ಪಾವಗಡ: ಮೋದಿ ಕೆಳಗೆ ಇಳಿಯುವವರೆಗೂ ರೈತರ ಹಾಗೂ ಬಡ ಸಾಮಾನ್ಯ ಜನರ ಕಷ್ಟಕರವಾದ ಜೀವನ ಅನುಭವಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಪೆಟ್ರೋಲ್ ಡೀಸಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದೆ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ದಿನೇ ದಿನೇ ತೈಲ ಬೆಲೆ ಏರಿಕೆ ಯಿಂದ ಜನ ಜೀವನದ ಅಸ್ತವ್ಯಸ್ತಗೂಂಡಿದೆ. ಇಂಧನ ಬೆಲೆ ಏರಿಕೆ ಇಂದು ವಾಹನಗಳ ಸರಕು ಸಾಗಾಣಿಕೆಯ ಮೇಲೆ ಪರಿಣಾಮ. ಪ್ರಯಾಣಿಕರಿಗೆ ಟಿಕೆಟ್ ಧರ ಹೆಚ್ಚಳ ಇದೇ ಮೋದಿ ಸರ್ಕಾರದ ಸಾಧನೆ ಇರಬೇಕು.
ಇದೇ ವೇಳೆ ಜಿಲ್ಲಾ ಪಂಚಾಯತ ಸದಸ್ಯ ಹೆಚ್.ವಿ.ವೆಂಕಟೇಶ್ ಮಾತನಾಡಿ ಕಾಂಗ್ರೆಸ್ ಪಕ್ಷದ ಆಡಳಿತದ ಅವಧಿಯಲ್ಲಿ ಪೆಟ್ರೋಲ್ 60 ರೂ ಇದ್ದ ಬೆಲೆ ಬಿಜೆಪಿ ಪಕ್ಷ ಅಧಿಕಾರ ವಹಿಸಿಕೊಂಡ ಏಳು ವರ್ಷದಲ್ಲಿ 105 ಪೆಟ್ರೋಲ್.ಡೀಸಲ್ 98 ಮಾಡಲಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಬಹಳಷ್ಟು ತೊಂದರೆಗೆ ಈಡಾಗುವ ಪರಿಸ್ಥಿತಿ ಉಂಟಾಗಿದೆ.
ನಂತರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು ಮಾತನಾಡಿ ಬಿಜೆಪಿ ಅಧಿಕಾರದಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಗೆ ಸೀಮಿತವಾಗಿದೆ. ಕೋವಿಡ್ ವೇಳೆ ಯಲ್ಲಿ ಎಲ್ಲಾ ವಸ್ತುಗಳ ಮೇಲೆ ದುಬಾರಿ ತೆರಿಗೆ ಹಾಕುತ್ತಿರುವುದು ಸರಿಯೇ. ಇಂಧನ ಬಳೆಸಲು ರೈತರು ಹಿಂದೇಟು ಹಾಕಿದರೆ ನಾವೆಲ್ಲರೂ ಉಪವಾಸದ ಜೀವನ ಕಳೆಯಬೇಕಾಗುತ್ತದೆ ಎಂದರು.
ಪ್ರಮೂಕ ರಸ್ತೆಯಲ್ಲಿ ಎತ್ತಿನಗಾಡಿಯಲ್ಲಿ ಶಾಸಕ ವೆಂಕಟರಮಣಪ್ಪ ಏರಿದರೆ ಮಗ ಜಿಲ್ಲಾ ಪಂಚಾಯತ ಸದಸ್ಯ ವೆಂಕಟೇಶ್ ಸೈಕಲ್ ಏರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಇವರಿಗೆ ಸಾತ್ ನೀಡಿದ ಪುರಸಭೆ ಅಧ್ಯಕ್ಷ ರಾಮಾಂಜಿನಪ್ಪ. ಮಾಜಿ ಪುರಸಭೆ ಅಧ್ಯಕ್ಷ ಎ.ಶಂಕರ್ ರೆಡ್ಡಿ ಪುರಸಭೆ ಸದಸ್ಯರುಗಳಾದ ಸುದೇಶ್ ಬಾಬು. ರಾಜೇಶ್. ರವಿ.ಮಣಿ.ಜಿಲ್ಲಾ ಪಂಚಾಯತ್ ಸದಸ್ಯ ಪಾಪಣ್ಣ.ಪ್ರಮೋದ್ ಕುಮಾರ್. ರಿಜ್ವಾನ್ ಉಲ್ಲಾ.ಯುವ ಮುಖಂಡರುಗಳಾದ ಪೋಟೋ ಅಮರ್, ಕಿರಣ್, ಹರೀಶ್, ಅನ್ನಮೇಶ್ ಇತರೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.