Saturday, 5th October 2024

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಎಂ.ಪಿ.ವೀಣಾ ಮಹಾಂತೇಶ್

ಹರಪನಹಳ್ಳಿ : ದೇಶಕ್ಕಾಗಿ ಸ್ವಾತಂತ್ರ‍್ಯ ಪಡೆಯುವ ಹೋರಾಟದ ರೂಪುರೇಷೆಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ದೇಶದಾದ್ಯಂತ ಸಂಘಟನೆಯನ್ನು ಬಲಪಡಿಸುವ ಸಮಯದಲ್ಲಿ ಹೋರಾಟದ ಮುಂಚೂಣಿ ವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಯವರು ತಂಗಿದ್ದ ಹರಪನಹಳ್ಳಿಯ ಜ್ಯೂನಿಯರ್ ಕಾಲೇಜಿನಲ್ಲಿ ಈ ಹಿಂದಿನ ಶಾಸಕರಾಗಿದ್ದ ಎಂ.ಪಿ.ರವೀಂದ್ರ ಅವರ ಕಾರ್ಯಕ್ಷಮತೆಯ ಕನ್ನಡಿಯಂತೆ ನಿರ್ಮಾಣಗೊಂಡ ಗಾಂಧಿ ಮೆಮೋರಿಯಲ್ ಹಾಲ್ ನಲ್ಲಿ ಸಂಗೀತ ಕಾರ್ಯಕ್ರಮಗಳೊಂದಿಗೆ ವಿಶೇಷವಾಗಿ ನೆರವೇರಿಸಲಾಯಿತು.

ಕೆಪಿಸಿಸಿಯ ಪ್ರತಿಯೊಂದು ಆದೇಶವನ್ನು ಚಾಚುತಪ್ಪದೇ ಪಾಲಿಸುತ್ತಾ ನಾಯಕರ ಪ್ರಶಂಸೆಗೆ ಪಾತ್ರರಾದ ಎಂಪಿ ವೀಣಾ ಮಹಾಂತೇಶ್ ಕ್ಷೇತ್ರದ ಜನರ ಪ್ರೀತಿಯ ಸಮಾಜ ಸೇವಕಿ ರಾಜಕಾರಣಿ ಆಗಿದ್ದಾರೆ ಎನ್ನುವು ದನ್ನು ಸಾಬೀತುಪಡಿಸಿದ್ದಾರೆ. ಈ ಸಂದರ್ಭದಲ್ಲಿ ಎಡಿಬಿ ಕಾಲೇಜ್ ನಿವೃತ್ತ ಉಪನ್ಯಾಸಕ ರಾಜಪ್ಪ ಅವರು ಭಾರತ ಸ್ವಾತಂತ್ರ‍್ಯ ಹೋರಾಟ ನಡೆದು ಬಂದ ದಾರಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಈ ಸಂದಭ೯ದಲ್ಲಿ ಹರಪ್ಪನಹಳ್ಳಿ ಪಟ್ಟಣದ ಮಾಜಿ ಪುರಸಭಾ ಅಧ್ಯಕ್ಷ ಕವಿತಾ ವಾಗೀಶ್ ಮತ್ತು ಚಿಗಟೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರೇಕಮ್ಮ ಹಾಗೂ ಬಳ್ಳಾರಿ ಜಿಲ್ಲಾ ಸೋನಿಯಾ ಗಾಂಧಿ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿಯಾದ ಗಾಯತ್ರಿದೇವಿ ಮತ್ತು ನಾಗರಾಜ್ ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ದಾದಾಪೀರ್ ಮಕರಬ್ಬಿ ಮತ್ತು ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ಸಿ ಹಾಗೂ ಕಾಂಗ್ರೆಸ್ ಯುವ ಕಾರ್ಯಕರ್ತರಾದ ದುರ್ಗೇಶ್ ಅಪ್ಪ ರಮೇಶ್ ರವಿಚಂದ್ರನ್ ಗುರುಬಸವರಾಜ್ ಪ್ರಜ್ವಲ್ ಕುಮಾರ್ ಅರುಣ್ ಕುಮಾರ್ ಮದನ್ ಸ್ವಾಮಿ ಸಾಗರ್ ಪಾಟೀಲ್ ರಮೇಶ್ ರೇಕಮ್ಮ ರತ್ನಮ್ಮ ನೇತ್ರಾವತಿ ಗಂಗಮ್ಮ ರೂಪ ಆಲಿಯಾ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು