Sunday, 15th December 2024

ದೇಶದ ಸ್ವಾತಂತ್ರ‍್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ನೆನೆಯಬೇಕಾಗಿದೆ: ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ. ಭಾರತಿ

ಹರಪನಹಳ್ಳಿ : ಭಾರತ ದೇಶದಲ್ಲಿ ಗಣರಾಜ್ಯವನ್ನು ಪ್ರಜೆಗಳಿಂದ ಆರಿಸಲ್ಪಟ್ಟ ಗಣರಾಜ್ಯ ಎಂದು ಅಂಗೀಕರಿಸಲಾಯಿತು. ದೇಶದ ಸ್ವಾತಂತ್ರ‍್ಯಕ್ಕಾಗಿ ಅನೇಕ ಮಹನೀಯರು ತಮ್ಮ ಜೀವದ ಹಂಗನ್ನು ಮರೆತು ದೇಶಕ್ಕೆ ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಅಂತಹ ಮಹನೀಯರನ್ನು ನಾವು ಇವತ್ತು ನೆನೆಯ ಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಭಾರತಿ ಪ್ರತಿಪಾದಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ೭೩ ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಭಯ ನ್ಯಾಯಾಲಯದ ನ್ಯಾಯಾಧೀಶರು ಧ್ವಜಾರಹೋಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರಡು ಸಮಿತಿಯನ್ನು ಡಾ. ಬಾಬು ರಾಜೇಂದ್ರ ಪ್ರಸಾದ್ ರವರ ನೇತೃತ್ವದಲ್ಲಿ ಜನವರಿ ೨೬ ರಂದು ಗಣರಾಜ್ಯೋತ್ಸವನ್ನು ಆಚರಿಸಲು ಕರಡು ಸಮಿಯಲ್ಲಿ ಒಪ್ಪಿಗೆ ಪಡೆದು ಭಾರತದ ಸಂವಿಧಾನದವನ್ನು ರಚಿಸಲು ಡಾ|| ಬಿ.ಆರ್. ಅಂಬೇಡ್ಕರ್ ಅವರು ಸೇರಿದಂತೆ ಅನೇಕ ಮಹನೀಯರು ದೇಶಕ್ಕೆ ಸಂವಿಧಾನವನ್ನು ರಚಿಸಿ ಎಲ್ಲಾರಿಗೂ ಅವರ ಅವರ ಇಚ್ಚೆಯಂತೆ ನಡೆದುಕೊಳ್ಳುವಂತೆ ಸಂವಿಧಾನವನ್ನು ರಚಿಸಿದ ಕೀರ್ತಿ ಡಾ|| ಬಿ.ಆರ್ ಅಂಬೇಡ್ಕರ್ ರವರಿಗೆ ಸಲ್ಲುತ್ತದೆ ಎಂದು ವಿಶ್ಲೇಷಿಸಿದರು.

ಸಂವಿದಾನದ ಬಗ್ಗೆ ತಿಳಿದುಕೊಳ್ಳಬೇಕಾದರೆ ಡಾ. ಬಿ.ಆರ್. ಅಂಬೇಡ್ಕರ್ ರವರ ಜೀವನ ಚರಿತ್ರೆಯನ್ನು ಅರಿತು ಕೊಳ್ಳಬೇಕು, ಅಂಬೇಡ್ಕರ್ ರವರು ಸಂವಿಧಾನ ರಚನೆಗೆ ಅನೇಕ ಅವಮಾನಗಳನ್ನು ಸಹಿಸಿಕೊಂಡು ದೇಶಕ್ಕೆ ಸಂವಿಧಾನದ ರಚನೆ ಮಾಡಿದ್ದಾರೆ ಅವರ ಅನುಯಾಯಿಗಳಾಗಿ ನಾವು ಅವರ ಸೇವೆ ಮಾಡ ಬೇಕಾಗಿದೆ ಆಡುಮುಟ್ಟದ ಸೋಪ್ಪಿಲ್ಲ ಅಂಬೇಡ್ಕರ್ ರವರು ಓದದೆ ಇರುವ ಪುಸ್ತಕವಿಲ್ಲದಂತೆ ಇಂತಹ ವ್ಯಕ್ತಿಯನ್ನು ಕಂಡ ಭಾರತಿಯರಾದನಾವು ದನ್ಯರು ಎಂದರು.

ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧಶರಾದ ಫಕ್ಕಿರವ್ವ ಕೆಳಗೆರಿ,ವಕೀಲರ ಸಂಘದ ಅಧ್ಯಕ್ಷರಾದ ಕೆ. ಜಗದಪ್ಪ, ಉಪಾಧ್ಯಕ್ಷ ವಿ.ಡಿ. ವಾಸುದೇವಾ, ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ, ಅಪರ ಸರ್ಕಾರಿ ವಕೀಲರಾದ ವಿ. ಜಿ. ಪ್ರಕಾಶ್ ಗೌಡ, ಹಿರಿಯ ವಕೀಲರಾದ ಗಂಗಾಧರ್ ಗುರುಮಠ್, ಎಂ.ಅಜ್ಜಪ್ಪ, ಕೆ. ಬಸವರಾಜ್, ಮಲ್ಲಿಕಾರ್ಜುನ್ ಎಂ. ಮೃತಂಜಯ್ಯ, ಕಣವಿಹಳ್ಳಿ ಮಂಜುನಾಥ್, ಕೆ. ಕೋಟ್ರöಯ್ಯ, ಬಿ. ಗೋಣಿಬಸಪ್ಪ, ಮುತ್ತಿಗಿ ರೇವಣಸಿದ್ದಪ್ಪ, ವಕೀಲರುಗಳಾದ ಬಂಡ್ರಿ ಆನಂದ, ಶಾಂತವೀರನಾಯ್ಕ, ಜಾತಪ್ಪ, ಸಿ. ರಾಜಪ್ಪ, ದೇವರಾಜ್, ಕೆ.ಪ್ರಕಾಶ್, ಓ.ತಿರುಪತಿ ಶ್ರೀಕಾಂತ್, ನAದೀಶ್‌ನಾಯ್ಕ, ನ್ಯಾಯಾಲದ ಸಿಬ್ಬಂದಿಗಳಾದ ಸಿರಸ್ತೇದಾರರು, ರೇವಣಸಿದ್ದಪ್ಪ, ಮಂಜುನಾಥ್, ಶಿವಾನಂದ್, ಮಾರುತಿ, ಸುನೀಲ್, ಕೊಟ್ರೇಶ್, ಬಸವರಾಜ್, ಮತ್ತು ಇತರರು ಇದ್ದರು.