Saturday, 14th December 2024

ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ ೧೧೪೩ ಪ್ರಕರಣಗಳು ಇತ್ಯರ್ಥ

ಹರಪನಹಳ್ಳಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ನಡೆದ ತಾಲೂಕು ಸೇವೆಗಳ ಪ್ರಾಧಿಕಾರದ ವತಿ ಯಿಂದ ಹರಪನಹಳ್ಳಿ ಉಭಯ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದಲಾಗಿದ್ದ ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ ನಡೆದ ಒಟ್ಟು ೧೩೬೨ ಪ್ರಕರಣಗಳನ್ನು ಕೈಗೆತ್ತಿಕೊಂಡು, ೧೧೪೩ ಪ್ರಕರಣಗಳನ್ನು ಉಭಯ ನ್ಯಾಯಾಲಯದ ನ್ಯಾಧೀಶರುಗಳಾದ ಎಂ. ಭಾರತಿ, ಮತ್ತು ಫಕ್ಕೀರವ್ವ ಕೆಳಗೇರಿ ನ್ಯಾಯಾಧೀಶರುಗಳ ನೇತೃತ್ವದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.

ಪಟ್ಟಣದ ಉಭಯ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಆದಾಲತ್ನಲ್ಲಿ ರಸ್ತೆ ಅಪಘಾತ,ಚೆಕ್ ಬೌನ್ಸ್ , ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ಲಿ ಪ್ರಕರಣ,ಮೋಟಾರು ವಾಹನ, ಸಹಕಾರಿ ಬ್ಯಾಂಕುಗಳು , ನಿವೇಶನ ಮಾರಾಟ ಒಳಗೊಂಡ೦ತೆ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರಾದ ಎಂ.ಭಾರತಿ ರವರ ನ್ಯಾಯಾ ಲಯದಲ್ಲಿ ಒಟ್ಟು ೬೩೦ ಪ್ರಕರಣಗಳ ಪೈಕಿ ೪೯೯ ಪ್ರಕಣಗಳನ್ನು ಇತ್ಯರ್ಥ ಪಡಿಸಿ, ಒಟ್ಟು ೧.೩೦,೧೨,೧೩೦. ಕೋಟಿ. ರೂ.ಗಳು ಮತ್ತು ಬ್ಯಾಂಕ್ ದಾವ ಪೂರ್ವ ಪ್ರಕರಣಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡೆಸಿದರು. ಸಿವಿಲ್ ನ್ಯಾಯಾಲಯದ ನ್ಯಾಯಾ ಧೀಶರಾದ ಫಕ್ಕೀರವ್ವ ಕೆಳಗೇರಿ ರವರ ನ್ಯಾಯಾ ಲಯದಲ್ಲಿ ಒಟ್ಟು ೭೩೨ ಪ್ರಕರಣಗಳ ಪೈಕಿ ೬೪೪ ಪ್ರಕಣಗಳನ್ನು ಇತ್ಯರ್ಥ ಪಡೆಸಿ, ಒಟ್ಟು ೩೮,೨೯,೭೪೯. ಲಕ್ಷ ರೂ.ಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡೆಸಿದರು. ಉಭಯ ನ್ಯಾಯಾಲದಲ್ಲಿ ಒಟ್ಟು ೧೧೪೩ ಪ್ರಕರಣಗನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸುಮಾರು ವರ್ಷಗಳಿಂದ ಬಿರುಕು ಗೊಂಡಿದ್ದ ದಾಂಪತ್ಯ ಜೀವನದ ಇಬ್ಬರನ್ನು ಪರಸ್ಪರ ಹೊಂದಾಣಿಕೆಮಾಡಿಸಿ ಇಬ್ಬರ ಮನಸ್ಸುನ್ನು ಬದಲಾಯಿಸಿ ನೂತನ ಜೀವನಕ್ಕೆ ನ್ಯಾಯಾದೀಶರು ಮನವೋಲಿಸಿ ಸತಿ ಪತಿಗಳಾದ ಕಿರಣಕುಮಾರ್ ಮತ್ತು ಸವಿತಾ ಇಬ್ಬರ ಪರವಾಗಿ ಅರ್ಜಿ ಸಲ್ಲಿಸಿದ್ದ ವಕೀಲರಾದ ಅರ್ಜಿದಾರಳ ಪರವಾಗಿ ವಕೀಲ ಓ.ತಿರುಪತಿ ಎದುರುದಾರರ ಪರವಾಗಿ ವಕೀಲ ಎಂ. ನಾಗೇಂದ್ರಪ್ಪ ರವರು ಒಗ್ಗೂಡಿಸಿ ಯಶ್ವಸಿಗೋಳಿಸಿದರು ನಂತರ ಸಿವಿಲ್ ನ್ಯಾಯಾಲ ಯದಲ್ಲಿ ಬಿರುಕು ಗೊಂಡಿದ್ದ ದಾಂಪತ್ಯ ಜೀವನವನ್ನು ಮತ್ತೆ ಜೊತೆ ಗುಡಿಸುವಲ್ಲಿ ನ್ಯಾಯಾಧೀಶರು ಯಶ್ವಸಿಯಾದರು.

ತಾಲೂಕಿನ ಜೆ.ಎಂ.ಎಪ್.ಸಿ ನ್ಯಾಯಾಲಯದ ಉಭಯ ನ್ಯಾಯಾದೀಶರುಗಳು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲು ಸಹಕರಿಸಿದ ವಕೀಲರಿಗೆ ಕಕ್ಷಿದಾರರಿಗೆ ಉಭಯ ನ್ಯಾಯಾಲಯದ ನ್ಯಾಯಾಧೀಶರುಗಳಾದ ಎಂ. ಭಾರತಿ, ಮತ್ತು ಫಕ್ಕೀರವ್ವ ಕೆಳಗೇರಿ, ನ್ಯಾಯಾಧೀಶರುಗಳು ಅಭಿನಂಧನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ, ಎಂ. ಅಜ್ಜಣ್ಣ, ಉಪಾಧ್ಯಕ್ಷ ಕೆ. ವಿರೂಪಾಕ್ಷಪ್ಪ, ಕಾರ್ಯದರ್ಶಿ.ಕೆ. ಆನಂದ, ಜಂಟಿ ಕಾರ್ಯದರ್ಶಿ ಹೂಲೇಪ್ಪ, ಖಜಾಂಚಿ ರೇಣುಖಾ ಮೇಟಿ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ. ಜಗದಪ್ಪ, ಹಿರಿಯ ವಕೀಲರಾದ ಪಿ. ಜಗದೀಶ್ ಗೌಡ್ರು, ಕೆ. ಚಂದ್ರಗೌಡ್ರು, ಬಿ.ರೇವನಗೌಡ್ರು, ಎಸ್.ರುದ್ರಮನಿ, ಕೆ. ಬಸವರಾಜ್, ಕೆ, ನಾಗರಾಜ್, ಬಿ. ಹಾಲೇಶ್, ಕೆ. ಪ್ರಕಾಶ್ , ಬಿ,ಗೋಣಿಬಸಪ್ಪ, ಕೆ.ಎಸ್.ಮಂಜ್ಯಾನಾಯ್ಕ, ಮುತ್ತಿಗಿ. ರೇವಣ ಸಿದ್ದಪ್ಪ, ಎಂ.ಮೃ0ತಜಯ್ಯ, ಇದ್ಲಿ ರಾಮಪ್ಪ, ದೇವರಾಜ್, ನಂದೀಶ್, ಎಸ್.ತಿಪ್ಪೇಸ್ವಾಮಿ, ಎಸ್. ಜಾಕೀರ್, ಬಿ.ಬಸವರಾಜ್, ಜಿ. ಹಾಲೇಶ್, ಕೆ.ಕೊಟ್ರೇಶ್,ಎ.ಕೆ. ಬಿ.ಎಸ್. ಬಸವನಗೌಡ, ರಾಜಪ್ಪ, ಸಿ. ರಾಜಪ್ಪ, ಸಿ. ಜಾತಪ್ಪ , ಜೆ. ಸೀಮಾ, ದ್ರಾಕ್ಷಾಯಣಮ್ಮ, ಸೇರಿದಂತೆ ನ್ಯಾಯಾಲಯದ ಸಿಬ್ಬಂದಿಗಳು ಮತ್ತು ಇತರರು ಇದ್ದರು.