ನಿರುದ್ಯೋಗಿಗಳ ಪಾಲೀನ ಸಂಜೀವಿನಿ ನರೇಗಾ ಯೋಜನೆ
ಪಾವಗಡ : ತಾಲ್ಲೂಕಿನ ರಾಜವಂತಿ ಗ್ರಾಮದಲ್ಲಿ ನೆರೇಗಾ ಯೋಜನೆಯಲ್ಲಿ ಹತ್ತು ಲಕ್ಷ ವೆಚ್ಚದಲ್ಲಿ ಕಲ್ಯಾಣಿ ನಿರ್ಮಾಣ ಕಾಮಗಾರಿ ವೀಕ್ಷಿಸಿ ನಂತರ ನೆರೇಗಾ ಯೋಜನೆಯಲ್ಲಿ ಮೂರು ಲಕ್ಷದ ವೆಚ್ಚದಲ್ಲಿ ಸ್ಮಶಾನದಲ್ಲಿ ಗಿಡನೆಟ್ಟುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
ನಂತರ ವೆಂಕಟಪುರ, .ಸಿಕೆ ಪುರ, ಪಳವಳ್ಳಿ ಗ್ರಾಮಗಳಿಗೆ ಬೇಟಿ ನೀಡಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ನೆರೇಗಾ ಕಾಮಗಾರಿಯನ್ನು ವೀಕ್ಷಣೆ ಮಾಡಿದ ವೇಳೆ ಮಾತನಾಡಿದರು.
ನಂತರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಿದರು ಕೊರೊನಾ ಲಾಕ್‌ಡೌನ್ ಪರಿಣಾಮ ನಗರ-ಪಟ್ಟಣದಿಂದ ಗ್ರಾಮೀಣಕ್ಕೆ ಬಂದಿರುವ ನಿರುದ್ಯೋಗಿಗಳಿಗೆ ನರೇಗಾ ಯೋಜನೆ ಉದ್ಯೋಗ ಸಂಜೀವಿನಿ ಆಗಿದೆ. ಪಾವಗಡ ತಾಪಂ ಇಓ ಮತ್ತು 34 ಗ್ರಾಪಂ ಪಿಡಿಓಗಳು ನರೇಗಾ ಯೋಜನೆಯ ಅರಿವು ಮೂಡಿಸಿ ನಿರುದ್ಯೋಗಿ ಕಾರ್ಮಿಕರಿಗೆ ಮತ್ತು ರೈತರಿಗೆ ಉದ್ಯೋಗ ಸೃಷ್ಟಿಸಬೇಕಿದೆ ಎಂದು ಕರ್ನಾಟಕ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೂಚನೆ ನೀಡಿದರು.
ಯಾವುದೇ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಕೆಲಸ ಮಾಡಿದರೆ ಅದು ಬಗ್ಗೆ ಹರಿಸಲು ನಾಲ್ಕು ಐದು ವರ್ಷ ಅಗುತ್ತದೆ. ಗ್ರಾಮೀಣ ರೈತಾಪಿವರ್ಗ ಮತ್ತು ಕಾರ್ಮಿಕರ ನಿರುದ್ಯೋಗ ನಿವಾರಣೆಗೆ ನರೇಗಾ ಯೋಜನೆ ಸಹಕಾರಿ ಆಗಿದೆ. ಯಂತ್ರಗಳ ಮೂಲಕ ನರೇಗಾ ಕಾಮಗಾರಿಗೆ ಅವಕಾಶವಿಲ್ಲ. ಕಾಮಗಾರಿಗೆ ಜೆಸಿಬಿ ಬಳಸಿದರೇ ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿದೆ. ರೈತಾಪಿವರ್ಗ ೪೦ಕ್ಕೂ ಹೆಚ್ಚಿನ ವೈಯಕ್ತಿಕ ಕಾಮಗಾರಿ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಲು ಅವಕಾಶವಿದೆ. ನರೇಗಾದ ಉದ್ಯೋಗಕ್ಕೆ ಮಿತಿಯೇ ಇಲ್ಲ. ಕಾಮಗಾರಿ ನಡೆದಷ್ಟು ಅನುಧಾನ ಲಭ್ಯವಿದೆ ಎಂದು ತಿಳಿಸಿದರು.
