Thursday, 12th December 2024

ಪೋಷಕರು ಮಕ್ಕಳನ್ನು ಜ್ಞಾನದ ಕಡೆಗೆ ಕೊಂಡೊಯ್ಯಬೇಕು: ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ

ಹರಪನಹಳ್ಳಿ: ಪೋಷಕರು ಮಕ್ಕಳನ್ನು ಅಜ್ಞಾನದ ಕಡೆಗೇ ಕೊಂಡೊಯ್ದೆ, ಶಿಕ್ಷಣದ ಕಡೆಗೇ ಕೊಂಡೊಯ್ದ ಮಾದರಿಯ ಶಿಕ್ಷಣವನ್ನು ನೀಡಿದಾಗ ಮಾತ್ರ ಸಮಾಜದಲ್ಲಿ ಮಾದರಿ ಮಕ್ಕಳಾಗಿ ಹೊರಹೊಮ್ಮುವದಕ್ಕೆ ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎ. ಭಾರತಿ ಹೇಳಿದರು.

ತಾಲೂಕಿನ ಅನಂತಹಳ್ಳಿ ಗ್ರಾಮದ ಸಮೀಪ ಇರುವ ಆದರ್ಶ ವಿದ್ಯಾಲಯ ದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ , ವಕೀಲರ ಸಂಘ ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಹರಪನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟಿಸಿ ಬಳಿಕ ಮಾತನಾಡಿದರು.

ವಿಧ್ಯಾರ್ಥಿಗಳು ವ್ಯಾಸಂಗ ಮಾಡುವ ಸಂದರ್ಭದಲ್ಲಿ ಯವುದೇ ರೀತಿಯ ಆಲೋಚನೆಗೆ ಒಳಗಾಗಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದು ತಪ್ಪು, ಪೋಷಕರು ಸಮಾಜದಲ್ಲಿ ಮಕ್ಕಳನ್ನು ಅಜ್ಞಾನದ ಕಡೆಗೆ ಕಳಿಸುವುದರಿಂದ ಸಮಾಜದಲ್ಲಿ ಒಳ್ಳೆಯ ಸಂಸ್ಕಾರವನ್ನು ಕಲಿಸಬೇಕು. ಗುರುವೃಂದದವರು ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡಿ ಸಮಾಜದ ಒಳ್ಳೆಯ ನಾಗರಿಕರನ್ನಾಗಿ ಮಾಡುವ ಒಳ್ಳೆಯ ಜ್ಞಾನವನ್ನು ನೀಡುವಂತ ಗುರುಗಳಾಗಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಪೋಷಕರು ವಿಧ್ಯಾರ್ಥಿಗಳ ಜೀವನ ಮಂಗನ ಮನಸಸ್ಸಿನಂತೆ ವಿಚಲಿತರಾಗದೇ ಸೃಜನ ಶೀಲ ವ್ಯಕ್ತಿಯಾಗಿ ಉನ್ನತ ಶಿಕ್ಷಣವನ್ನು ಪಡೆದು ತಂದೆ ತಾಯಿಗೆ ಮಾದರಿ ಮಕ್ಕಳಾಗಿ ಸಮಾಜದಲ್ಲಿ ಒಳ್ಳೆಯ ಸನ್ ಮಾರ್ಗ ದಲ್ಲಿ ಕೊಂಡೊಯ್ಯುಬೇಕು, ವಿಧ್ಯಾರ್ಥಿಗಳು ಏಕಾಗ್ರತೆಯಿಂದ ನಿಮ್ಮ ಜೀವನ ರೂಪಿಸಿ ಕೊಳ್ಳಬೇಕು , ವಿಧ್ಯಾರ್ಥಿಗಳು ಮಹನೀಯರ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಗಳಾಗಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿಧ್ಯಾರ್ಥಿಗಳ ಜೀವನದಲ್ಲಿ ಸಕರತ್ಮಾಕವಾಗಿ ಚಿಂತಿಸಬೇಕು ನಕರತ್ಮಾಕವಾಗಿ ಚಿಂತಿಸ ಬಾರದು, ವಿಧ್ಯಾರ್ಥಿಗಳು ಆರೋಗ್ಯದ ಕಡೆಗೇ ಗಮನ ಹರಿಸಬೇಕು ವಿದ್ಯಾರ್ಥಿಗಳ ಜೀವನ ಚರಿತ್ರೆಯಂತೆ ಇರಬೇಕು.ವಿಧ್ಯಾರ್ಥಿಗಳು ಆಹಾರ ಪದ್ದತಿ ಪರಿಶುದ್ಧ ವಾಗಿ ಇರಬೇಕು ಎಂದರು.

ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ನಿರೀಕ್ಷಕ ಆರ್. ನಾಗೇಶ್ , ಮಾತನಾಡಿದರು ವಕೀಲರ ಸಂಘದ ಉಪಾಧ್ಯಕ್ಷ ಡಿ. ಬಿ.ವಾಸುದೇವ, ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ, ವಕೀಲರಾದ ಎಂ.ಮೃತ೦ಜಯ್ಯ, ಕೆ. ಸಣ್ಣ ನಿಂಗನಗೌಡ, ಆದರ್ಶ ವಿಧ್ಯಾಲಯ ಮುಖ್ಯೋಪಾಧ್ಯಾಯ ಹೆಚ್ .ಕೆ.ಚಂದ್ರಪ್ಪ, ತಾಲೂಕು ಕಾನೂನನ್ನು ಸೇವಾ ಸಮಿತಿಯ ಸಿಬ್ಬಂದಿಗಳಾದ ಕೊಟ್ರೇಶ್, ಬಸವರಾಜ್, ಮತ್ತು ಆದರ್ಶ ವಿದ್ಯಾಲಯದ ವಿಧ್ಯಾರ್ಥಿಗಳು ಹಾಜರಿದ್ದರು.