-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಲ್ಲಾ ವರ್ಗದ ಪುರುಷರು ಕೂಡ ಆಕರ್ಷಕವಾಗಿ ಕಾಣಿಸಬಹುದು! ಇದಕ್ಕಾಗಿ ಹಣ ಸುರಿಯಬೇಕಾಗಿಲ್ಲ! ದುಬಾರಿ ಔಟ್ಫಿಟ್ಗಳನ್ನು ಖರೀದಿಸಬೇಕಾಗಿಲ್ಲ! ಕಟ್ಟುಮಸ್ತಾದ ದೇಹವೂ ಇರಬೇಕಾಗಿಲ್ಲ! ಇದಕ್ಕಾಗಿ ಒಂದಿಷ್ಟು ಸ್ಟೈಲಿಂಗ್ ಕಾನ್ಸೆಪ್ಟ್ ಫಾಲೋ ಮಾಡಿದರೇ ಸಾಕು, ಆಕರ್ಷಕ ಲುಕ್ (Men’s Styling Tips) ನಿಮ್ಮದಾಗುವುದು ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್ಗಳು. ಹೌದು, ಸಮೀಕ್ಷೆಯೊಂದರ ಪ್ರಕಾರ, ಬಹುತೇಕ ಪುರುಷರು ಆಕರ್ಷಕವಾಗಿ ಕಾಣಿಸಲು ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಸಲೂನ್ಗಳಲ್ಲಿ ಕಾಲ ಕಳೆಯಬೇಕಾಗುತ್ತದೆ ಎಂದುಕೊಳ್ಳುತ್ತಾರಂತೆ. ಆದರೆ, ಇದು ತಪ್ಪು ಕಲ್ಪನೆ. ತಮ್ಮ ಲೈಫಸ್ಟೈಲಿಂಗ್ನಲ್ಲಿ ಒಂದಿಷ್ಟು ಅಂಶಗಳನ್ನು ಅಳವಡಿಸಿಕೊಂಡಿದ್ದಲ್ಲಿ ಎಂತಹವರೂ ಕೂಡ ಅತ್ಯಾಕರ್ಷಕವಾಗಿ ಕಾಣಿಬಹುದು ಎನ್ನುತ್ತಾರೆ ಮೆನ್ಸ್ ಸ್ಪೆಷಲ್ ಸ್ಟೈಲಿಸ್ಟ್ ಜಿಯಾನ್.
ಬಾಡಿ ಮಾಸ್ ಇಂಡೆಕ್ಸ್ಗೆ ತಕ್ಕಂತೆ ಔಟ್ಫಿಟ್ಸ್ ಆಯ್ಕೆ
ಪುರುಷರು ತಮ್ಮ ಬಾಡಿ ಮಾಸ್ ಇಂಡೆಕ್ಸ್ಗೆ ತಕ್ಕಂತೆ ಡ್ರೆಸ್ಕೋಡ್ ಆಯ್ಕೆ ಮಾಡಬೇಕು. ಉದಾಹರಣೆಗೆ., ಕುಳ್ಳಗಿರುವವರು ಆದಷ್ಟೂ ಬೆಲ್ಬಾಟಮ್, ನ್ಯಾರೋ ಜೀನ್ಸ್ ಅಥವಾ ದೊಗಲೆ ಔಟ್ಫಿಟ್ಗಳನ್ನು ಧರಿಸಕೂಡದು. ಸ್ಲಿಮ್ ಫಿಟ್ ಔಟ್ಫಿಟ್ಸ್ ಧರಿಸಬೇಕು. ಇನ್ನು, ಉದ್ದ ಇರುವವರು ತಲೆಕೆಡಿಸಿಕೊಳ್ಳಬೇಕಾಗಿಲ್ಲ! ಯಾವುದೇ ಔಟ್ಫಿಟ್ ಕೂಡ ಹೊಂದುವುದು. ದಪ್ಪಗಿರುವವರು, ಆದಷ್ಟೂ ಟೈಟಾಗುವ ಬಾಡಿ ಫಿಟ್ ಔಟ್ಫಿಟ್ ಧರಿಸಕೂಡದು.
