ಹರಹರಪನಹಳ್ಳಿ: ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರವು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದ ಮೇರೆಗೆ ತಾಲೂಕಿನ ಜೆ.ಎಂ.ಎಫ್.ಸಿ ನ್ಯಾಯಾಲದಲ್ಲಿ ಆಯೋಜಿಸಲಾಗಿದ್ದ ಮಾರ್ಚ್ ೧೨ ರಂದು ರಾಷ್ಟ್ರೀಯ ಲೋಕ ಅದಾಲ್ ನಡೆಯಲಿದ್ದು, ಸಾರ್ವಜನಿಕ ಕಕ್ಷಿದಾರರು ರಾಜೀ ಆಗುವಂತಹ ಪ್ರಕಣಗಳನ್ನು ನಿಮ್ಮ ವಕೀಲರ ಮೂಲಕ ಇತ್ಯಾರ್ಥಪಡಿಸಿಕೊಳ್ಳಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ ಪ್ರತಿಪಾದಿಸಿದರು.
ಪಟ್ಟಣದ ವಕೀಲರ ಸಂಘದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹರಪನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಉಭಯ ನ್ಯಾಯಾಧೀಶರುಗಳ ನೇತೃತ್ವದಲ್ಲಿ ಹಾಗೂ ವಕೀಲರ ಸಂಘ ದಿಂದ ಏರ್ಪಡಿಸಲಾಗಿದ್ದ ಮಾರ್ಚ್ ೧೨ ರಂದು ನಡೆಯಲಿರುವ ಮೇಗಾ ಲೋಕದಾಲತ್‌ನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅವರು ಮಾರ್ಚ್. ೧೨ ರಂದು ನಡೆಯಲಿರುವ ಮೇಗಾ ಲೋಕ ಅದಾಲತ್ ನಡೆಯಲಿದ್ದು ವಕೀಲರು ರಾಜೀವಾಗುವಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಿ ಕೊಂಡು ನೆಮ್ಮದಿಯ ಜೀವನ ಮಾಡಿಕೊಳ್ಳಿ ಎಂದು ಕಕ್ಷಿದಾರ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಇತ್ಯರ್ಥ ಪಡಿಸಲ್ಪಡುವ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ಸಾರ್ವಜನಿಕರು ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ. ಜಗದಪ್ಪ, ಮಾತನಾಡಿ,ಸಮಾಜದಲ್ಲಿ ದ್ವೇಷ ದಿಂದ ಏನುಸಾದಿಸಲು ಅಸಾಧ್ಯ ಆದ್ದರಿಂದ ಒಂದೇ ಕುಟುಂಬಕ್ಕೆ ಸಂಬAದ ಪಟ್ಟ ಪ್ರಕರಣಗಳನ್ನು ಕಕ್ಷಿದಾರುರರು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಂಡು ನಿಮ್ಮಗಳ ಮನಸ್ಸುಗಳನ್ನು ಪರಿವರ್ತನೆ ಮಾಡಿಕೊಂಡು ಸಮಾಜದ ಉತ್ತಮ ಪ್ರಜೆಯಾಗಿ ಪ್ರತಿಭಾವಂತ ನಾಗರಿಕರಾಗಿ ನಿಮ್ಮಗಳ ಕುಟುಂಬದ ಒಬ್ಬ ಉತ್ತಮ ಜವಾಬ್ದಾರಿಯುತ ನಾಗರಿಕರಾಗಿ ಜೀವನವನ್ನು ಸಾಗಿಸಿಕೊಳ್ಳಿ ಎಂದು ವಿಶ್ಲೇಷಿಸಿದರು.
ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರಾದ ಫಕ್ಕಿರವ್ವ ಕೆಳಗೇರಿ , ವಕೀಲರ ಸಂಘದ ಉಪಾಧ್ಯಕ್ಷ ವಿ.ಡಿ.ವಾಸುದೇವಾ, ಕಾರ್ಯದರ್ಶಿ ಎಸ್.ಜಿ.ತೀಪ್ಪೆಸ್ವಾಮಿ, ಜಂಟಿಕಾರ್ಯದರ್ಶಿ ಎಂ.ನಾಗೇಂದ್ರಪ್ಪ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ,ಸರ್ಕಾರಿ ಅಭಿಯೋಜಕರಾದ ಎನ್. ಮೀನಾಕ್ಷಿ, ನಿವiðಲ, ಹಿರಿಯ ವಕೀಲರಾದ ರಾಮನಗೌಡ ಪಾಟೇಲ್ ಜಿ. ಗಂಗಾಧರ್ ಗುರುಮಠ್, ಬಿ. ರೇವನಗೌಡ, ಮತ್ತಿಹಳ್ಳಿ ಅಜ್ಜಪ್ಪ ಕೆ. ಬಸವರಾಜ್, ಎಂ. ಮೃತಂಜಯ್ಯ, ಕೆ.ರೇವಣ ಸಿದ್ದಪ್ಪ, ಕೊಟ್ರೇಶ್, ಬಸವರಾಜ್ ಮತ್ತು ಇತರರು ಉಪಸ್ಥಿತರಿದ್ದರು
,