ಅಂತರ್ಜಲ ಚೇತನ ಯೋಜನೆಗೆ ಚಾಲನೆ
ತಾಲ್ಲೂಕಿನ ಪಾತ್ರದಲ್ಲಿ ಮಳೆನೀರು ಹರಿಯುವ ಮೂಲವನ್ನು ಗುರುತಿಸಿ ಮಳೆ ನೀರನ್ನು ತಡೆಹಿಡಿಯುವ ಉದ್ದೇಶದಿಂದ ಚೆಕ್‌ಡ್ಯಾಂ ನಿರ್ಮಿಸಿ ನೀರನ್ನು ಇಂಗಿಸಿ ಭೂಮಿಯ ಅಂರ್ತಜಲ ಸಾಮಾರ್ಥವನ್ನು ಹಚ್ಚಿಸುವ ಯೋಜನೆಯಾದ ಅಂತಃಜಲ ಚೇತನ ಯೋಜನೆಗೆ ಸರಕಾರದ ಮುಖ್ಯ ಕಾರ್ಯದರ್ಶಿ ಅತೀಕ್ ಚಾಲನೆ ನೀಡಿದರು. ಕರ್ನಾಟಕದ ೧೧ಜಿಲ್ಲೆಗಳಲ್ಲಿ ಆರ್ಟ್ ಆಪ್ ಲಿವೀಂಗ್ ಸಹಯೋಗದೊಂದಿಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅಂತಃಜಲ ಚೇತನ ಯೋಜನೆ ಅನುಷ್ಠಾನಗೊಳಿಸಲಾಗಿದೆ.
ಇನ್ನೂಳಿದ ಅನುಧಾನ ಸರಕಾರದಿಂದ ಬಿಡುಗಡೆ ಗೊಳಿಸುತ್ತೇನೆ. ಪಾವಗಡ ಗ್ರಾಮದ ಉರ್ದುಶಾಲೆ, ಅಂಗನವಾಡಿ ಕೇಂದ್ರ ಮತ್ತು ಸರಕಾರಿ ಶಾಲೆಗಳ ಕಟ್ಟಡದ ಅಭಿವೃದ್ದಿಗೆ ಸಹಕಾರ ನೀಡುತ್ತೇನೆ. ಗಡಿ ಭಾಗವಾದ ಪಾವಗಡ ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ನನ್ನ ಸಂಪೂರ್ಣ ಸಹಕಾರ ಇರಲಿದೆ ಎಂದು ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಅತೀಕ್ ಸ್ಥಳೀಯರಿಗೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತುಮಕೂರು ಜಿಪಂ ಸಿಇಓ ಡಾ.ವಿಧ್ಯಾಕುಮಾರಿ, ಜಿಪಂ ಉಪಕಾರ್ಯದರ್ಶಿ ಅತೀಕ್‌ಪಾಷ, ಅಂತರ್ಜಲ ಚೇತನದ ರಾಜ್ಯ ನಿರ್ದೆಶಕ ನಾಗರಾಜ ಗಂಗೂಳ್ಳಿ, ಕೃಷ್ಣನಾಯ್ಕ, ಸಹಾಯಕ ಕಾರ್ಯದರ್ಶಿ ನಾಗರಾಜು, ಪಾವಗಡ ತಹಶೀಲ್ದಾರ್ ಕೆ.ಆರ್.ನಾಗರಾಜ್. ಜಿಲ್ಲಾ ಪಂಚಾಯಿತಿ ಎಇಇ ಮಂಜುನಾಥ್ ತಾಪಂ ಇಓ ಶಿವರಾಜಯ್ಯ, ಸೇರಿದಂತೆ ಇತರರು ಇದ್ದರು.