ಇಂಡಿ: ಸದ್ಯೆ ಮತಕ್ಷೇತ್ರದಲ್ಲಿ ಈ ಬಾರಿ ಸಂಪೂರ್ಣ ಮಳೆ ಕಳೆದುಕೊಂಡು ಬರಗಾಲ ಸಂಭವಿಸಿದೆ ರೈತರು, ಸಾರ್ವಜನಿಕರು ಕಂಗಾಲಾಗಿದ್ದಾರೆ.
ಮಾತ್ರವಲ್ಲದೆ ಡಿಶೇಂಬರ್. ಜನೆವರಿಯವರೆಗೂ ಯಾವುದೇ ನೀರಿನ ತೊಂದರೆಯಾಗುವುದಿಲ್ಲ.ಆದರೆ ನಂತರ ದಿನಗಳಲ್ಲಿ ಜನ ,ಜಾನುವಾರಗಳಿಗೆ ಕುಡಿಯುವ ನೀರಿನ ತೊಂದರೆಯಾಗುವ ಸಂಭವ ಇರುತ್ತದೆ.ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚು ಗ್ರಾಮ ಪಂಚಾಯತ ಅಧಿಕಾರಿಗಳು ಜನರಿಗೆ ಶುದ್ದಕುಡಿಯುವ ನೀರು ಸಮಸ್ಯಯಾಗದಂತೆ ಮುತುವರ್ಜಿ ವಹಿಸಬೇಕು ಇದಕ್ಕೆ ತಾಲೂಕಾ,ಜಿಲ್ಲಾಢಳಿತ ಸಂಪೂರ್ಣ ಸಹಕಾರ ನೀಡಿ ಎಂದು ಶಾಸಕ ಹಾಗೂ ಕರ್ನಾಟಕ ಸರಕಾರ ವಿಧಾನ ಸಭೆಯ ಅಂದಾಜು ಯೋಜನಾ ಸಮಿತಿ ಅಧ್ಯಕ್ಷ ಯಶವಂತ ರಾಯಗೌಡ ಪಾಟೀಲ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ಮಿನಿವಿಧಾನಸೌಧಾ ಆವರಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಕೆ.ಡಿ.ಪಿ ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದ ಅವರು ಈ ಬಾರಿ ಬರಗಾಲ ಇರುವದರಿಂದ ಬರಗಾಲಕ್ಕೆ ಸಂಬAಧಪಟ್ಟ ಇಲಾಖೆಗಳು ಪೂರ್ವ ತಯಾರಿಯಲ್ಲಿರಬೇಕು. ವಿಶೇಷವಾಗಿ ೪ ಯೋಜನೆಗಳ ಬಗ್ಗೆ ಕಾಳಜಿವಹಿಸಿ ಈ ಯೋಜನೆಯಲ್ಲಿ ಇರುವ ಲೋಪದೋಷ ಸರಿಪಡಿಸಲು ಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಶಾಸಕರು ಚರ್ಚಿಸಿದರು.
