Monday, 16th September 2024

ಹಸಿರು ಪಟಾಕಿ ಮಾರಾಟಕ್ಕೆ ಲೈಸೆನ್ಸ್ ಇಂದಿನಿಂದ ಆರಂಭ

ಬೆಂಗಳೂರು : ಹಸಿರು ಪಟಾಕಿ ಮಾರಾಟಕ್ಕೆ ಇಂದಿನಿಂದ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಸಿರು ಪಟಾಕಿ ಮಾರಾಟ ಹಾಗೂ ಮಾರಾಟಕ್ಕೆ ಪರವಾನಗಿ ಪಡೆಯೋದಕ್ಕೆ ಇಂದಿನಿಂದ ಆರಂಭವಾಗಲಿದೆ.

ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಹಸಿರು ಪಟಾಕಿ ಮಾರಾಟಕ್ಕೆ ಲೈಸೆನ್ಸ್ ಆರಂಭವಾಗಿದೆ. ಹಸಿರು ಪಟಾಕಿ ಯನ್ನಷ್ಟೇ ಮಾರಾಟ ಮಾಡಬೇಕು. 5 ದಿನ ಪಟಾಕಿ ಮಾರಾಟಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ ಎಂಬುದಾಗಿ ಆದೇಶದಲ್ಲಿ ತಿಳಿಸಿದೆ.

ಇನ್ನೂ ಹಸಿರು ಪಟಾಕಿ ಮಾರಾಟಕ್ಕೆ ಮಾರಾಟಗಾರಿಗೆ ಲೈಸೆನ್ಸ್ ನೀಡಲು ಬಿಬಿಎಂಪಿ, ಪೊಲೀಸ್ ಇಲಾಖೆಗೆ ಅವಕಾಶ ನೀಡಿದೆ. ಬೆಂಗಳೂರಿನ 60 ಮೈದಾನಗಳಲ್ಲಿ ಮಾತ್ರವೇ ಹಸಿರು ಪಟಾಕಿ ಮಾರಾಟಕ್ಕೆ ಸೂಚಿಸಿರುವ ಸರ್ಕಾರ, ಸಿಲಿಕಾನ್ ಸಿಟಿಯಲ್ಲಿ 458 ಹಸಿರು ಪಟಾಕಿ ಮಾರಾಟ ಮಳಿಗೆ ತೆರೆಯಲು ಲೈಸೆನ್ಸ್ ನೀಡಬೇಕು ಎಂಬುದಾಗಿ ರಾಜ್ಯ ಸರ್ಕಾರ ಸೂಚಿಸಿದೆ.

ಹಸಿರು ಪಟಾಕಿ ಮಾರಾಟ ಮಾಡುವಾಗ, ಖರೀದಿಸುವಾಗ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಪಟಾ ಕಿಯ ಬಾಕ್ಸ್ ಮೇಲೆ ಕಡ್ಡಾಯವಾಗಿ ಗ್ರೀನ್ ಫೈರ್ ಬಾಕ್ಸ್ ಎಂಬುದಾಗಿ ಮುದ್ರೆಯಿರಬೇಕು ಎಂಬುದಾಗಿಯೂ ತಿಳಿಸಿದೆ. ಈ ಮೂಲಕ ಇಂದಿನಿಂದ ರಾಜ್ಯದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

Leave a Reply

Your email address will not be published. Required fields are marked *