Tuesday, 5th November 2024

ಮಾವಿನಿಂದ ಸಿಹಿ ಬದುಕು

ಹಲವು ರಾಜ್ಯಗಳಿಗೆ ರವಾನೆಯಾಗುವ ಕಸಿ ಸಸಿಗಳು

ಎರಡು ವರ್ಷಕ್ಕೇ ಫಲಕೊಡುವ ಮಾವು

ವಿಶೇಷ ವರದಿ: ವಿನುತಾ ಹೆಗಡೆ ಶಿರಸಿ

ಹಣ್ಣಿನ ರಾಜ ಮಾವು ಈಗ ಇಲ್ಲಿನ ರೈತರ ಪಾಲಿಗೆ ಸಿಹಿಯಾಗಿದೆ. ಯಾವುದೇ ತಳಿಯ ಮಾವನ್ನಾದರೂ ಇಲ್ಲಿ ಕಸಿ ಮಾಡಿ ಸಿಹಿಯಾಗಿಸುತ್ತಾರೆ. ಉತ್ತರ ಕನ್ನಡ ಜಿಯ ಹಳಿಯಾಳ ತಾಲೂಕಿನ ರೈತರು ಈ ಕಾರ್ಯದಲ್ಲಿ ತೊಡಗಿದ್ದಾರೆ. ರಾಷ್ಟ್ರೀಯ ತೋಟಗಾರಿಕಾ ಇಲಾಖೆಯ ಸಸ್ಯೋತ್ಪಾದನೆಗೆ ನೀಡಲಾಗುವ ಸಹಾಯ ಧನದಲ್ಲಿ ರೈತರು ಈ ಆದಾಯದಾಯಕ ಕಸಿ ಕಾರ್ಯದಲ್ಲಿ ತೊಡಗಿದ್ದಾರೆ.

ಜ್ಯೂಸ್ ಫ್ಯಾಕ್ಟರಿಯಲ್ಲಿ ತ್ಯಾಜ್ಯವಾಗಿ ಉಳಿಯುವ ಮಾವಿನ ಗೊರಟೆಯನ್ನು ತಂದು ಅದನ್ನು ಇಳಿಜಾರಿನ ಪ್ರದೇಶದಲ್ಲಿ ಹಾಕಿ ಅದಕ್ಕೆ ದಿನವೂ ಹಾಕಿ ಮೊಳಕೆ ಬಂದ ಮೇಲೆ ಪ್ಲಾಸ್ಟಿಕ್ ಚೀಲದಲ್ಲಿ ಮಣ್ಣಿನಲ್ಲಿ ಹಾಕಿ ಸಸಿಯಾಗಿಸಿ ನಂತರ ಅದಕ್ಕೆ ವಿಶೇಷ ತಳಿಯ ಆಫೂಸ್, ಮಲಗೋವಾ, ಕೇಸರ್, ಆಲಾನ್ಸೋ,
ರಸಪೂರಿ ಮುಂತಾದ ಮಾವಿನ ಗಿಡದ ಕಾಂಡವನ್ನು ತಂದು ಕಸಿ ಮಾಡಲಾಗುತ್ತದೆ.

ಬೇರೆ ರಾಜ್ಯಗಳಿಗೂ ರವಾನೆ: ಕಸಿ ಮಾಡಲಾದ ಸಸಿಯನ್ನು ರಾಜ್ಯವೊಂದೇ ಅಲ್ಲದೇ ಗೋವಾ, ಮಹಾರಾಷ್ಟ, ಮುಂಬೈ ಮುಂತಾದ ರಾಜ್ಯಗಳಿಗೂ ಇದನ್ನೂ ಕಳಿಸಲಾಗುತ್ತದೆ. ಅಲ್ಲದೇ ಮಂಡ್ಯದ ರೈತರೂ ಇಲ್ಲಿನ ಮಾವಿನ ಸಸಿಯನ್ನು ತೆಗೆದುಕೊಂಡು ಹೋಗುತ್ತಾರೆ. ಅಷ್ಟೊಂದು ಉತ್ತಮವಾಗಿ ಇಲ್ಲಿ ಮಾವಿನ
ತಳಿಗಳ ಕಸಿ ಮಾಡಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ ಎರಡು ವರ್ಷಕ್ಕೇ ಫಲಕೊಡುವ ಮಾವುಗಳಿದ್ದು, ಒಂದೊಂದು ಗಿಡವು 150 ರಿಂದ 200
ರುಪಾಯಿಗೆ ಮಾರಾಟವಾಗಲಿದೆ. ಚಿಕ್ಕ ಸಸಿ ಕಸಿ ಕಟ್ಟಿದ್ದನ್ನೂ ಗ್ರಾಹಕರು ಒಯ್ಯಲಿದ್ದು ಇದಕ್ಕೆ 50 ರಿಂದ 70 ರುಪಾಯಿ ಬೆಲೆಯಿದೆ.

