ಹರಪನಹಳ್ಳಿ: ಶಾಲೆಯ ಕಲಿಕೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಗುರುವೊಬ್ಬರು ಬೇಕು ಜಗತ್ತಿನಲ್ಲಿ ಅಮ್ಮನ ಹೊರತಾಗಿ ಎಲ್ಲಾ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲ ಸೃಷ್ಟಿ ಎಂದರೆ ಶಿಕ್ಷಕರು ಮಾತ್ರ ಎಂದು ಜಿಲ್ಲಾ ದಿಶಾ ಕಮಿಟಿಯ ನಾಮ ನಿರ್ಧೇ ಶಕರು ಹಾಗೂ ಜಿಲ್ಲಾ ಮಹಿಳಾ ಮೋರ್ಚದ ಬಿಜೆಪಿ ಕಾರ್ಯದರ್ಶಿಯಾದ ಕುಸುಮ ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಚಿಗಟೇರಿ ಗ್ರಾಮದ ಶ್ರೀನಾರಮುನಿ ಶಾಲೆಯ ಗ್ರಂಥಾಲಯಕ್ಕೆ ತೆರಳಿ ವಿದ್ಯಾರ್ಥಿ ಗಳಿಗೆ ಉಚಿತ ಪುಸ್ತಕಗಳನ್ನು ನೀಡಿ ಬಳಿಕ ನಿವೃತ್ತಿ ಶಿಕ್ಷಕರಾದ ಮರಿ ಕೆಂಚಪ್ಪ ರವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಧ್ಯೆ, ಜ್ಞಾನ ಮಾಹಿತಿ ಪಡೆಯುವುದು ಈಗ ಸುಲುಭವಾದರೂ ಯಾವುದು ಸರಿ, ಯಾವುದು ತಪ್ಪು ಎಂಬುವುದನ್ನು ತಿಳಿ ಹೇಳಲು ಗುರುವೊಬ್ಬರ ಅಗತ್ಯ ಇದ್ದೇ ಇರುತ್ತದೆ.
ಸರಳತೆ, ತಾಳ್ಮೆ ಸಮಗ್ರತೆಯ ಪ್ರತಿರೂಪವಾಗಿ ಶಿಕ್ಷಕರನ್ನು ನಾವು ಕಾಣುತ್ತೇವೆ. ಶಿಕ್ಷಕರೇ ನಿಜವಾದ ಅನುಕರಣೆಯ ವ್ಯಕ್ತಿಗಳು ನಮ್ಮ ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿ ಸರಿ ಮಾರ್ಗವನ್ನು ತೋರುವವರು ಶಿಕ್ಷಕರು ಎಂದು ವಿಶ್ಲೇಷಿಸಿದರು.
ಶಿಕ್ಷಕರು ಮಹಾಕಟ್ಟಡದ ಬುನಾದಿಯಂತೆ ಈ ಬುನಾದಿಯು ಸದಾ ಅದೃಷ್ಟವಾಗಿದ್ದು ಭೂಗತವಾಗಿದ್ದು ಮೇಲೆದ್ದು ಸುಂದರ ವಾಗಿ ಕಾಣುವ ಕಟ್ಟಡಕ್ಕೆ ಆಧಾರ ಭೂಗತವಾದ ಈ ಬುನಾದಿಯಿಲ್ಲದೆ ಆ ಕಟ್ಟಡವು ಕುಸಿಯುವುದು ಶತಸ್ಸಿದ್ದ ಹೀಗೆಯೇ ರಾಷ್ಟಿçÃಯ ಮೌಲ್ಯಗಳೆಂಬ ಕಟ್ಟಡದ ಬುನಾದಿಯೆಂದರೆ ಶಿಕ್ಷಕರು ಆದ್ದರಿಂದ ನಾವುಗಳು ಶಿಕ್ಷಕರನ್ನು ಪ್ರೀತಿಯಿಂದ ಕಾಣಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ, ಗ್ರಾಮದ ಮುಖಂಡರಾದ ಆನಂದ ಗೌಡ, ಬಸವನಗೌಡ, ಶಿವಕುಮಾರ್, ಲಕ್ಷಿö್ಮ ಮತ್ತು ಶಾಲೆಯ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಜರಿದ್ದರು.