Sunday, 13th October 2024

ಮನುಷ್ಯನ ಜೀವನ ನೀರಿನ ಮೇಲಿನ ಗುಳ್ಳೆಯ ಹಾಗೆ: ನ್ಯಾಯಾಧೀಶೆ ಎಂ.ಭಾರತಿ

ಹರಪನಹಳ್ಳಿ: ಪ್ರತಿಯೊಬ್ಬರೂ ತಮ್ಮ, ಜೀವನದ ಹೃದಯ ಭಾಗವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಲು ಶುದ್ಧವಾದ ಆಹಾರ ಸೇವಿಸಬೇಕು ಸಮಾಜದಲ್ಲಿ ಇರುವಷ್ಟು ದಿನಾ ಏನಾದರೂ ಒಂದು ಸಾಧನೆ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಎಂ.ಭಾರತಿ ಹೇಳಿದರು.

ಪಟ್ಟಣದ ನ್ಯಾಯಾಲಯದಲ್ಲಿರುವ ವಕೀಲರ ಸಂಘದಲ್ಲಿ ಗುರುವಾರ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಹೃದಯ ಸಂಬಂಧಿತ ರೋಗ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗೆ ನೀರು ಏರೆ ಯುವ ಮೂಲಕ ಉಭಯ ನ್ಯಾಯಾಲಯದ ನ್ಯಾಯಾಧೀಶರುಗಳಾದ ಎಂ. ಭಾರತಿ, ಫಕ್ಕಿರವ್ವ ಕೆಳಗೇರಿ ರವರು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಆರೋಗ್ಯಕ್ಕಾಗಿ ದ್ಯಾನ ಮಾಡುತ್ತಾ ಭಗವಂತನನ್ನು ಆರಾಧಿಸಿಕೊಂಡಾಗ ಮಾತ್ರ ನಮ್ಮ ಜೀವನ ಸಾರ್ಥಕ ವಾಗುತ್ತದೆ ಎಂದರು.

ವಕೀಲರ ಸಂಘದ ಅಧ್ಯಕ್ಷರಾದ ಕೆ. ಜಗದಪ್ಪ ಮಾತನಾಡಿ, ಆಹಾರ ಪದ್ದತಿಯನ್ನು ಸದೃಡವಾದ ದೇಹಕ್ಕೆ ಸಧೃಢವಾದ ಆಹಾರ ಸೇವಿಯಬೇಕು ನಮ್ಮ ಮನಸ್ಸನ್ನು ಶುದ್ದವಾಗಿ ನಿಯಂತ್ರಿಸಲು ನೆಮ್ಮದಿ ಬಹಾಳ ಮುಖ್ಯ ಆದ್ದರಿಂದ ನಾವುಗಳು ಆರೋಗ್ಯದ ಹಿತ ದೃಷ್ಠಿಯಿಂದ ಆರೋಗ್ಯಕ್ಕಾಗಿ ಒಳ್ಳೆಯ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ನಮ್ಮ ಆರೋಗ್ಯದ ಹಿತವನ್ನು ಕಾಪಾಡಿ ಕೊಳ್ಳಬೇಕೆಂದು ವಿಶ್ಲೇಷಿಸಿದರು.

ಹಿರಿಯ ವಕೀಲರಾದ ಪಿ.ಕೃಷ್ಣಮೂರ್ತಿ, ಡಾ.ಮಹಮ್ಮದ್ ಸಮೀರ್ ಹೆಚ್. ಹೃದಯ ಕಾಯಿಲೆಗೆ ಸಂಬಂಧಿಸಿದಂತೆ ಮಾತನಾಡಿ, ಈ ಸಂದರ್ಭದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ಫಕ್ಕಿರವ್ವ ಕೆಳಗೇರಿ, ಸರಕಾರಿ ಅಭಿಯೋಜಕರಾದ ಮೀನಾಕ್ಷಿ ಎನ್, ನಿರ್ಮಲ, ಅಪರ ಸರ್ಕಾರಿ ವಕೀಲರಾದ ವಿ.ಜಿ.ಪ್ರಕಾಶ್ ಗೌಡ , ವಕೀಲರ ಸಂಘದ ಉಪಾಧ್ಯಕ್ಷ ಡಿ.ಬಿ.ವಾಸುದೇವ, ಜಂಟಿ ಕಾರ್ಯದರ್ಶಿ ಎಂ.ನಾಗೇಂದ್ರಪ್ಪ, ಖಜಾಂಚಿ ಹುಲಿಯಪ್ಪ ಹಿರಿಯ ವಕೀಲರಾದ, ಕೆ. ಚಂದ್ರಗೌಡ , ಜಿ .ಗಂಗಾಧರ ಗುರುಮಠ್, ಬಿ.ರೇವನಗೌಡ, ಆರ್. ರಾಮನ ಗೌಡ, ಕೆ.ಎಂ .ಚಂದ್ರಮೌಳಿ, ಎಂ.ಅಜ್ಜಪ್ಪ, ಕೆ.ಬಸವರಾಜ್, ಬಿ.ಹಾಲೇಶ್ ಎಂ ಮೃತಂಜಯ್ಯ, ಮತ್ತು ಇತರರು ಉಪಸ್ಥಿತರಿದ್ದರು.