Thursday, 12th December 2024

ಡಿಕೆ ಶಿವಕುಮಾರ್ ಅವರಿಗೆ ಬೇರೆ ಮಾರ್ಗದಿಂದ ಹೋಗಲು ಹೇಳಿದ್ದು ಸರಿಯಲ್ಲ: ಬಸನಗೌಡ

ಸಿಂಧನೂರು:  ಮಸ್ಕಿ ಕಾರ್ಯಕ್ರಮದ ನಿಮಿತ್ಯ ಸೋಮವಾರ ಜಿಲ್ಲೆಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಯುವ ಕಾಂಗ್ರೆಸ್ ದಿಂದ ಸಿಂಧನೂರು ನಲ್ಲಿ ಅದ್ದೂರಿ ಸ್ವಾಗತ ಏರ್ಪಡಿಸಲಾಗಿತ್ತು. ಆದರೆ ಅವರಿಗೆ ಬೇರೆ ಮಾರ್ಗ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರು ತೋರಿಸಿದ್ದಾರೆ ಇದು ಸರಿಯಲ್ಲ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಆರೋಪಿಸಿದರು.

ತಮ್ಮ ಕಚೇರಿಯಲ್ಲಿ ಮಂಗಳವಾರ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಹಂಪನಗೌಡ ಬಾದರ್ಲಿ ಅವರು 40 ವರ್ಷದ ರಾಜಕೀಯ ಅನುಭವ ಇದ್ದವರು. ಕೆಪಿಸಿಸಿ ಅಧ್ಯಕ್ಷರಿಗೆ ಅದ್ದೂರಿಯಾಗಿ ಸ್ವಾಗತಿಸುವ ಸಿದ್ಧತೆ ಹಂಪನಗೌಡ ಬಾದರ್ಲಿ ಮಾಡಬಹುದಾಗಿತ್ತು. ಯಾಕೆ ಮಾಡಿಲ್ಲ ? ಯುವಕರು ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು ಆದರೆ ಅವರಿಗೆ ಬೇರೆ ಮಾರ್ಗದ ಕಡೆಗೆ ಮತ್ತೊಬ್ಬರನ್ನು ಹಿಡಿದುಕೊಂಡು ಹೋಗುವಂತೆ ಕೆಲಸ ಮಾಡಿದ್ದಾರೆ.

ಯಾರೇ ಏನೇ ಮಾಡಲಿ ನಾವು ನಿರಾಶೆ ಹೊಂದುವ ಮಾತೇ ಇಲ್ಲ. ನಮ್ಮನ್ನು ಮತದಾರರು ಕಾಯುತ್ತಾರೆ ಅವರೇ ನಮಗೆ ದೇವರು ಎಂದರು. ಈ ಸಂದರ್ಭದಲ್ಲಿ ಶಿವಕುಮಾರ್ ಜವಳಿ, ದಾಕ್ಷಾಯಿಣಿ, ವೆಂಕಟೇಶ್ ರಾಗಲಪರ್ವಿ, ಖಾಜಾ ಹುಸೇನ್ ರೌಡಕುಂದ ಇದ್ದರು.