***

ಇಲ್ಲಿ ಉತ್ತಮವಾದ ಕಸಿ ಕಟ್ಟಲಾದ ಮಾವಿನ ಸಸಿ ಸಿಗುತ್ತದೆ ಎಂದು ತೆಗೆದುಕೊಂಡು ಹೋಗಲು ನಾವು ಬೆಳಗಾವಿಯಿಂದ ಬಂದಿದ್ದೇವೆ. ಇಲ್ಲಿ ವಿಶೇಷ ತಳಿಯ ಸಸಿಗಳು ಸಿಗಲಿವೆ. ಇಲ್ಲಿಯ ಸಸಿ ನಾವು ನಾವು ಸಾಕಷ್ಟು ಬಾರಿ ಒಯ್ದಿದ್ದು ಇದು ತುಂಬಾ ಚನ್ನಾಗಿದೆ.
– ಸುಷ್ಮಾ ಬೆಳಗಾವಿ

ಕಸಿ ಕಟ್ಟವ ರೈತರು ಹೊರಗಿನಿಂದ ಕಸಿಗೆ ಕಾಂಡಗಳನ್ನು ತಂದು ಇಲ್ಲಿನ ಸಸಿಗೆ ಕಸಿ ಮಾಡುತ್ತಾರೆ. ಇದು ನಮ್ಮ ಜಿಯಲ್ಲಿಯೇ ಉತ್ತಮವಾಗಿ ಕಸಿ ತಯಾರಿಸ ಲಾಗುತ್ತದೆ. ಒಂದು ಗಿಡಕ್ಕೆ ಐದರಿಂದ ಆರು ಬಗೆಯ ಮಾವಿನ ಕಸಿಯನ್ನೂ ಮಾಡುತ್ತಾರೆ. ಈ ಕಸಿ ಮಾಡಿ ಮಾವಿನ ಗಿಡ ಮಾರಾಟ ಮಾಡುವುದರಿಂದ ಉತ್ತಮ ಆದಾಯ ಬರಲಿದೆ. ಇವರಿಂದ ಬೇಡಿಕೆಗೆ ಅನುಗುಣವಾಗಿ ಕಸಿ ಮಾಡುವುದು ಕಷ್ಟ . ಈಗಾಗಲೇ ಹತ್ತು ಲಕ್ಷ ಸಸಿಗಳ ಮಾರಾಟವಾಗಿದೆ.
ತೊಗಲಪ್ಪ ಹಲಗಿ ಸ್ಥಳೀಯ

ನಮ್ಮ ಹಳಿಯಾಳ ತೆರಗಾವರ್‌ನಲ್ಲಿಯ ವಿಶೇಷವೆಂದರೆ ಒಂದರಲ್ಲಿ ಎರಡು ಮಾವಿನ ಒರಟೆಯನ್ನು ಹಾಕಿ ಸಸಿ ಮಾಡುತ್ತೇನೆ. ಇದರಿಂದ ಗ್ರಾಹಕರು ಒಯ್ಯುತ್ತಾರೆ. ೨೦ ಸಾವಿರಕ್ಕೂ ಹೆಚ್ಚು ಸಸಿಗಳನ್ನು ನಾವು ಒಂದು ಸೀಸನ್ನಿಗೆ ಮಾಡುತ್ತೇವೆ. ಇದರಿಂದ ಲಾಭ ಇರುವುದರಿಂದ ನೂರಾರು ರೈತರೂ ಇದನ್ನು ಇಲ್ಲಿ ಬಂದು ಕಲಿತು ಹೋಗಿದ್ದಾರೆ.

– ಭೀಮಣ್ಣ ಕರ್ಜಗ

ಮಾವು ಕಸಿ ಮಾಡುವ ರೈತ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿಯಲ್ಲಿ ನಾವು ರೈತರಿಗೆ ಸಹಾಯಧನವನ್ನು ನೀಡುತ್ತಿದ್ದು, ಕಳೆದ ಬಾರಿ ಲಕ್ಷ ಸಸಿಯನ್ನು ಈ ರೈತರು ತಯಾರಿಸಿದ್ದರು. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಲಕ್ಷಾಂತರ ರುಪಾಯಿ ಲಾಭವನ್ನು ರೈತರು ಪಡೆದಿದ್ದಾರೆ. ಅಂತೆಯೇ ಸರಕಾರದ, ತೋಟಗಾರಿಕಾ ಯೋಜನೆಯ ಲಾಭವನ್ನು ಪಡೆಯಬೇಕು.
-ಎ.ಆರ್. ಹಿರಿಯಾಳ ತೋಟಗಾರಿಕಾ
ಇಲಾಖೆ ಸಹಾಯಕ ನಿರ್ದೇಶಕ, ಹಳಿಯಾಳ