Saturday, 12th October 2024

ಮನುಷ್ಯರಿಗೆ ಗಾಳಿ, ನೀರು ಎಷ್ಟು ಮುಖ್ಯವೋ ಕಾನೂನಿನ ಪರಿ ಜ್ಞಾನವು ಅಷ್ಟೇ ಮುಖ್ಯ: ಎಂ.ಭಾರತಿ

ಹರಪನಹಳ್ಳಿ: ಪ್ರತಿನಿತ್ಯವೂ ಮನುಷ್ಯನಿಗೆ ಗಾಳಿ, ನೀರು, ಎಷ್ಟು ಮುಖ್ಯವೋ ಸಮಾಜದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ನಾಗರಿಕರಿಗೂ ಕಾನೂನಿನ ಅರಿವು ಅಷ್ಟೇ ಮುಖ್ಯ, ಅದಕ್ಕಾಗಿ ನಾವುಗಳು ಕಾನೂನಿನ ಅಡಿಯಲ್ಲಿ ಬಹಳ ನಿಷ್ಠೆ ಹಾಗೂ ಪ್ರಮಾಣಿಕವಾಗಿ ಸಾಗಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪುರಸಭೆ, ಹರಪನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಜನಸಾಮಾನ್ಯರಿಗಾಗಿ ವಿಶೇಷ ಕಾನೂನು ಅರಿವು ಕಾರ್ಯಕ್ರಮದಲ್ಲಿ ಉಭಯ ನ್ಯಾಯಾಧೀಶರು ಹಸಿರು ನಿಶಾನೆ ತೋರಿಸುವ ಮೂಲಕ ಜಾಗೃತಿ ಮೂಡಿಸಿದ ಬಳಿಕ ಮಾತನಾಡಿದ ಅವರು, ದುರ್ಬಲ ರಿಗೆ ಒಂದು ಕಾನೂನು ಶ್ರೀಮಂತರಿಗೆ ಒಂದು ಕಾನೂನು ಇಲ್ಲ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಕಾನೂನಿನಡಿಯಲ್ಲಿ ಬದುಕುವ ಸ್ವಾತಂತ್ರ್ಯವಿದೆ .ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಕಾರ್ಮಿಕರು, ಅನ್ಯಯಕ್ಕೊಳಗಾದ ಮಹಿಳೆಯ ರಿಗಾಗಿ, ಹಾಗೂ ಇತರೆ ಕಾನೂನು ಬಲ್ಲವರಿಗಾಗಿ , ಕಾನೂನಿನ ಅಡಿಯಲ್ಲಿ ಉಚಿತ ನ್ಯಾಯಾಲಯವಿದೆ ಪ್ರತಿ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಉಚಿತ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಗುತ್ತದೆ. ದುರ್ಬಲರು ಯಾವುದೇ ವ್ಯಕ್ತಿಯಾಗಿರಲಿ ಕಾನೂನು ಅರಿವು ಪಡೆದು ಕೊಳ್ಳಬೇಕು. ಎಂದು ವಿಶ್ಲೇಷಿಸಿದರು.

