸ್ವಾತಂತ್ರö್ಯ ನೀಡಿದ ಮಹನೀಯರನ್ನು ಗೌರವಿಸಿ: ಕುಸುಮ ಜಗದೀಶ್

ಹರಪನಹಳ್ಳಿ: ಅಹಿಂಸೆಯ ಮತ್ತು ಸತ್ಯಾಗ್ರಹದ ಮೂಲಕವೇ ಸ್ವಾತಂತ್ರö್ಯವನ್ನು ತಂದು ಕೊಡುವಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ದೇಶದ ಉನ್ನತಿಗಾಗಿ ಶ್ರಮಿಸಿದ ಮಹಾತ್ಮ ಗಾಂದೀಜಿಯವರ0ತ ಮಹನೀಯರನ್ನು ನೆನೆಯೋಣ ಎಂದು ತರಳಬಾಳು ಪ್ರೌಢಶಾಲೆ, ಮತ್ತು ಪ್ರಾಥಮಿಕ ಶಾಲೆಯ ಸಂಸ್ಥೆಯ ಕಾರ್ಯದರ್ಶಿ ಕುಸುಮ, ಜಗದೀಶ್ ಹೇಳಿದರು.

ಪಟ್ಟಣದ ತರಳಬಾಳು ವಿಧ್ಯಾಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತಿç ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಅರ್ಫಿಸಿ ಬಳಿಕ ಶಾಲೆಯ ಆವರಣದಲ್ಲಿ ಶಿಕ್ಷಕರ ಜೊತೆಗೂಡಿ ಸ್ವಚ್ಚತಾ ಕಾರ್ಯವನ್ನು ಆರಂಬಿಸಿ ತದನಂತರ ಮಾತನಾಡಿದ ಅವರು, ದೇಶಕ್ಕಗಿ ಸ್ವಾತಂತ್ರö್ಯ ತಂದು ಕೊಟ್ಟ ಮಹನೀಯರ ಅನುಯಾಯಿಗಳಾಗಿ ಆದರ್ಶ ಬದುಕನ್ನು ಕಟ್ಟಿಕೊಳ್ಳಬೇಕು , ಎಂದು ಶಿಕ್ಷಕರಿಗೆ ತಿಳಿ ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ನಂಜಪ್ಪ, ರವಿಕುಮಾರ್, ಮತ್ತು ಸಿಬ್ಬಂಧಿಗಳು ಹಾಜರಿದ್ದರು.