ಇಂಡಿ: ಪುರಸಭೆ ಸಭಾ ಭವನದಲ್ಲಿ ಮಂಗಳವಾರ ಪುರಸಭೆ ಅಧ್ಯಕ್ಷತೆ ಬನ್ನೇಮ್ಮಾ ಹದರಿ, ಉಪಾಧ್ಯಕ್ಷ ಇಸ್ಮಾಯಿಲ್ ಅರಬ ನೈತೃತ್ವದಲ್ಲಿ ವಿಶೇಷ ಸಾಮಾನ್ಯ ಸಭೆ ಜರುಗಿತು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮನೆ ಮನೆ ಸಂಪರ್ಕ ನೀಡುವ ಕುರಿತು, ಪುರಸಭೆಗೆ ಹಸ್ತಾಂತರಿಸುವ ವಿಚಾರವಾಗಿ ಸಭೆಯಲ್ಲಿ ಮಂಡನೆ ಮಾಡುತ್ತಿರುವಾಗಲೆ ಸಭೆಯಲ್ಲಿ ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ದೆವೇಂದ್ರ ಕುಂಬಾರ , ವಿಜಯಕುಮಾರ ಮೂರಮನ್ ನೀರು ಸರಬರಾಜು, ಒಳಚರಂಡಿ ಮಂಡಳಿಯವರು ಎಷ್ಟು ಮನೆಗಳಿಗೆ ನಳ ಅಳವಡಿಸಿದ್ದೀರಿ ? ಪಟ್ಟಣದ ೩ ವಾರ್ಡಗಳಲ್ಲಿ ಇನ್ನು ಚರಂಡಿ ಕಾಮಗಾರಿಗಳೇ ಮಾಡಿಲ್ಲ. ವಾರ್ಡಗಳಲ್ಲಿ ಅರ್ಧ- ಮರ್ದ ಚರಂಡಿ ಕಾಮಗಾರಿ ಮಾಡಿ ಕೈತೋಳೆದುಕೊಂಡಿದ್ದೀರಿ ? ಪುರಸಭೆ ಹ್ಯಾಂಡ್‌ವರ್ ಮಾಡಿಕೊಳ್ಳಬೇಡಿ ಎಂದು ಅಧಿಕಾರಿಯ ವಿರುಧ್ಧ ಹರಿಹಾಯ್ದರು.
ಒಂದು ಕಾಮಗಾರಿ ಮುಗಿದ ನಂತರ ೫ ವರ್ಷ ಅವಧಿವರೆಗೆ ೨೪*೦೭ ನೀರು ನಿರ್ವಹಣೆ ಜವಾಬ್ದಾರಿ ನಗರ ನೀರು ಸರಬರಾಜು ಗುತ್ತಿಗೆದಾರರಿಗೆ ಸಂಬ0ದಿಸಿದ್ದು. ನೀರಿನ ಪೌಡರ್ ಖರೀದಿ ಪುರಸಭೆಯಿಂದಲೆ ಮಾಡುತ್ತಿರುವುದು ಮತ್ತಷ್ಟು ಹೊರೆಯಾಗಿದೆ ೨೪*೭ ನೀರು ಸರಬರಾಜಿನ ಪೈಪ. ನಳ ಜಂಗು ಗಟ್ಟಿ ಕೋಳೆತಿವೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಅಧಿಕಾರಿಗಳ ವಿರುಧ್ಧ ಸದಸ್ಯ ಉಮೇಶ ದೇಗಿನಾಳ ಹರಿಹಾಯುತ್ತಿದಂತೆ ಇನ್ನೋರ್ವ ಸದಸ್ಯ ಅಸ್ಲಂ ಕಡಣಿ ನೀರಿನ ಟ್ಯಾಪ ಮುರಿದು ಬಿದ್ದಿದೆ ಎಂದು ೫-೬ ತಿಂಗಳುಗಳಿAದ ಹೇಳಿದ್ದರೂ ಕ್ಯಾರೆ ಎಂದಿಲ್ಲ ಮೇಂಟೇನೇನ್ಸ ಅಂದರೆ ಇದೇನಾ ? ಎಂದು ಪ್ರಶ್ನಿಸಿದರು.