ಇತ್ತಿಚ್ಚಿನ ದಿನಗಳಲ್ಲಿ ಮಕ್ಕಳು ಹಾಗೂ ವಯಸ್ಕರು ವಾಹನವನ್ನು ಪರವಾನಿಗೆ ಇಲ್ಲದೇ ಸಂಚಾರಿಸುತ್ತಿದ್ದಾರೆ. ಅಂತವರು ತಪ್ಪದೇ ಕಾನೂನಿನ ನಿಯಮಗಳನ್ನು ಪಾಲಿಸಿಕೊಂಡು ವಾಹನವನ್ನು ಚಲಾಯಿಸಬೇಕು ಸವಾರರು ತಪ್ಪದೆ ವಾಹನದ ಪರವಾನಿಗೆ ಮತ್ತು ವಾಹನ ಓಡಿಸುವ ವ್ಯಕ್ತಿಯ ಪರವಾನಿಗೆ ಪಡೆದುಕೊಂಡರು ವಾಹನವನ್ನು ಸಂಚಾರಿಸಬೇಕು. ತಂದೆ- ತಾಯಿಗಳು ಯಾವುದೇ ಕಾರಣಕ್ಕೂ ಅಪ್ರಾಪ್ತ ವಯಸ್ಕರ ಮಕ್ಕಳನ್ನು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡ ಬಾರದು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ತಮ್ಮ ಮಕ್ಕಳನ್ನು ನಿಮ್ಮ ಮನೆಯ ಹಾಗೂ ಸಮಾಜದ ಪ್ರತಿಭಾವಂತ ವ್ಯಕ್ತಿಯನ್ನಾಗಿಮಾಡಿ ಯಾವುದೇ ವ್ಯಕ್ತಿ ಏನಾದರೂ ಸಾಧನೆ ಮಾಡಬೇಕಾದರೆ ಆದು ಶಿಕ್ಷಣದಿಂದ ಮಾತ್ರ ಸಾಧ್ಯ ಆದ್ದರಿಂದ ಸಮಾಜದ ನಾಗರಿಕರು ತಮ್ಮ ಮಕ್ಕಳನ್ನು ಶಿಕ್ಷಣದ ಜೋತೆಗೆ ಸಮಾಜದ ಸಂಸ್ಕಾರವನ್ನು ಕಲಿಸಿ ಎಂದು ನುಡಿದರು.

ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶೆ ಫಕ್ಕಿರವ್ವ ಕೆಳಗೇರಿ, ವಕೀಲರ ಸಂಘದ ಅದ್ಯಕ್ಷ ಕೆ.ಚಂದ್ರಗೌಡ, ವಕೀಲರ ಸಂಘದ ಉಪಾಧ್ಯಕ್ಷ ಟಿ.ವೆಂಕಟೇಶ್, ಹಿರಿಯ ವಕೀಲರಾದ ಕೆ.ಬಸವರಜ್, ಕೆ.ಜಗದಪ್ಪ, ಪಿ.ಜಗದೀಶ್ ಗೌಡ್ರು, ಗಂಗಾಧರ ಗುರುಮಠ್, ರುದ್ರಮನಿ, ಮೃತಂಜಯ್ಯ, ಕೆ.ಪ್ರಕಾಶ್, ರೇವಣಸಿದ್ದಪ್ಪ, ಹಾಲೇಶ್, ವಿರೂಪಾಕ್ಷ, ಮಂಜ್ಯಾನಾಯ್ಕ, ಕೊಟ್ರೇಶ್, ಮುತ್ತಿಗಿ ಮಂಜಣ್ಣ, ಜಾತಪ್ಪ, ಸಿ.ರಾಜಪ್ಪ, ಪುಣಭಗಟ್ಟಿ ನಿಂಗಪ್ಪ, ತಿರುಪತಿ, ಶಾಂತವೀರನಾಯ್ಕ, ಸೀಮಾ, ರೇಣುಖಾ, ಬಿ.ಗೋಣಿಬಸಪ್ಪ, ಆನಂದ, ಕೆ.ಪ್ರಕಾಶ್. ಬಿ.ಮಂಜುನಾಥ್, ಬಿ.ವಿ.ಬಸವನಗೌಡ, ನಂದೀಶ್ ನಾಯ್ಕ, ತಿಪ್ಪೇಸ್ವಾಮಿ, ಜಿ.ಹಾಲೇಶ್, ರವಿಶಂಕರ್, ನಾಗೇಂದ್ರಪ್ಪ, ತಿಪ್ಪೇಶ್ ಬಿ. ಹನುಮಂತಪ್ಪ, ಸಿ. ಜಾಕೀರ್, ಶ್ರೀಕಾಂತ್, ಸಣ್ಣನಿಂಗನಗೌಡ, ಬಸವರಾಜ್, ಹುಲಿಯಪ್ಪ, ಮಂಜುನಾಥ, ಮುಜು ಬರ್, ಗಿರೀಶ್, ಕೊಟ್ರೇಶ್, ಹಾಗೂ ನ್ಯಾಯಾಲಯದ ಹಿರಿಯ ,ಕಿರಿಯ ನ್ಯಾಯಾವಾದಿಗಳು, ಮತ್ತು ಇತರರು ಇದ್ದರು.