ಹರಪನಹಳ್ಳಿ: ವಿಶ್ವ ಮಲೇರಿಯಾ ದಿನಾಚರಣೆ ೨೫ ಏಪ್ರಿಲ್ ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ದದ ಹೋರಾಟವನ್ನು ತೀವ್ರ ಗೊಳಿಸೋಣ. ಮಲೇರಿಯಾರೋಗ ದಿಂದ ಮುಕ್ತರಾಗಲು ಸೊಳ್ಳೆಗಳ ನಿರ್ಮೂಲನೆಯಿಂದಲೇ ಸಾಧ್ಯ. ಯಾವುದೇ ಜ್ವರವಿರಲಿ ರಕ್ತಪರೀಕ್ಷೆ ಮಾಡಿಸಿಕೊಳ್ಳಿ. ಮಲೇರಿಯಾ ಖಚಿತ ಎಂದು ದೃಢಪಟ್ಟಲ್ಲಿ ತ್ವರಿತ ಚಿಕಿತ್ಸೆ ನೀಡಲಾಗುವುದು ಎಂದು ಪ್ರಾಥಮಿಕ ಆರೋಗ್ಯಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅರವಿಂದ್ ತಿಳಿಸಿದರು.
ತಾಲೂಕಿನ ಚಿಗಟೇರಿ ಗ್ರಾಮದ ಅಂಗನವಾಡಿಕೇAದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿAದ ವಿಶ್ವ ಮಲೇರಿಯಾ ದಿನಾಚರಣೆ ಜಾಗೃತಿ ಕಾರ್ಯಕ್ರಮ ವನ್ನು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿ ವರ್ಷ ಏಪ್ರಿಲ್ ೨೫ ರಂದು ಮಲೇರಿಯಾದ ಬಗ್ಗೆ ಜಾಗೃತಿ ಮೂಢಿಸ ಬೇಕಾಗಿದೆ. ಮಲೇರಿಯಾ ಚಿಕಿತ್ಸೆಯಾದಕ್ಲೋರೋಕ್ವೀನ್ ಮತ್ತು ಪ್ರೆöÊಮಾಕ್ವಿನ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಮತ್ತು ರೋಗಪೀಡಿತ ಪ್ರದೇಶಗಳಲ್ಲಿ ಸೊಳ್ಳೆಗಳ ನಿರ್ಮೂಲನೆಗಾಗಿ ಬಳಸುವ ಡಿ.ಡಿ.ಟಿ ಸಿಂಪರಣೆ ಮಾಡಬೇಕು ಎಂದು ತಿಳಿಸಿದರು.
ಭುವನೇಶ್ವರಿ ಸಿ.ಜಿ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಚಿಗಟೇರಿ ಇವರು ಮಲೇರಿಯಾ ಮನುಕುಲದ ಇತಿಹಾಸದಲ್ಲೇ ಒಂದು ಹಳೆಯ ಪಿಡುಗು. ಆಡು ಮುಟ್ಟದ ಸೊಪ್ಪಿಲ್ಲ ಮಲೇರಿಯಾ ಗೊತ್ತಿಲ್ಲದ ಜನರಿಲ್ಲ. ಎಂ ಗಾದೆಮಾತನಂತಿದೆ ಮಲೇರಿಯ ರೋಗ ಯಾವದೇವರ ಶಾಪವೂ ಅಲ್ಲ, ಪಾಪದ ಪ್ರತಿಫಲವೂ ಅಲ್ಲ. ಇದು ಮಾನವನ ಬೇಜವಬ್ದಾರಿಯ ಕಳಕಳಿ ಇರಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಚಂದ್ರೇಗೌಡ ತ್ಯಾಗರಾಜ್ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಗಳು, ಕೆಂಚಮ್ಮಗ್ರಾಮ ಪಂಚಾಯತ್ ಸದಸ್ಯರು, ಅನಿತಾ ಆಶಾ ಫೆಸಿಲಿಟೇಟರ್, ಆಶಾ ಕಾರ್ಯಕರ್ತೆಯರು. ಹಾಗೂ ಅಂಗನವಾಡಿ ಕಾರ್ಯರ್ತೆಯರು ಉಪಸ್ಥಿತರಿದ್ದರು.