ಮುದ್ದೇಬಿಹಾಳ: ಮಾಧ್ಯಮಗಳು ಸಮಾಜದಲ್ಲಿ ಜಾಗ್ರತರಾಗಿ ನೊಂದವರ ದೀನ ದಲಿತರ ಪರವಾಗಿ ಕಾರ್ಯನಿರ್ವಹಿಸುವ ದಲ್ಲದೇ ಸಮಾಜದ ಓರೆಕೋರೆಗಳನ್ನು ತಿದ್ದುವ ಕಾರ್ಯ ಗಳನ್ನು ಮಾಡಬೇಕು ಎಂದು ಕುಂಟೋಜಿಯ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ಹೇಳಿದರು.
ಪಟ್ಟಣದ ಎಪಿಎಂಸಿಯಲ್ಲಿರುವ ದಿ.ಕರ್ನಾಟಕ ಕೋ-ಆಪ್ ಬ್ಯಾಂಕ್ ಸಭಾಭವನದಲ್ಲಿ, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶ್ರೀ ಕುಮಾರೇಶ್ವರ ಜೀವನವಿಕಾಸ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ, ಪದಗ್ರಹಣ, ಪತ್ರಿಕಾ ವಿತರಕರಿಗೆ ಸನ್ಮಾನ ಹಾಗೂ ಜರ್ಕಿನ್ ವಿತರಣೆ, ಪ್ರಶಸ್ತಿ ಪ್ರಧಾನ, ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಈ ಹಿಂದೆ ಜನತೆ ಕತ್ತಲನ್ನು ಹುಡುಕುತ್ತಿದ್ದರೆ ಮಾಧ್ಯಮಗಳು ಬೆಳಕಿನ ದಾರಿಗೆ ನಡೆಸು ತ್ತಿದ್ದವು. ಆದರೆ ಈಗ ಜನತೆ ಬೆಳಕನ್ನು ಹುಡುಕುತ್ತಿದ್ದರೆ ಮಾಧ್ಯಮಗಳು ಜನತೆಗೆ ಕತ್ತಲೆಡೆಗೆ ಕೊಂಡೊಯ್ಯುತ್ತದೆ.