೧೯೭೨ರಕ್ಕಿಂತ ಅಧೀಕ ಭೀಕರ ಬರಗಾಲ ಸಂಭವಿಸಿದೆ ರೈತಾಪಿ ವರ್ಗ ತೊಂದರೆಯಲ್ಲಿದ್ದಾರೆ. ಬರಗಾಲ ಸಂಭAದಿಸಿದAತೆ ಕೇಂದ್ರ ತಂಡಪರಿಶೀಲನೆ ಮಾಡಿದೆ. ಮತಕ್ಷೇತ್ರದ ಬಗ್ಗೆ ಅಧಿಕಾರಿಗಳು ಹಾನಿಯಾದ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ ಯಾವುದೇ ರೀತಿಯಿಂದ ರೈತರಿಗೆ ತೊಂದರೆಯಾಗದAತೆ ಸರ್ವೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿ. ನೀರನ್ನು ಉಪಯೋಗಿಸುವ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸಿ, ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿವೆ ಅವಶ್ಯ ಇರುವ ಕಡೆ ಕ್ರಮಕೈಗೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಹಳ್ಳಿಗಳಿಗೆ ಈ ೪೦ ದಿನಗಳವರೆಗೆ ಕುಡಿಯುವ ನೀರಿನ ಯಾವುದೇ ಸಮಸ್ಯ ಆಗುವುದಿಲ್ಲಫೆ. ಪ್ರಥಮ ಹಂತದಲ್ಲಿ ಕೆರೆಗಳಿಗೆ ನೀರು ಹರಿಸಬೇಕು , ಲಚ್ಯಾಣ ಶೆ,೬೦ರಷ್ಟು ನೀರು ಇರುವರಿಂದ ಸಮಸ್ಯೆ ಬರುವುದಿಲ್ಲ. ಸಂಗೋಗಿ ಕೆರೆಗೆ ನೀರು ಬರುವುದು ಬಂದ ಆಗಿದೆ ಭೀಮಾನದಿಗೆ ನೀರು ಬಂದರೆ ಸಮಸ್ಯ ಇರುವುದಿಲ್ಲ,ವಸ್ತಿ ಪ್ರದೇಶಗಳಿಗೆ ಮುಂದಿನ ತಿಂಗಳು ಸಮಸ್ಯೆ ಆಗುತ್ತದೆ ಎಂದು ಪಿ.ಆರ್ .ಡಿ ಅಧಿಕಾರಿ ಎಸ್. ಆರ್ ರುದ್ರವಾಡಿ ಸಭೆಯಲ್ಲಿ ತಿಳಿಸಿದರು .ನೋಡಿ ಮುಂಬರುವ ದಿನಗಳಲ್ಲಿ ಎಸ್ಸಿ ನೈತೃತ್ವದಲ್ಲಿ ತುರ್ತು ಅಧಿಕಾರಿಗಳ ಸಭೆ ಕರೆಯಿರಿ ಸೋಲಾಪೂರ ಡಿ.ಸಿಯವರಿಗೆ ಸಭೆಯ ಪ್ರೋಸಾಯಿಡಿಂಗ್ ರವಾನೆ ಮಾಡಿ ಹಾಗೂ ಪ್ರತಿ ೧೫ ದಿನಕ್ಕೋಮ್ಮೆ ಟಾಸ್ಕ್ ಪೂರ್ಸ ಸಭೆ ಕರೆಯಲು ತಾ.ಪಂ ಅಧಿಕಾರಿ ಬಾಬುರಾವ್ ರಾಠೋಡ ಇವರಿಗೆ ಶಾಸಕ ಯಶವಂತ ರಾಯಗೌಡ ಪಾಟೀಲ ಹೇಳಿದರು.
ಮತಕ್ಷೇತ್ರದಲ್ಲಿ ಕೃಷಿಚಟುವಟಿಕೆಗಳ ಬಗ್ಗೆ ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ ಇವರಿಂದ ಮಾಹಿತಿ ಕೇಳಿದರು ಈ ಸಂಧರ್ಬದಲ್ಲಿ ಅಧಿಕಾರಿ ಸಭೆಯಲ್ಲಿ ತಾಲೂಕಿನಾದ್ಯೆಂತ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿರುವದರಿಂದ ಜೋಳ, ಕಡ್ಲಿ ಬಿತ್ತನೆಯಾದರೂ ಕೂಡಾ ಇಳುವರಿ ಬರುವ ಸಾಧ್ಯೆ ಇಲ್ಲ.ತೋಟಗಾರಿಕೆ ಬೆಳೆಗಳಿಗೂ ಕೂಡಾ ನೀರಿನ ಕೊರತೆಯಾಗಿದ್ದು ಲಿಂಬೆ ,ದಾಳಿಂಬೆ, ದ್ರಾಕ್ಷಿಯಂತಹ ಬೆಳೆಗಳು ಹಾನಿಯಾಗುವ ಸಾಧ್ಯೆ ಇದೆ. ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಸುಮಾರು ೫೬೦ ಹೆಕ್ಟರ್ ಲಿಂಬೆ ಮತ್ತು ೪೧೦ ಹೆಕ್ಟರ್ ದ್ರಾಕ್ಷಿ ಬೆಳೆ ಹಾನಿಯಾಗುವ ಹಂತದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಆಹಾರ ವಿತರಣೆ ಮಾಡಬೇಕು. ಖಾಲಿ ಹುದ್ದೆಗಳನ್ನು ಸರಕಾರ ನಿಯಮಾನುಸಾರವಾಗಿ ತುಂಬಿಕೊಳ್ಳಿ. ಸರ್ಮಪಕ ನಿರ್ವಹಣೆ ಮಾಡದಿದ್ದರೆ ಅಂತಹವರ ಮೇಲೆ ಶಿಸ್ತುಕ್ರಮಕೈಗೊಳ್ಳಿ ಎಂದು ಶಾಸಕರು ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲ್ಯಾಂಡ್ ಆರ್ಮಿ ,ಕಾರ್ಮಿಕ ಇಲಾಖೆ ,ರೇಷ್ಮೇ ಇಲಾಖೆ ಸ್ವಂತ ಕಟ್ಟಗಳು ಇರುವುದಿಲ್ಲ ಇವುಗಳಿಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಕೆಡಿಪಿ ಸಭೆಗೆ ಗೈರಾದ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್ ಕೊಡಿ ಎಂದು ಖಡಕ್ಕಾಗಿ ಸೂಚನೆ ನೀಡಿದರು. ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ಕೆ.ಡಿ.ಪಿ ಸಭೆಗೆ ಗೈರು ಉಳಿದಿದ್ದಾರೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ತಾ.ಪಂ ಅಧಿಕಾರಿಗೆ ಶಾಸಕರು ಸೂಚಿಸಿದರು. ಘಟನೆಗಳ ಬಗ್ಗೆ ವಸ್ತು ಸ್ಥಿತಿ ಬಗ್ಗೆ ವೈದ್ಯರಿಗೆ ಕೇಳಿದರೆ ವೈಧ್ಯಾಧಿಕಾರಿಗಳಿಂದ ಸರಿಯಾದ ಸ್ಪಷ್ಟನೆ ಇರುವುದಿಲ್ಲ ತಪ್ಪಿಸ್ಥರಿಗೆ ಶಿಕ್ಷೆ ಏನಾಗಿದೆ? ಎಂಬುದರ ಮಾಹಿತಿ ಕೇಳಿದರು.ಇದಾದ ನಂತರ ವಿವಿಧ ಇಲಾಖೆಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಪರಿಹಾರ ಸೂಚಿಸಿದರು.
ಎ.ಸ್ಸಿ ಅಬೀದ ಗದ್ಯಾಳ , ಜಿಲ್ಲಾ ಪಂಚಾಯತ ಯೋಜನಾಧಿಕಾರಿ ವಿಜಯಕುಮಾರ ಅಜೂರ, ತಾಲೂಕಾ ಪಂಚಾಯತ ಅಧಿಕಾರಿ ಬಾಬುರಾವ್ ರಾಠೋಡ, ಡಿ.ವಾಯ್.ಎಸ್ಪಿ ಜಗದೀಶ,ತಹಶೀಲ್ದಾರ ಬಿ.ಎಸ್ ಕಡಕಭಾವಿ, ಕೆಬಿಜೆಎನ್‌ಎಲ್ ಅಧಿಕಾರಿ ಮನೋಜಕುಮಾರ ಗಡಬಳ್ಳಿ, ಎಸ್.ಆರ್ ರುದ್ರವಾಡಿ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ,ಕ್ಷೇತ್ರ ಶಿಕ್ಷಣಾಧಿಕಾರಿ.ಟಿ.ಎಸ್ ಆಲಗೂರ, ಅಂಬೇಡ್ಕರ ನಿಗಮ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ರೇಣುಕಾ , ತೋಟಗಾರಿಕೆ ಅಧಿಕಾರಿ ಎಸ್.ಎಸ್ ಪಾಟೀಲ, ಸಮಾಜ ಕಲ್ಯಾಣಾಧಿಕಾರಿ ಬಿ.ಜೆ ಇಂಡಿ, ಲ್ಯಾಂಡ್ ಆರ್ಮಿ ಅಧಿಕಾರಿ ರಾಜಶೇಖರ ಹೂಗಾರ, ಹೆಸ್ಕಾಂ ಅಧಿಕಾರಿ ಎಸ್.ಬಿ ಮೇಡೇಗಾರ, ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿ ಗೀತಾ ಗುತ್ತರಗಿಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.