Friday, 22nd November 2024

ವಂಚನೆ ಪ್ರಕರಣ: ಸಚಿವ ಬಿ.ಶ್ರೀರಾಮುಲು ಪಿಎ ರಾಜಣ್ಣ ರಿಲೀಸ್‌

ಬೆಂಗಳೂರು : ಹಲವರಿಂದ ವಿವಿಧ ರೀತಿಯಾಗಿ ಕೋಟಿಗಟ್ಟಲೇ ಹಣವನ್ನು ಪಡೆದು, ವಂಚಿಸಿದ್ದ ಪ್ರಕರಣದಲ್ಲಿ ಗುರುವಾರ ಬಂಧನಕ್ಕೊಳಗಾಗಿದ್ದ ಸಚಿವ ಬಿ ಶ್ರೀರಾಮುಲು ಪಿಎ ರಾಜಣ್ಣ ಅವರನ್ನು ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ, ಇದೀಗ ಬಿಡುಗಡೆ ಮಾಡಲಾಗಿದೆ. ಇವರನ್ನು ಆಡುಗೋಡಿಯ ಟೆಕ್ನಿಕಲ್ ಸೆಲ್ ನಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು.

ತಮ್ಮ ಪಿಎಂ ರಾಜಣ್ಣ ಅವರನ್ನು ಎಸಿಬಿ ಬಂಧಿಸಿದ್ದರಿಂದಾಗಿ ಸಚಿವ ಬಿ ಶ್ರೀರಾಮುಲು ಸಿಎಂ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಮೇಲೆ ಕೋಪ ಗೊಂಡಿದ್ದಾರೆ ಎನ್ನಲಾಗಿತ್ತು. ಇದೇ ಕಾರಣಕ್ಕಾಗಿ ಸಿಎಂ ಯಡಿಯೂರಪ್ಪ ಅವರು ತಮ್ಮನ್ನು ಭೇಟಿಯಾಗುವಂತೆ ಶ್ರೀರಾಮುಲುಗೆ ಸೂಚಿಸಿದ್ದರಿಂದ ಗೆಸ್ಟ್ ಹೌಸ್ ನಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ್ದರು.

ನಾನು ಈ ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದೆ. ಗಮನಿಸಿದ ನಂತ್ರ, ಯಾರು ಯಾರ ಹೆಸರನ್ನು ಕೂಡ ದುರುಪಯೋಗ ಮಾಡಿಕೊಳ್ಳಬಾರದು. ರಾಜು ವಿಚಾರದಲ್ಲಿ ನನಗೆ ಗೊತ್ತಿರುವಂತ ಹುಡುಗ, ಈಗಾಗಲೇ ತನಿಖೆ ನಡೆಸುತ್ತಿದೆ. ತನಿಖೆ ನಡೆಯುತ್ತಿರುವಂತ ಸಂದರ್ಭದಲ್ಲಿ ಮಾತನಾಡುವುದು ಒಳ್ಳೆಯದಲ್ಲ. ಎಫ್‌ಐಆರ್ ದಾಖಲಾಗಿದೆ.ಈ ವಿಚಾರವಾಗಿ ವಿಜಯೇಂದ್ರ ಜೊತೆಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದರು.

ಸ್ಪೋಟಕ ಆಡಿಯೋ ಆಧರಿಸಿ, ತನಿಖೆ ನಡೆಸಿದ ಸಿಸಿಬಿ ಪೊಲೀಸರು, ಅವರ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಅದರಲ್ಲಿನ ಮೂರು ಆಡಿಯೋಗಳಲ್ಲಿ ಕೋಟಿ ಕೋಟಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಈ ಬಳಿಕ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ, ಪೊಲೀಸರು ಬಂಧನದಿಂದ ಬಿಡುಗಡೆ ಮಾಡಿದ್ದಾರೆ.