Friday, 13th December 2024

ಕಾರ್ಮಿಕ ವರ್ಗ ಸಂಘಟಿತವಾಗಬೇಕು: ರಾಘವೇಂದ್ರ ಎಮ್.ಜಿ

ಶಹಾಬಾದ್‌: ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರಂತರವಾದ ಜನ ವಿರೋಧಿ, ಕಾರ್ಮಿಕ ವಿರೋಧಿ, ಬಂಡವಾಳ ಶಾಹಿ ಪರ ನೀತಿಗಳಿಂದಾಗಿ ದುಡಿಯುವ ಜನರ ಬದುಕು ಅತ್ಯಂತ ಸಂಕಷ್ಟಕ್ಕಿಡಾಗಿದ್ದು, ಅಸರ್ಮಪಕ ಕೊವಿಡ್ ನಿರ್ವಹಣೆ ಬಳಿಕ ಪರಿಸ್ಥಿತಿ ಗಂಭೀರವಾಗಿದೆ ಎಂದು ಆಲ್ ಇಂಡಿ ಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಕಾರ್ಮಿಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಎಮ್ ಜಿ ಅವರು ಹೇಳಿದರು.

ಶಹಾಬಾದ ನಗರದಲ್ಲಿ ಕಾರ್ಮಿಕ ಸಂಘಟನೆಯಿಂದ ಹಮ್ಮಿಕೊಂಡಿದ್ದ, ಅಖಿಲ ಭಾರತ ಕಾರ್ಮಿಕರ  ಮುಷ್ಕರದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

1991 ರಲ್ಲಿ ಜಾರಿಗೆ ಬಂದ ಹೊಸ ಆರ್ಥಿಕ ಕೈಗಾರಿಕೆಗಳ ಮುಂದುವರಿಕೆಯಿಂದಾಗಿ ಇಂದಿನ ಕೇಂದ್ರ ಸರಕಾರ ರೈಲ್ವೆ, ಬ್ಯಾಂಕ್, ತೈಲ, ಬಿ.ಎಸ್.ಎನ್.ಎಲ್, ವಿಮಾನ, ರಸ್ತೆ ಸಾರಿಗೆ ಎಲ್ಲವನ್ನೂ ಖಾಸಗೀಕರಣ ಗೊಳಿಸುತ್ತಿದ್ದು, ಇದರಿಂದ ಕೆಲವೇ ಕಾರ್ಪೊರೇಟ್ ಮನೆತನಗಳು ಹಣ ಸಂಪಾದಿಸುತ್ತಿವೆ. ದುಡಿಯುವ ಜನ ನಿರುದ್ಯೋಗ, ಹಸಿವು, ಬಡತನ, ಬೆಲೆ ಏರಿಕೆಯಿಂದಾಗಿ ಹತಾಶೆಗೊಂಡಿ ದ್ದಾರೆ. ಇದನ್ನೆಲ್ಲ ಮರೆಮಾಚಲು ಜನರಲ್ಲಿ ಜಾತಿ, ಕೋಮು, ಧಾರ್ಮಿಕತೆ ಕುರಿತು ತಂದಿಡುವ ಪ್ರಯತ್ನ ನಡೆಯುತ್ತಿದ್ದು, ಕಾರ್ಮಿಕ ವರ್ಗ ಪ್ರಜ್ಞಾವಂತಿಕೆ ಯಿಂದ ಇದೆಲ್ಲವನ್ನೂ ಮೀರಿ ವ್ಯವಸ್ಥೆಯ ಬದಲಾವಣೆಗೆ ಸಂಘಟಿತ ಹೋರಾಟವನ್ನು ನಡೆಸಬೇಕೆಂದು ಕರೆ ನೀಡಿದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ ಅವರು ಮಾತನಾಡಿ, ಅಂಗನವಾಡಿ, ಆಶಾ, ಬಿಸಿ ಊಟದ ಕಾರ್ಮಿಕರು ಕನಿಷ್ಠ ಸಂಬಳದಲ್ಲಿ ಹಲವಾರು ವರ್ಷಗಳಿಂದ ದುಡಿಯು ತ್ತಿದ್ದಾರೆ. ಕೂಡಲೇ ಅವರನ್ನು ಸರಕಾರಿ ನೌಕರರು ಎಂದು ಪರಿಗಣಿಸಬೇಕೆಂದು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಆರ್.ಕೆ.ಎಸ್ ಜಿಲ್ಲಾಧ್ಯಕ್ಷ ಗಣಪತ್ ರಾವ್ ಮಾನೆ, ಎಐಡಿವೈಓ ಜಿಲ್ಲಾ ಉಪಾಧ್ಯಕ್ಷ ಸಿದ್ದು ಚೌದರಿ, ಐ.ಎನ್.ಟಿ ಲ್.ಯು.ಸಿ ಶಹಾಬಾದ ಅಧ್ಯಕ್ಷ ಚಂದು ಜಾದವ್, ಶಹಾಬಾದ ಅಧ್ಯಕ್ಷ ಉಬೆದುಲ್ಲಾ ಅವರು ಮಾತನಾಡಿದರು.

ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಶಹಾಬಾದ ಅಧ್ಯಕ್ಷ ಶೇಖಮ್ಮ ಕುರಿ ವಹಿಸಿ ದ್ದರು.

ಶಹಾಬಾದ ನಗರದ ರೈಲ್ವೆ ನಿಲ್ದಾಣದಿಂದ ನೆಹರು ಚೌಕ್ ವರೆಗೂ ಪ್ರತಿಭಟನೆ ಮೇರ ವಣಿಗೆ ನಡೆಸಿ ಬಳಿಕ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಪ್ರವಿಣ್ ಬಣೆಮಿಕರ್, ತಿಮ್ಮಯ್ಯ ಬಿ ಮಾನೆ, ರಾಜೇಂದ್ರ ಅತನೂರು, ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್ ಕೆ, ಎಐಎಮ್ಎಸ್ಎಸ್ ಅಧ್ಯಕ್ಷ ಮಹಾದೇವಿ ಮಾನೆ, ಲಕ್ಷ್ಮಣ ದೇವಕರ, ಲಕ್ಷ್ಮಿ ಪುತಿನ, ನಾಗಮ್ಮ ಭಂಕೂರ, ಸಂಪತ್‌ಕುಮಾರಿ, ಸೇರಿ ಆಶಾ, ಅಂಗನವಾಡಿ, ಬಿಸಿ ಊಟ, ಕಾರ್ಯಕರ್ತೆತರು ವಸತಿ ನಿಲಯ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು ನೂರಾರೂ ಸಂಖ್ಯೆಯಲ್ಲಿ ಭಾಗವಹಿಸಿದ್ದರು.