-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವೆಡ್ಡಿಂಗ್ ಫ್ಯಾಷನ್‌ನಲ್ಲಿ ಮ್ಯಾಚಿಂಗ್ ಕಮರ್‌ಬಾಂದ್ (ಸೊಂಟದ ಪಟ್ಟಿಗಳು) ಟ್ರೆಂಡಿಯಾಗಿವೆ. ಮೊದಲಿನಂತೆ ಎಲ್ಲದಕ್ಕೂ ಒಂದೇ ಬಗೆಯ ಕಮರ್‌ಬಾಂದ್ (Matching Kamarband Fashion) ಧರಿಸುವ ಕಾನ್ಸೆಪ್ಟ್ ಸದ್ಯ ಸೈಡಿಗೆ ಸರಿದಿದೆ. ಬದಲಿಗೆ ಆಯಾ ಔಟ್‌ಫಿಟ್‌ಗಳಿಗೆ ಸೂಟ್ ಆಗುವಂತಹ ಕಸ್ಟಮೈಸ್ಡ್ ಮ್ಯಾಚಿಂಗ್ ಕಮರ್‌ಬಾಂದ್ ಧರಿಸುವ ಸ್ಟೈಲ್ ಸ್ಟೇಟ್ಮೆಂಟ್ ಎಲ್ಲೆಡೆ ಕಾಮನ್ ಆಗಿದೆ.
ಏನಿದು ಮ್ಯಾಚಿಂಗ್ ಕಮರ್‌ಬಾಂದ್?
ಧರಿಸುವ ಉಡುಪಿಗೆ ಅಥವಾ ಸೀರೆಗೆ ಮ್ಯಾಚ್ ಆಗುವಂತಹ ಫ್ಯಾಬ್ರಿಕ್‌ನಲ್ಲಿ ಇವನ್ನು ಸಿದ್ಧಪಡಿಸಲಾಗಿರುತ್ತದೆ. ಇವುಗಳಲ್ಲಿ ಕ್ಲಾತಿಂಗ್, ಸಿಲ್ಕ್, ಡಿಸೈನರ್ ಲೇಸ್, ಕುಂದನ್, ಕಲಾಂಕಾರಿ, ಜರ್ದೋಸಿ ಹೀಗೆ ನಾನಾ ಬಗೆಯ ಡಿಸೈನ್‌ನವು ಪ್ರಚಲಿತದಲ್ಲಿವೆ.
ಕಸ್ಟಮೈಸ್ಡ್ ಕಮರ್‌ಬಾಂದ್
ಕಸ್ಟಮೈಸ್ಡ್ ಕಮರ್‌ಬಾಂದ್‌ಗಳನ್ನು ನಮಗೆ ಬೇಕಾದ ಡಿಸೈನ್‌ನಲ್ಲಿ ಮಾಡಿಸಬಹುದು. ಧರಿಸುವ ಡಿಸೈನರ್ವೇರ್‌ಗೆ ಮ್ಯಾಚ್ ಆಗುವಂತೆ, ಇಲ್ಲವೇ ಕಾಂಟ್ರಾಸ್ಟ್ ಶೇಡ್‌ನಲ್ಲಿಇವನ್ನು ಬೇಕಾದ ಅಳತೆಗೆ ತಕ್ಕಂತೆ ಡಿಸೈನರ್ ಬಳಿ ರೆಡಿ ಮಾಡಿಸಿಕೊಳ್ಳಬಹುದು. ಈ ಕಮರ್‌ಬಾಂದ್‌ಗಳು ನಿರ್ದಿಷ್ಟ ಅಳತೆ ಹಾಗೂ ಡಿಸೈನ್‌ನ ಮಾನದಂಡ ಹೊಂದಿರುವುದಿಲ್ಲ! ಬದಲಿಗೆ ಅವರವರ ವೇಸ್ಟ್‌ಲೈನ್‌ಗೆ ತಕ್ಕಂತೆ ಸಿದ್ಧಪಡಿಸಬಹುದು ಎನ್ನುತ್ತಾರೆ ಕಮರ್‌ಬಾಂದ್ ಡಿಸೈನರ್ ರೀಟಾ.
