ಹರಪನಹಳ್ಳಿ: ಕಾಂಗ್ರೆಸ್ ಪಕ್ಷದ ಇತಿಹಾಸ ಅದು ದೇಶದ ಇತಿಹಾಸವಾಗಿದೆ. ಬ್ರಿಟಿಷರ ಜನವಿರೋಧಿ ನೀತಿಯನ್ನು ಖಂಡಿಸಿ ದೇಶಕ್ಕೆ ಸ್ವಾತಂತ್ರ‍್ಯ ದೊರಕಿಸಿ ಕೊಟ್ಟದ್ದು ಕಾಂಗ್ರೆಸ್. ರೈತರ ಮತ್ತು ಸಾಮಾನ್ಯ ಜನರ ಪರವಾಗಿ ಹೋರಾಟ ಮಾಡಿರುವುದು ಕಾಂಗ್ರೆಸ್ ಪಕ್ಷವಾಗಿರುವುದರಿಂದ ಕಾಂಗ್ರೆಸ್ ಪಕ್ಷದ ಸದಸ್ಯರಾಗುವುದು ಎಂದರೆ ಅದೊಂದು ಹೆಮ್ಮೆಯ, ಗೌರವದ ಸಂಕೇತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಹಿಳಾ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ತಾಲೂಕು ಐಗಳ ಬಸಾಪುರ ಗ್ರಾಮದ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತ ನಾಡಿದರು.
ಕಾಂಗ್ರೆಸ್ ಪಕ್ಷ ಸ್ವತಂತ್ರ ಭಾರತದಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ವಿಜ್ಞಾನ, ಬಾಹ್ಯಾಕಾಶ ಸೇರಿದಂತೆ ಅನೇಕ ರಂಗಗಳಲ್ಲಿ ಅದ್ವಿತೀಯ ಸಾಧನೆ ಮಾಡಿದೆ. 70ರ ದಶಕದಲ್ಲಿ ಅಂದಿನ ಭಾರತದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾಗಾ0ಧಿ ಅವರು ಪೋಕ್ರಾನ್‌ನಲ್ಲಿ ಅಣು ಪರೀಕ್ಷೆ ನಡೆಸುವ ಮೂಲಕ ಭಾರತದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ್ದರು. ಆದರೆ ಇಂದಿನ ಪ್ರಧಾನಿ ಗಳ ಹಾಗೆ ಎಂದಿಗೂ ರಾಜಕೀಯವಾಗಿ ಪ್ರಚಾರಕ್ಕೆ ಬಳಸಿ ಕೊಳ್ಳದೇ ಅಭಿವೃದ್ದಿ ಪಥದತ್ತ ಮುನ್ನೆಡೆಸಿದ್ದರು. ಕಾಂಗ್ರೆಸ್ ಪಕ್ಷಕ್ಕೆ ತ್ಯಾಗ-ಬಲಿದಾನದ ಇತಿಹಾಸ ಇದೆ ಎಂದರು.
ದೇಶ ಮತ್ತು ದೇಶಾಭಿಮಾನವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಮೂಲಕ ಜನರಲ್ಲಿ ಕೋಮು ಭಾವವನೆ ಬಿತ್ತುವ ಕೆಲಸ ನಡೆಯುತ್ತಿದೆ. ಕೆಲಸ ಮಾಡದೇ ಬರೀ ಮಾತನಾಡುವುದನ್ನೆ ಪ್ರಧಾನಿಗಳು ಕೆಲಸ ಮಾಡಿದ್ದಾರೆ. ಹೀಗಾಗಿ ಇಂದು ದೇಶದ ರೈತರು, ಬಡವರಿಗಾಗಿ ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿದೆ. ಆ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಾದ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಕಾಂಗ್ರೆಸ್ ಪಕ್ಷಕ್ಕೆ ಸದಸ್ಯತ್ವ ನೊಂದಾಣಿ ಮಾಡಿಸುವ ಮೂಲಕ ಹೊಸ ಹೊಸ ಜನರನ್ನು ಕರೆತರುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿಚ್ಚವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗೂಬಾಯಿ ಮಲ್ಲೇಶ್‌ನಾಯ್ಕ, ಸದಸ್ಯರಾದ ಶಾರದಬಾಯಿ, ಕವಿತಾ ಹನುಮಂತಪ್ಪ, ವನಜಾಕ್ಷಿ ನಾಗರಾಜ್, ವೈ.ರಾಜಪ್ಪ, ಸವಿತಾ ಮಂಜುನಾಥ್, ಶಾಂತಕುಮಾರ್, ಹುಲಿಗೆಮ್ಮ ಹನು ಮಂತಪ್ಪ, ಕನಕಬಸಾಪುರದ ಮಂಜುನಾಥ್, ಕಡಬಗೆರೆಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಅನುಷಾ ಮಂಜುನಾಥ್, ಗ್ರಾಮ ಪಂಚಾಯತಿ ಸದಸ್ಯರಾದ ಲಕ್ಷ್ಮಣ್, ತಿರುಪತಿ, ಕಸವನಹಳ್ಳಿ ಮಂಜಪ್ಪ, ಕೊತ್ತಂಬರಿ ಬಸವರಾಜ್, ಎಂ.ಹನುಮ0ತಪ್ಪ, ಮುಖಂಡರಾದ ಬಿ.ಪಿ.ಬಸವರಾಜ್, ಬಂಗಿ ಮಲ್ಲಿಕಾರ್ಜುನ್, ಹಿಕ್ಕಿಂಗೇರಿ ಹಾಲಪ್ಪ, ಪಾವನಪುರ ಚೌಡಪ್ಪ, ನಿಚ್ಚವ್ವನಹಳ್ಳಿ ಕೆಂಚಪ್ಪ, ಬಸವೇಶ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಮತ್ತೂರು ಬಸವರಾಜ್, ಕೆ.ಶಿವರಾಜ್, ರವಿ ಯುವ ಶಕ್ತಿ ಪಡೆ ಅಧ್ಯಕ್ಷ ಉದಯಶಂಕರ್, ಪ್ರಸಾದ್ ಕಾವಾಡಿ, ರಿಯಾಜ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.