Saturday, 14th December 2024

ನಮ್ಮ ಮಾನಸಿಕ ಆರೋಗ್ಯ ನಮ್ಮ ಕೈಯಲ್ಲಿ: ಸಿವಿಲ್ ನ್ಯಾಯಾಧೀಶೆ ಪಕ್ಕಿರವ್ವ ಕೆಳಗೇರಿ

ಹರಪನಹಳ್ಳಿ: ಸಾರ್ವಜನಿಕರು ಮಾನಸಿಕವಾಗಿ ಒತ್ತಡ ಏರುವುದರಿಂದ ಆರೋಗ್ಯವು ಅಪೂರ್ವವಾಗಿ ಮಾನಸಿಕವಾಗಿ ನಿಂದಿಸುತ್ತಾರೆ. ಆದ್ದರಿಂದ ನಮ್ಮ ಆರೋಗ್ಯದ ಜೋತೆಗೆ ಕಾನೂನು ಬಗ್ಗೆ ತಿಳಿದು ಕೊಂಡು ಸಮಾಜದ ನಾಗರಿಕರಾಗಿ ನಿಯಮಗಳನ್ನು ಪಾಲಿಸಿ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಗಳು, ಹಾಗೂ ಸಿವಿಲ್ ನ್ಯಾಯಾಧೀಶ ರಾದ ಪಕ್ಕಿರವ್ವ ಕೆಳಗೇರಿ  ಪ್ರತಿಪಾದಿಸಿ ದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಆರೋಗ್ಯ ಇಲಾಖೆ ಹರಪನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಸಮಾಜದಲ್ಲಿ ಸಾರ್ವಜನಿಕರು ಆರೋಗ್ಯ ಕಡೆ ಹೆಚ್ಚು ಗಮನ ಹರಿಸಿಕೊಳ್ಳಬೇಕು.

ಸಮಾಜದಲ್ಲಿ ಸಾವಿರಾರು ಜನ ಮಾನಸಿಕ ಒತ್ತಡಕ್ಕೆ ಮಣಿದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಮನಸ್ಥಿತಿಯನ್ನು ನಾವುಗಳು ಬೆಳಸಿಕೊಂಡಿ ದ್ದೇವೆ. ದೇಶದಲ್ಲಿ ಲಕ್ಷಾಂತರ ಜನರು ಮಾನಸಿಕವಾಗಿ ಕುಗ್ಗುತ್ತಿ ದ್ದಾರೆ. ಇಂತಹ ರೋಗನಿರೋಧಕ ಸಮಸ್ಯೆ ಸೃಷ್ಟಿಯಾಗಲು ಮಾನಸಿಕ ಒತ್ತಡದಿಂದ ಬಳಲುತ್ತಿರುವುದು , ಮತ್ತೊಂದು ಕಡೆ ದೇಶದಲ್ಲಿ ಕರೋನದಿಂದ ಎಷ್ಟೋ ಸಂಭಂದಿಕರನ್ನು ತಮ್ಮ ಸಂಬಂಧಗಳನ್ನು ಕಳೆದುಕೊಂಡಿ ದ್ದಾರೆ. ಇಂತಹ ಕಾಯಿಲೆಯಿಂದ ಮಾನಸಿಕ ಒತ್ತಡಕ್ಕೆ ಬಲಿಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಅಪರ ಸರಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ಆಹಾರದಲ್ಲಿ ಏರುಪೇರು ಆದಾಗ ಮಾನಸಿಕ ಆರೊಗ್ಯ ಖಿನ್ನತೆಗೆ ಒಳಗಾಗುತ್ತಿದ್ದೆ . ಒಬ್ಬರಿಂದ ಇನ್ನೊಬ್ಬ ರಿಗೆ ಮಾತನಾಡುವುದು ಮಾನಸಿಕ ರೋಗವಾಗುತ್ತಿದೆ. ವೈಯಕ್ತಿಕವಾಗಿ ಸಂಬಾವಿಸುವುದು ಮಾನಸಿ ಖಿನ್ನತೆಗೆ ಒಳಗಾಗುತ್ತಾರೆ. ಎಂದು ವಿಶ್ಲೇಷಿಸಿದರು.

ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ .ದೇವರಾಜ್, ಅಪರ ಸರಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ವಕೀಲರಾದ ಎಂ. ಮೃತಂಜಯ್ಯ , ಎಸ್.ಜಿ. ತಿಪ್ಪೇಸ್ವಾಮಿ, ನಂದಿಶ್ ನಾಯ್ಕ, ತಾಲೂಕು ಅರೋಗ್ಯ ಶಿಕ್ಷಣಅಧಿಕಾರಿ ಭವನೇಶ್ವರಿ, ಗೌರಮ್ಮ, ಆರೋಗ್ಯಮ್ಮ, ಕೆ.ರೇವಣಸಿದ್ದಪ್ಪ, ಬಸವರಾಜದ, ಕೋಟ್ರೆಶ್ ಉಪಸ್ಥಿತರಿದ್ದರು.