ವ್ಯಕ್ತಿತ್ವಕ್ಕೆ ತಕ್ಕಂತೆ ಡ್ರೆಸ್ಕೋಡ್
ಕಾರ್ಯನಿರ್ವಹಿಸುವ ಕ್ಷೇತ್ರಕ್ಕೆ ತಕ್ಕಂತೆ ಡ್ರೆಸ್ಕೋಡ್ ಇರಬೇಕು. ಅದನ್ನು ಬಿಟ್ಟು, ಜೋಕರ್ನಂತೆ ಬಿಂಬಿಸುವ ಫಂಕಿ ಔಟ್ಫಿಟ್ಗಳನ್ನು ಕಚೇರಿಗೆ ಧರಿಸಕೂಡದು.
ಔಟಿಂಗ್ಗೆ ತಕ್ಕ ಔಟ್ಫಿಟ್ಸ್
ಆಯಾ ಔಟಿಂಗ್ಗೆ ತಕ್ಕಂತೆ, ಅದರಲ್ಲೂ ರಿಲ್ಯಾಕ್ಸೇಷನ್ಗೆ ಸಾಥ್ ನೀಡುವಂತಹ ಟೀ ಶರ್ಟ್ಸ್, ಪ್ಯಾಂಟ್ಸ್, ಶಾರ್ಟ್ಸ್ ಧರಿಸುವುದು ಸೂಕ್ತ. ಸನ್ ಗ್ಲಾಸ್, ಹ್ಯಾಟ್ ಧರಿಸಿ. ಸೀರಿಯಸ್ ಲುಕ್ ಯಾವುದೇ ಕಾರಣಕ್ಕೂ ಬೇಡ!
ಫುಟ್ವೇರ್ ಜ್ಞಾನ
ನೀವು ಆಕರ್ಷಕವಾಗಿ ಕಾಣಿಸಲು ಬ್ರಾಂಡೆಡ್ ಹಾಗೂ ದುಬಾರಿ ಫುಟ್ವೇರ್ ಧರಿಸಲೇ ಬೇಕೆಂಬುದಿಲ್ಲ! ಹರಿದಿರದ ಸ್ವಚ್ಛವಾಗಿರುವ ಶೂಗಳನ್ನು ಧರಿಸಿದರೇ ಸಾಕು! ಎಥ್ನಿಕ್ ಲುಕ್ಗಾದಲ್ಲಿ ಮಾತ್ರ, ಚಪ್ಪಲಿಗಳನ್ನು ಧರಿಸಬಹುದು.
ಈ ಸುದ್ದಿಯನ್ನೂ ಓದಿ | Pro Ludo Star League: ಜನವರಿಯಲ್ಲಿ ಆರಂಭವಾಗಲಿದೆ ‘ಪ್ರೊ ಲುಡೋ ಸ್ಟಾರ್ ಲೀಗ್’; ಹಿರಿತೆರೆ, ಕಿರುತೆರೆ ಕಲಾವಿದರು ಭಾಗಿ
ಆಕ್ಸೆಸರೀಸ್ ಅಗತ್ಯತೆ
ಪ್ರೊಫೆಷನಲ್ ಆಗಿ ಕಾಣಿಸಬೇಕಿದ್ದಲ್ಲಿ, ಕೈಗೊಂದು ವಾಚ್ ಧರಿಸಿ. ಯಾವುದೇ ಕಾರಣಕ್ಕೂ ಠಪೋರಿ ಲುಕ್ ನೀಡುವಂತಹ ಭಾರಿ ಗಾತ್ರದ ಚಿನ್ನಾಭರಣಗಳನ್ನು ಕಚೇರಿ ಕ್ಯಾಂಪಸ್ನಲ್ಲಿ ಧರಿಸಬೇಡಿ. ಧರಿಸಲೇಬೇಕಿದ್ದಲ್ಲಿ ಆದಷ್ಟೂ ಮಿನಿಮಲ್ ಧರಿಸಿ. ಗ್ರ್ಯಾಂಡ್ ಕಾರ್ಯಕ್ರಮಗಳಿಗೆ ಮಾತ್ರ ಮೀಸಲಿಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)