Saturday, 14th December 2024

ಬಡವರ ಹಸಿವು ನೀಗಿಸಿದ ಮಹಾನ್ ನಾಯಕ ಸಿದ್ದರಾಮಯ್ಯ : ಎಂ.ವಿ.ಅಂಜಿನಪ್ಪ

ಹರಪನಹಳ್ಳಿ: ಅನ್ನ ಭಾಗ್ಯ ಯೋಜನೆ ಜಾರಿಗೆತಂದು ಬಡವರ ಹಸಿವು ನೀಗಿಸಿದ ಮಹಾನ್ ನಾಯಕ ನಮ್ಮ ಪಕ್ಷದ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಎಂದು ಕಾಂಗ್ರೆಸ್ ಮುಖಂಡ ಹಾಗೂ ಪುರಸಭಾ ಹಿರಿಯ ಸದಸ್ಯ ಎಂ.ವಿ.ಅಂಜಿನಪ್ಪ ಹೇಳಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಜನ್ಮ ದಿನಾಚರಣೆ ಪ್ರಯುಕ್ತ ಕೇಕ್ ಕತ್ತರಿಸಿದ ಬಳಿಕ ಮಾತನಾಡಿದ ಅವರು ಅಶಕ್ತ ವರ್ಗಕ್ಕೆ ಶಕ್ತಿ ನೀಡಲು ಪಶು ಭಾಗ್ಯ ಸೇರಿದಂತೆ ಅನೇಕ ಭಾಗ್ಯಗಳ ಕೊಡುಗೆ ನೀಡಿಜನಪರ ಆಡಳಿತ ನಡೆಸಿದ ಧೀಮಂತ ನಾಯಕ ಸಿದ್ದರಾಮಯ್ಯನವರು ಎಂದರು.

ಸಿದ್ದರಾಮಯ್ಯನವರು ೫ ವರ್ಷರೈತರು, ಬಡವರ, ಶ್ರೀಸಾಮಾನ್ಯರ, ವಿದ್ಯಾರ್ಥಿಗಳು, ಅಹಿಂದ ಸಮುದಾಯ ದವರಿಗೆ ಹಲವು ಯೋಜನೆಗಳನ್ನು ನೀಡಿದ ಭಾಗ್ಯಗಳ ಸರದಾರರುಇವರುಅನೇಕ ವರ್ಷಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಇರಬೇಕು ಎಂದು ಆಶಿಸಿದರು.

ಪುರಸಭಾ ಸದಸ್ಯರುಗಳಾದ ಗೊಂಗಡಿ ನಾಗರಾಜ, ಉದ್ದಾರಗಣೇಶ, ಲಾಟಿದಾದಾಪೀರ, ಸೊಸೈಟಿ ಅಧ್ಯಕ್ಷ ಟಿ.ಹೆಚ್.ಎಂ.ಮಂಜುನಾಥ, ಚಿಕ್ಕೇರಿ ಬಸಪ್ಪ, ಅಗ್ರಹಾರ ಅಶೋಕ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.