Friday, 22nd November 2024

Mahatma Gandhi: ಮಹಾತ್ಮಾ ಗಾಂಧಿ ಕುರಿತ 20 ಕುತೂಹಲಕಾರಿ ಸಂಗತಿಗಳಿವು

Mahatma Gandhi

ನಾವು ಬಾಪು, ರಾಷ್ಟ್ರಪಿತ (Father of Nation), ರಾಷ್ಟ್ರದ ಪಿತಾಮಹ ಎಂದೇ ಕರೆಯಲ್ಪಡುವ ಮೋಹನ್‌ದಾಸ್ ಕರಮಚಂದ್ ಗಾಂಧಿ (Mahatma Gandhi) ಅವರ ಜನ್ಮ ದಿನಾಚರಣೆಯ (Mahatma Gandhi Birthday) ಸಂಭ್ರಮದಲ್ಲಿದ್ದಾರೆ. ಅವರ ಆದರ್ಶ ತತ್ತ್ವಗಳಾದ ಅಹಿಂಸೆ, ಸತ್ಯಕ್ಕೆ ವಿಶ್ವವೇ ತಲೆ ಬಾಗಿತ್ತು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ಅವಿಸ್ಮರಣೀಯ. ಜಾತಿ, ಬಣ್ಣ ಮತ್ತು ಧರ್ಮದ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದ ಅವರು ಸರಳ ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆದಿದ್ದರು.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಜನವರಿ 30ರಂದು ಬಿರ್ಲಾ ಹೌಸ್‌ನಲ್ಲಿರುವ ಗಾಂಧಿ ಸ್ಮೃತಿಯಲ್ಲಿ ಹತ್ಯೆ ಮಾಡಲಾಯಿತು. ಆದ್ದರಿಂದ ಈ ದಿನವನ್ನು ಹುತಾತ್ಮರ ದಿನ ಅಥವಾ ಶಹೀದ್ ದಿವಸ್ ಎಂದು ಆಚರಿಸಲಾಗುತ್ತದೆ.
1869ರ ಅಕ್ಟೋಬರ್ 2ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಜನಿಸಿದ ಗಾಂಧೀಜಿ ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಒಂದು ವರ್ಷದ ಕಾನೂನನ್ನು ಅಧ್ಯಯನ ನಡೆಸಿ ಬಳಿಕ ಲಂಡನ್ ನ ಯೂನಿವರ್ಸಿಟಿ ಕಾಲೇಜ್ ಗೆ ತೆರಳಿ ಅಲ್ಲಿ ತಮ್ಮ ಪದವಿಯನ್ನು 1891ರಲ್ಲಿ ಪೂರ್ಣಗೊಳಿಸಿದರು.

ಅನಂತರ ಅವರು ಇಂಗ್ಲೆಂಡ್‌ನ ಬಾರ್ ಕೌನ್ಸಿಲ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ದಕ್ಷಿಣ ಆಫ್ರಿಕಾಕ್ಕೆ ಹೋದ ಅವರಿಗೆ ವರ್ಣಭೇದ ನೀತಿಯನ್ನು ಅನುಭವಿಸಿದರು. ಬಳಿಕ ಭಾರತಕ್ಕೆ ಮರಳಿದ ಅವರು ಇಲ್ಲಿನ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಕೊಂಡರು.

Essay on Mahatma Gandhi: ವಿದ್ಯಾರ್ಥಿಗಳಿಗಾಗಿ ಇಲ್ಲಿವೆ ಗಾಂಧಿ ಜಯಂತಿ ಕುರಿತ ವಿವಿಧ ಪದ ಮಿತಿಯ ಪ್ರಬಂಧಗಳು

ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯ ಸಂಭ್ರಮದಲ್ಲಿರುವಾಗ ಅವರ ಕುರಿತಾದ 20 ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

Mahatma Gandhi
  1. ಮಹಾತ್ಮ ಗಾಂಧಿಯವರ ಮಾತೃಭಾಷೆ ಗುಜರಾತಿ.
  2. ಗಾಂಧಿಯವರು ತಮ್ಮ ಶಾಲಾ ಶಿಕ್ಷಣವನ್ನು ರಾಜ್‌ಕೋಟ್‌ನ ಆಲ್ಫ್ರೆಡ್ ಹೈಸ್ಕೂಲ್‌ನಲ್ಲಿ ಪೂರೈಸಿದರು.
  3. ಗಾಂಧಿ ಅವರ ಜನ್ಮದಿನವನ್ನು ವಿಶ್ವಾದ್ಯಂತ ಅಹಿಂಸೆಯ ಅಂತಾರಾಷ್ಟ್ರೀಯ ದಿನವೆಂದು ಆಚರಿಸಲಾಗುತ್ತದೆ.
  4. ಗಾಂಧೀಜಿ ಮನೆಯಲ್ಲಿ ಕಿರಿಯವರು. ಅವರಿಗೆ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದರು.
  5. ಗಾಂಧಿಯ ತಂದೆ ಹಿಂದೂ ಆಗಿದ್ದು, ಮೋದ್ ಬನಿಯಾ ಜಾತಿಗೆ ಸೇರಿದ್ದರು.
  6. ಮಹಾದೇವ ದೇಸಾಯಿ ಗಾಂಧಿಯವರ ಆಪ್ತ ಕಾರ್ಯದರ್ಶಿಯಾಗಿದ್ದರು.
  7. ಮೋಹನ್‌ದಾಸ್ ಕರಮಚಂದ್ ಗಾಂಧಿ ಅವರನ್ನು ಬಿರ್ಲಾ ಹೌಸ್‌ನ ಉದ್ಯಾನದಲ್ಲಿ ಹತ್ಯೆ ಮಾಡಲಾಯಿತು.
  8. ಗಾಂಧೀಜಿ ಮತ್ತು ಪ್ರಸಿದ್ಧ ಲೇಖಕ ಲಿಯೋ ಟಾಲ್‌ಸ್ಟಾಯ್ ಪತ್ರಗಳ ಮೂಲಕ ಪರಸ್ಪರ ಸಂವಹನ ನಡೆಸಿದ್ದರು.
  9. ಗಾಂಧೀಜಿ ಅವರು ಸತ್ಯಾಗ್ರಹ ಹೋರಾಟದಲ್ಲಿ ತಮ್ಮ ಸಹೋದ್ಯೋಗಿಗಳಿಗಾಗಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಿಂದ 21 ಮೈಲಿ ದೂರದಲ್ಲಿ 1,100 ಎಕರೆ ಪ್ರದೇಶದಲ್ಲಿ ಟಾಲ್‌ಸ್ಟಾಯ್ ಫಾರ್ಮ್ ಎಂಬ ಸಣ್ಣ ಕಾಲೋನಿಯನ್ನು ಸ್ಥಾಪಿಸಿದರು.
  10. 1930ರಲ್ಲಿ ಅವರು ದಂಡಿ ಉಪ್ಪಿನ ಮೆರವಣಿಗೆಯನ್ನು ನಡೆಸಿದರು. 1942ರಲ್ಲಿ ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕ್ವಿಟ್ ಇಂಡಿಯಾ ಚಳವಳಿಯನ್ನು ಪ್ರಾರಂಭಿಸಿದರು.
  11. ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮಾತ್ರವಲ್ಲದೆ ಅಸ್ಪೃಶ್ಯರು, ಕೆಳವರ್ಗದವರಿಗೆ ನ್ಯಾಯಯುತ ಚಿಕಿತ್ಸೆಗಾಗಿ ಒತ್ತಾಯಿಸಿದರು. ಇದಕ್ಕಾಗಿ ಹಲವಾರು ಬಾರಿ ಉಪವಾಸಗಳನ್ನು ಮಾಡಿದರು. ಅವರು ಅಸ್ಪೃಶ್ಯರನ್ನು ಹರಿಜನರು ಎಂದರೆ “ದೇವರ ಮಕ್ಕಳು” ಎಂದು ಕರೆದರು.
  12. ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ ಅವರನ್ನು ಆಧರಿಸಿದ ಚಲನಚಿತ್ರಕ್ಕೆ 1982ರಲ್ಲಿ ಅತ್ಯುತ್ತಮ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಗೆದ್ದುಕೊಂಡಿತು.
  13. 1930ರಲ್ಲಿ ಅವರು ಟೈಮ್ ಮ್ಯಾಗಜೀನ್ ವರ್ಷದ ವ್ಯಕ್ತಿಯಾಗಿ ಆಯ್ಕೆಯಾದರು. ಬರಹಗಾರರಾಗಿದ್ದ ಅವರ ಸಂಗ್ರಹಿತ ಕೃತಿಗಳು 50,000 ಪುಟಗಳನ್ನು ಹೊಂದಿವೆ.
  14. ಮಹಾತ್ಮಾ ಗಾಂಧಿಯವರು ನೊಬೆಲ್ ಶಾಂತಿ ಪ್ರಶಸ್ತಿಗೆ 1937, 1938, 1939, 1947 ಹಾಗೂ ಅಂತಿಮವಾಗಿ 1948ರ ಜನವರಿಯಲ್ಲಿ ಅವರು ಹತ್ಯೆಯಾಗುವ ಕೆಲವು ದಿನಗಳ ಮೊದಲು ನಾಮ ನಿರ್ದೇಶನಗೊಂಡಿದ್ದರು.
  15. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧಿಯವರ ಮರಣದ 21 ವರ್ಷಗಳ ಅನಂತರ ಅವರನ್ನು ಗೌರವಿಸುವ ಅಂಚೆಚೀಟಿಯನ್ನು ಗ್ರೇಟ್ ಬ್ರಿಟನ್ ಬಿಡುಗಡೆ ಮಾಡಿತು.
  16. ಮೋಹನ್‌ದಾಸ್ ಕರಮಚಂದ್ ಗಾಂಧಿಯವರು ಮಹಾತ್ಮ ಎಂಬ ಬಿರುದನ್ನು ಹೊಂದಿರಲಿಲ್ಲ. ಕೆಲವು ಲೇಖಕರ ಪ್ರಕಾರ ನೊಬೆಲ್ ಪ್ರಶಸ್ತಿ ವಿಜೇತ ಬಂಗಾಳಿ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಅವರಿಗೆ ಈ ಬಿರುದನ್ನು ನೀಡಿದರು.
  17. ಮಹಾತ್ಮಾ ಗಾಂಧಿಯವರ ಅಂತ್ಯಕ್ರಿಯೆಯ ಮೆರವಣಿಗೆ 8 ಕಿಲೋಮೀಟರ್ ಉದ್ದವಿತ್ತು ಎನ್ನಲಾಗುತ್ತದೆ.
  18. ಭಾರತೀಯ ರಿಸರ್ವ್ ಬ್ಯಾಂಕ್ 1996ರಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಹೊಂದಿರುವ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡಿತು. ಇದು 10 ಮತ್ತು 500 ರೂಪಾಯಿಗಳ ನೋಟುಗಳನ್ನು ಒಳಗೊಂಡಿತ್ತು.
  19. 1959ರಲ್ಲಿ ಗಾಂಧಿ ಸ್ಮಾರಕ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಯಿತು. ಇದು ಭಾರತದ ತಮಿಳುನಾಡಿನ ಮಧುರೈ ನಗರದಲ್ಲಿದೆ. ಇದನ್ನು ಗಾಂಧಿ ಮ್ಯೂಸಿಯಂ ಎಂದು ಕರೆಯುತ್ತಾರೆ. ಇಲ್ಲಿ ಮಹಾತ್ಮಾ ಗಾಂಧಿಯವರು ನಾಥುರಾಮ್ ಗೋಡ್ಸೆಯಿಂದ ಹತ್ಯೆಯಾದಾಗ ಧರಿಸಿದ್ದ ರಕ್ತದ ಕಲೆಯ ಉಡುಪು ಇದೆ.
  20. ಗಾಂಧೀಜಿಯವರು 19ನೇ ವಯಸ್ಸಿನಲ್ಲಿ ಕಸ್ತೂರ್ಬಾ ಗಾಂಧಿ ಅವರನ್ನು ವಿವಾಹವಾಗಿದ್ದರು.