ಪಟ್ಟಣದಲ್ಲಿ ನೀರಿನ ಬಿಲ್ಲ ಬಾಕಿ ಎಷ್ಟು ಉಳಿದಿದೆ ಹಾಗಾದರೆ ಕಾರಣ ನೀಡಿ ಎಂದು ಪರಸಭೆ ಸದಸ್ಯ ಅನೀಲಗೌಡ ಬಿರಾದಾರ ಪ್ರಶ್ನಿಸಿದಾಗ ಪುರಸಭೆ ಅಧಿಕಾರಿ ಕೆ.ಎಸ್ ಲಕ್ಷಿö್ಮÃಶ ಮಾತನಾಡಿ ಕಳೆದ ಬಾರಿ ಕೋರೋನಾದಿಂದ ಸ್ವಲ್ಪ ವಿನಾಯತಿ ನೀಡಲಾ ಗಿತ್ತು. ನಂತರ ನೀರಿನ ದರದಲ್ಲಿಕಡಿಮೆ ಮಾಡಲಾಗಿದೆ ಹೀಗಾಗಿ ನೀರಿನ ಬಿಲ್ಲ ಕಡಿಮೆ ಬರುತ್ತಿದ್ದು ಹಿಂಬಾಕಿ ಬಿಲ್ಲ ೧ ಕೋಟಿ ೪೦ ಲಕ್ಷ ಬಾಕಿ ಉಳಿದಿದೆ ಎಂದು ಉತ್ತರಿಸಿದಾಗ ನೋಡಿ ಪರಸಭೆ ಇದರಿಂದಲೇ ಅಭಿವೃದ್ದಿ ಶೂನ್ಯವಾಗುತ್ತದೆ ಕೂಡಲೆ ಯಾರು ಬಿಲ್ಲ ಕಟ್ಟಿಲ್ಲ ಅಂತಹ ಗ್ರಾಹಕರ ನಳವನ್ನು ಸ್ಥಗಿತಗೋಳಿಸಿ ಎಂದು ಸಭೆಯಲ್ಲಿ ಎಲ್ಲ ಸದಸ್ಯರು ಒಕ್ಕೂರಲಿನಿಂದ ಸಮ್ಮತಿಸಿದರು.
ವಾರ್ಡ ನಂ.೧೬ರಲ್ಲಿ ವಿದ್ಯುತ ಕಂಬಗಳ ಕೂಡಿಸಲು ಪುರಸಭೆಗೆ ಹಣತುಂಬಿದರೂ ಕೂಡಾ ಇಲ್ಲಿತನಕ ಕಾಮಗಾರಿ ಮಾಡಿಲ್ಲ ಯಾಕೆ ಎಂದು ಅಸ್ಲಂ ಕಡಣಿ ಕೂಡಲೆ ಯೋಜನೆ ತಯಾರಿಸಿ ೧೦ ದಿನದಲ್ಲಿ ಕಾಮಗಾರಿಗೆ ತುರ್ತು ಕ್ರಮಕೈಗೋಳ್ಳುವದಾಗಿ ಪುರಸಭೆ ಅಧಿಕಾರಿ ಭರವಸೆ ನೀಡಿದರು.
ಪಟ್ಟಣದಲ್ಲಿ ಅನೇಕ ವರ್ಷಗಳಿಂದ ವಿದ್ಯುತ ಕಂಬಗಳು, ವಾಯರ್ ತೂಕು ಹಿಡಿದೆ ಹಾಗೂ ವಾರ್ಡಗಳಲ್ಲಿ ಅಲ್ಲಲ್ಲಿ ಜೊತು ಬಿದ್ದಿವೆ ಹೀಗಾಗಿ ಬದಲಾವಣೆ ಮಾಡಲು ಹೆಸ್ಕಾಂ ಅಧಿಕಾರಿ ಮೆಡೇದಾರ ಹಾಗೂ ಎಸ್.ಎಸ್ ಮೂಲಿಮನಿ ಇವರಿಗೆ ಪುರಸಭೆ ಸದಸ್ಯರು ತಿಳಿಸಿದರು ನಂತರ ಅಧಿಕಾರಿ ಮಾತನಾಡಿ ೧೫ ಕೋಟಿ ಯೋಜನೆ ಇದಾಗಿದ್ದು ಮಂಜೂರಿಗೆ ಕಳಿಸಲಾಗಿದೆ ಕೆಲ ತಿಂಗಳಲ್ಲಿಯೇ ಪೂರ್ತಿ ಕೆಬಲ್ ಅಳವಿಡಿಸಲಾಗುವುದು ಎಂದು ಉತ್ತರಿಸಿದರು.
