Wednesday, 6th November 2024

ಕ್ಲಬ್‌ಹೌಸ್ ಮೂಲಕ ಕನ್ನಡ ಜನಪ್ರಿಯಗೊಳಿಸೋಣ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 43

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್

ಬೆಂಗಳೂರು: ಕನ್ನಡದ ’ವಿಶ್ವವಾಣಿ ಕ್ಲಬ್‌ಹೌಸ್’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ. ಕ್ಲಬ್‌ಹೌಸ್‌ನಲ್ಲಿ ಕನ್ನಡಿಗರು ಹೆಚ್ಚು ಭಾಗವಹಿಸುವಿಕೆ ಮೂಲಕ ನಮ್ಮ ಭಾಷೆಯನ್ನು ಇನ್ನಷ್ಟು ಜನಪ್ರಿಯಗೊಳಿಸೋಣ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ತಿಳಿಸಿದರು.

ಇಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ಚಿಂತಕ ಸದ್ಗುರು ಅವರ ಸಂವಾದದ ಸ್ವಾರಸ್ಯಗಳ ಕುರಿತು ಶುಕ್ರವಾರ ನಡೆದ ’ವಿಶ್ವವಾಣಿ ಕ್ಲಬ್‌ಹೌಸ್’ನಲ್ಲಿ ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಕೇಳುಗರ ಮನಸ್ಸಿನಲ್ಲಿ ತುಂಬಿದರು. ಈ ವೇಳೆ ಮಾತನಾಡಿದ ಅವರು, ಹಿಂದಿಯಲ್ಲಿ ಕ್ಲಬ್‌ಹೌಸ್ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ.

ಮಲೆಯಾಳಿ ಭಾಷೆಯ ಕ್ಲಬ್‌ಹೌಸ್ ಭಾರತದಲ್ಲಿ ಜನಪ್ರಿಯವಾಗಿದೆ. ಕನ್ನಡದ ಜನರಿಗೆ ಉತ್ತಮ ವಿಷಯ ಕೊಟ್ಟರೆ ಹೆಚ್ಚಾಗಿ ಭಾಗವಹಿಸುತ್ತಾರೆ. ಕ್ಲಬ್‌ಹೌಸ್ ಮೂಲಕ ಕನ್ನಡದ ಭಾಷೆ ಇನ್ನಷ್ಟು ಬೆಳೆಸೋಣ ಎಂದರು. ಸದ್ಗುರು ಅವರು ಅದ್ಭುತ ಭಾಷಣಕಾರರು, ಆದರೆ ಒಂದು ವಿಷಯದ ಮೇಲೆ ಸುದೀರ್ಘವಾಗಿ ಮಾಡನಾಡುವುದಕ್ಕಿಂತ, ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುತ್ತಾರೆ. ಅವರು ಅನೇಕ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಎಂಟು ಮಂದಿಯ ತಂಡದಿಂದ ಮಾಹಿತಿ ಸದ್ಗುರುಗಳ ಎಂಟು ಮಂದಿಯನ್ನೊಳಗೊಂಡ ತಂಡ ಕಾರ್ಯವೈಖರಿ ನಿಜಕ್ಕೂ ಮೆಚ್ಚುವಂತಹದು. ಸದ್ಗುರುಗಳನ್ನು ಕ್ಲಬ್‌ಹೌಸ್‌ಗೆ ಕರೆಯುವ ಮುನ್ನ ಸಾಕಷ್ಟು ಪ್ರಶ್ನೆಗಳ ಜತೆಗೆ ಕ್ಲಬ್‌ಹೌಸ್‌ನ ಸಂಪೂರ್ಣ ಮಾಹಿತಿ ಪಡೆಯಿತು ಆ ತಂಡ. ಬಳಿಕ ಕ್ಲಬ್‌ಹೌಸ್‌ನಲ್ಲಿ ಸದ್ಗುರುಗಳು ಮಾತನಾಡುವ ಸಂದರ್ಭದಲ್ಲಿ ಕಾರ್ಯಕ್ರಮದ ವಿವರಣೆಯ ಮಾಹಿತಿ ಪಡೆಯುತ್ತಿದ್ದರು. ಹಾಗೆಯೇ ಭಾಗವಹಿಸಿದ್ದ ಗಣ್ಯರ ಬಗ್ಗೆ ಮಾಹಿತಿ ನೀಡಲಾಯಿತು. ನಿಜಕ್ಕೂ ಅವರ ತಂಡ ನಿರ್ವಹಣೆ ಅದ್ಭುತವಾದುದು ಎಂದು ವಿಶ್ವೇಶ್ವರ ಭಟ್ ಅವರು ಸದ್ಗುರುಗಳ ತಂಡದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಲಬ್ ಹೌಸ್ ಕಾರ್ಯವೈಖರಿ ಹೀಗಿರಲಿ?
? ಕ್ಲಬ್‌ಹೌಸ್‌ನಲ್ಲಿ ತಂಡವಾಗಿ ಕೆಲಸ ಮಾಡುವುದು ಉತ್ತಮ.
? ಕ್ಲಬ್‌ಹೌಸ್‌ನ ಬ್ಯಾಕ್ ರೂಮ್‌ನಲ್ಲಿ ಗಣ್ಯರ ಸಂದೇಶಗಳನ್ನು ಪರಿಗಣಿಸಬೇಕು.

? ಕ್ಲಬ್‌ಹೌಸ್‌ನಲ್ಲಿ ಉಪನ್ಯಾಸದ ಜತೆ ಹಾಡುವುದು ಸರಿಯಾದ ಕ್ರಮವಲ್ಲ. ಹಾಡುಗಳನ್ನು ಕೇಳುವ ಕಾರ್ಯಕ್ರಮಗಳಲ್ಲಿ ಮಾತ್ರ ಹಾಡುಗಾರಿಕೆ ಇರಬೇಕು.
? ಪ್ರಶ್ನೆ ಕೇಳುವವರನ್ನು ಮೊದಲೇ ನಿರ್ಧಾರ ಮಾಡುವ ಮೂಲಕ ತಾಂತ್ರಿಕ ಲೋಪವಾಗದಂತೆ ತಡೆಯಬಹುದು.
? ಪ್ರತಿ ಸಲ ಹತ್ತು ಜನ ಕ್ಲಬ್‌ಹೌಸ್‌ನಿಂದ ಹೊರ ಹೋದಾಗ ಶಫಲ್ ಆಗುತ್ತದೆ. ಹೈಸ್ಪೀಡ್ ವೈಫೈ ಇದ್ದರೂ ತುಂಬಾ ಜನ ಕ್ಲಬ್‌ಹೌಸ್‌ನಲ್ಲಿ ಸೇರಿಕೊಂಡಾಗ ಸ್ವಲ್ಪ ಅಡಚಣೆ ಉಂಟಾಗುತ್ತದೆ.

? ಓವರ್- ರೂಮ್ ಅನ್ನು ಆಪರೇಟ್ ಮಾಡಿದರೆ ಕೇಳುಗರ ಭಾಗವಹಿಸುವಿಕೆ ಹೆಚ್ಚಿಸಬಹುದು.
? ಪ್ರಶ್ನೆ ವಿಷಯಾಂತರ ಮಾಡುವುದರಿಂದ ಸೂಕ್ತ ಉತ್ತರ ಸಿಗುವುದಿಲ್ಲ.