ಮಂಗಳೂರು: ಪ್ಯಾಲೆಸ್ತೀನ್ (Palestine) ಬೆಂಬಲಿಗರಿಗೆ ಇಸ್ರೇಲ್ (Israel) ಅನ್ನು ಸಹಿಸಲಾಗುತ್ತಿಲ್ಲ ಮಾತ್ರವಲ್ಲ, ತಮ್ಮೂರಲ್ಲಿ ಇಸ್ರೇಲ್ ಎಂಬ ಹೆಸರನ್ನು ಬಸ್ಸಿಗೆ ಇಟ್ಟರೂ ಸಹಿಸಲು ಸಾಧ್ಯವಾಗುತ್ತಿಲ್ಲ. ಮಂಗಳೂರಿನಲ್ಲಿ (Mangalore News) ಖಾಸಗಿ ಬಸ್ಸು ಮಾಲೀಕರೊಬ್ಬರು ತಮ್ಮ ಬಸ್ಸಿಗೆ ʼಇಸ್ರೇಲ್ ಟ್ರಾವೆಲ್ಸ್ʼ (Israel Travels) ಎಂದು ಹೆಸರು ಇಟ್ಟದ್ದನ್ನು ಕಂಡು ಕಿಡಿಕಿಡಿಯಾಗಿರುವ ಸ್ಥಳೀಯ ಪ್ಯಾಲೆಸ್ತೀನ್ ಬೆಂಬಲಿಗರು, ಅದನ್ನು ತೆಗೆಯುವಂತೆ ಬಸ್ ಮಾಲಿಕರಿಗೆ ಧಮಕಿ (Threat) ಹಾಕಿ, ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಧ್ಯ ಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಹೆಚ್ಚುತ್ತಿರುವಂತೆಯೇ ಮಂಗಳೂರಿನಲ್ಲಿ ಪ್ಯಾಲೆಸ್ತೀನ್ ಮೂಲದ ಭಯೋತ್ಪಾದಕರ ಪರ ಬೆಂಬಲ ಹೆಚ್ಚಾಗಿದೆ. ಪ್ಯಾಲೆಸ್ತೀನ್ ಬೆಂಬಲಿಗರ ಆಕ್ರೋಶದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಬಸ್ ಮಾಲೀಕರೊಬ್ಬರು ʼಇಸ್ರೇಲ್ ಟ್ರಾವೆಲ್ಸ್ʼ ಎಂಬ ತಮ್ಮ ಬಸ್ ಹೆಸರನ್ನೇ ಬದಲಿಸಬೇಕಾಗಿ ಬಂದಿದೆ.
ಇಸ್ರೇಲ್ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಬಸ್ ಮಾಲೀಕ ಲೆಸ್ಟರ್, ಕಳೆದ 12 ವರ್ಷಗಳಿಂದ ಇಸ್ರೇಲ್ನಲ್ಲಿ ಉದ್ಯೋಗ ನಿಮಿತ್ತ ಕುಟುಂಬದೊಂದಿಗೆ ನೆಲೆಸಿದ್ದಾರೆ. ಇವರು ತಮ್ಮ ಬಸ್ಗೆ ಇಸ್ರೇಲ್ ಹೆಸರು ಇಟ್ಟಿದ್ದರು. ಇದನ್ನು ಸಹಿಸದ ಪ್ಯಾಲೆಸ್ತೀನ್ ಬೆಂಬಲಿಗರು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಬಸ್ಸಿನ ಹೆಸರು ಬದಲಿಸದಿದ್ದರೆ ಸೀಜ್ ಮಾಡಿಸುತ್ತೇವೆ ಎಂದು ಬೆದರಿಸಿದ್ದರು. ಇದರ ಬೆನ್ನಲ್ಲೇ ಲೆಸ್ಟರ್ ಅವರು ಇಸ್ರೇಲ್ ಹೆಸರು ಬದಲಿಸಿ ʼಜೆರುಸಲೇಂ ಟ್ರಾವೆಲ್ಸ್ʼ ಎಂದು ಹೆಸರು ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: Study Committee: ಎಸ್‌ಸಿ, ಎಸ್‌ಟಿ ಪತ್ರಿಕಾ ಮಾಲೀಕರು, ಪತ್ರಕರ್ತರ ಸ್ಥಿತಿಗತಿ ಅಧ್ಯಯನಕ್ಕೆ ಸಮಿತಿ ರಚಿಸಿದ ಸರ್ಕಾರ