ಸ್ಥಳೀಯ ಹಳ್ಳದ ಸಮೀಪ ರುದ್ರಭೂಮಿ ಯಾವುದೇ ಸೌಲಭ್ಯಗಳಿಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಕಂಪೌAಡ, ಗೇಟ ಇಲ್ಲ, ರಾತ್ರಿಯಾದರೆ ಸಾಕು ಕಗ್ಗತ್ತಲೆಯಲ್ಲಿ ಹೆಣ ಶವ ಸಂಸ್ಕಾರ ಮಾಡುವ ಪರಸ್ಥಿತಿ ನಿರ್ಮಾಣವಾಗಿದೆ ಮಳೆಗಾಲದಲ್ಲಿ ದೇವರೆ ಬಲ್ಲ ವಿದ್ಯುತ ಹೈಮಾಸ್,ರಸ್ತೆ ಮಾಡಿ ಪುಣ್ಯಕಟ್ಟಿಕೊಳ್ಳಿ ಎಂದು ಪುರಸಭೆ ಸದಸ್ಯ ಭೀಮಾಶಂಕರ ಮೂರಮನ್ , ಬುದ್ದುಗೌಡ ಪಾಟೀಲ, ಶ್ರೀಶೈಲ ಪೂಜಾರಿ ಸಭೆಯಲ್ಲಿ ತಮ್ಮ ಅಳಲ್ಲನ್ನು ತೊಡಿಕೊಂಡರು.
ಇದಕ್ಕೆ ಸದಸ್ಯೆರೇಲ್ಲರೂ ಸುಧಾರಣೆ ಮಾಡಲು ಅಧಿಕಾರಿಗಳಿ ಗೆ ಸೂಚನೆ ನೀಡಿದರು. ಮೀನುಮಾರುಕಟ್ಟೆ ಪುರಸಭೆಗೆ ಹಸ್ತಾಂತರ ಕುರಿತು ಚರ್ಚಿಸಿ ಸಂರ್ಪೂಣ ಕಾಮಗಾರಿಯಾಗಿದ್ದರೆ ಪುರಸಭೆ ಹ್ಯಾಂಡವರ್ ಮಾಡಿಕೊಳ್ಳಲು ನಿರ್ಣಯಿಸಿದರು. ಪುರಸಭೆ ವ್ಯಾಪ್ತಿಯ ಕಟ್ಟಡಗಳು ಮಳೆಗಾಲದಲ್ಲಿ ಸೋರುತ್ತಿರುವುದರಿಂದ ರೀಪೇರಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾತು.
ಪುರಸಭೆ ಸದಸ್ಯರಾದ ಬುದ್ದಗೌಡ ಪಾಟೀಲ,ಮುಸ್ತಾಕ ಇಂಡಿಕರ್, ಅಯುಬ ಬಾಗವಾನ, ಇಸ್ಮಾಯಿಲ್ ಸೌದಾಗರ, ಶಬ್ಬೀರ ಖಾಜಿ, ಸತೀಶ ಕುಂಬಾರ, ಸೈಪನ್ ಪವಾರ, ಮಚ್ಚೇಂದ್ರ ಕದಂ,ಲಿ೦ಬಾಜಿ ರಾಠೋಡ, ಸಚೀನ ಬೋಳೆಗಾಂವಕರ್ ,ಶ್ರೀಶೈಲ ಪೂಜಾರಿ, ಪುರಸಭೆ ಅಧಿಕಾರಿ ಕೆ.ಎಸ್ ಲಕ್ಷಿö್ಮÃಶ, ಇಇ ಅಶೋಕ ಚಂದನ್ , ಪ್ರವೀಣ ಸೋನಾರ್ ,ಅಸ್ಲಂ ಖಾದಿಂ , ನಜೀರ , ಸೋಮು ರಾಠೋಡ,ಹುಚ್ಚಪ್ಪ ಶಿವಶರಣ, ಮುತ್ತು ಮುರಾಳ, ಮಲ್ಲು ಕಾಲೇಬಾಗ,ಆಸೀಫ ಸೇರಿದಂತೆ ಸಿಬಂದ್ದಿಗಳಿದ್ದರು.