ಸೀರೆಗೂ ಮ್ಯಾಚಿಂಗ್ ಕಮರ್‌ಬಾಂದ್
ಉಡುವ ಸಿಲ್ಕ್ ಸೀರೆಯಿಂದಿಡಿದು ಕ್ಯಾಶುವಲ್ ಲುಕ್ ನೀಡುವ ಯಾವುದೇ ಸೀರೆಗೂ ಈ ಮ್ಯಾಚಿಂಗ್ ಕ್ಲಾತಿಂಗ್ ಕಮರ್‌ಬಾಂದ್ ಧರಿಸಬಹುದು. ನೋಡಲು ಮನಮೋಹಕವಾಗಿ ಕಾಣುವ ಇವು ಪರ್ಫೆಕ್ಟ್ ಮ್ಯಾಚ್ ಆಗುತ್ತವೆ. ಉದಾಹರಣೆಗೆ., ರೇಷ್ಮೆ ಸೀರೆಗೆ ಅದರ ಬಾರ್ಡರ್‌ನಂತೆ ಕಾಣುವ ಬಾರ್ಡರ್ ಕಮರ್‌ಬಾಂದ್ ಧರಿಸಬಹುದು. ಈ ಸೊಂಟದ ಪಟ್ಟಿಯನ್ನು ಟೈಲರ್ ಸಹಾಯ ಇಲ್ಲವೇ ಡಿಸೈನರ್‌ಗಳ ಕೈಗಳಲ್ಲಿ ಡಿಸೈನ್ ಮಾಡಬಹುದು. ಅಷ್ಟೇಕೆ? ಖುದ್ದು ನೀವೇ ವಿನ್ಯಾಸ ಮಾಡಬಹುದು. ಬಾರ್ಡರ್ ಸೂಟ್ ಆಗುವಂತೆ ಪಟ್ಟಿ ಸಿದ್ಧಪಡಿಸಿ ಅದಕ್ಕೆ ಹಿಂದೆ ಕಟ್ಟಲು ಬಟನ್ ಇರಿಸಿದರಾಯಿತು ಎನ್ನುತ್ತಾರೆ ಸ್ಟೈಲಿಸ್ಟ್ ರಾಣಿ.
ಆಕರ್ಷಕ ಕಮರ್‌ಬಾಂದ್ ಸೀಕ್ರೇಟ್
ವೆಡ್ಡಿಂಗ್ ಫ್ಯಾಷನ್‌ವೇರ್‌ಗಳಿಗೆ ಧರಿಸುವ ಕಮರ್‌ಬಾಂದ್‌ಗಳಿಗೆ ಮತ್ತಷ್ಟು ಮೆರಗು ನೀಡಲು ಗೋಲ್ಡನ್, ಸಿಲ್ವರ್ ಎಂಬ್ರಾಯ್ಡರಿ ಹಾಗೂ ಆರಿ ವರ್ಕ್‌ನಂತಹ ಹ್ಯಾಂಡ್ ಡಿಸೈನ್‌ಗಳ ಕಸೂತಿ ಕೂಡ ಮಾಡಲಾಗುತ್ತದೆ. ಇವು ಇಡೀ ಉಡುಪನ್ನು ಹೈಲೈಟ್ ಮಾಡುತ್ತವೆ. ಧರಿಸಿದಾಗ ಆಕರ್ಷಕವಾಗಿ ಕಾಣುತ್ತವೆ. ಗಾಗ್ರ ಸ್ಟೈಲ್ ಸೆಲ್ವಾರ್, ರೇಷ್ಮೆಯ ಲೆಹೆಂಗಾ, ಗಾಗ್ರ-ಚೋಲಿ ಇಲ್ಲವೇ ಸೀರೆಗಳೊಂದಿಗೆ ಧರಿಸಿದಲ್ಲಿ ಗ್ರ್ಯಾಂಡ್ ಲುಕ್ ದೊರಕುವುದಂತೂ ಗ್ಯಾರಂಟಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಸೈಡಿಗೆ ಮೆಟಲ್ ಕಮರ್‌ಬಾಂದ್
ಗ್ರ್ಯಾಂಡ್ ಹಾಗೂ ಬ್ರೈಡಲ್ ಲುಕ್ ನೀಡುತ್ತಿದ್ದ ಗೋಲ್ಡ್ ಆ್ಯಂಡ್ ಸಿಲ್ವರ್ ಕೋಟೆಡ್ ಕಮರ್‌ಬಾಂದ್‌ಗಳು, ಸದ್ಯ ಇನ್‌ಸ್ಟಂಟ್ ಕಮರ್‌ಬಾಂದ್ ಆಗಿವೆ. ಸೈಡಿಗೆ ಸರಿದಿವೆ.
ಈ ಸುದ್ದಿಯನ್ನೂ ಓದಿ | Winter Gloves Fashion: ಚಳಿಗಾಲದ ಫ್ಯಾಷನ್‌ನಲ್ಲಿ ಎಂಟ್ರಿ ನೀಡಿದ ಬಗೆಬಗೆಯ ಗ್ಲೌವ್ಸ್
ಮ್ಯಾಚಿಂಗ್ ಕಮರ್‌ಬಾಂದ್ ಪ್ರಿಯರಿಗೆ ಟಿಪ್ಸ್
- ಟ್ರೆಡಿಷನಲ್‌ವೇರ್‌ಗಳಿಗೆ ಸೂಪರ್ಬ್ ಲುಕ್ ನೀಡುತ್ತವೆ.
- ಲೆಹೆಂಗಾ, ರೇಷ್ಮೆ- ಲಂಗಗಳಿಗೂ ಅಂದವಾಗಿ ಕಾಣಿಸುತ್ತವೆ.
- ಡಿಸೈನರ್ ಮಲ್ಟಿ ಶೇಡ್ ಕಮರ್‌ಬಾಂದ್ ಎಲ್ಲವಕ್ಕೂ ಸೂಟ್ ಆಗುತ್ತವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)