ಕೊಲ್ಹಾರ: ಅನುಕಂಪ ಗಿಟ್ಟಿಸಿಕೊಳ್ಳುವವರಿಗೆ ಮತ ನೀಡದೆ ಅಭಿವೃದ್ಧಿ ಮಾಡಿದವರಿಗೆ ಮತ ನೀಡಿ ಎಂದು ಶಾಸಕ ಶಿವಾನಂದ ಪಾಟೀಲ್ ಹೇಳಿದರು.
ತಾಲ್ಲೂಕಿನ ನಾಗರದಿನ್ನಿ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಡಿಯ ಕೆರೆ ಹೂಳೆತ್ತುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು ಬ.ಬಾಗೇ ವಾಡಿ ಮತಕ್ಷೇತ್ರದ ಜನ ಬಹಳ ಮುಗ್ಧರಿದ್ದಿರಿ ಅಭಿವೃದ್ಧಿಗೆ ಶ್ರಮಿಸಿದವರನ್ನ ಬಿಟ್ಟು ಅಳುವವರನ್ನ, ಅನುಕಂಪ ಗಿಟ್ಟಿಸಿಕೊಳ್ಳುವವರನ್ನ ತುಂಬಾ ಬೇಗ ನಂಬುತ್ತಿರಿ ಆ ತರ ಮಾಡದೆ ಕೆಲಸ ನೋಡಿ ಮತ ನೀಡಿ ಎಂದು ಹೇಳಿದರು.
ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಮಾಡಾಳ್ ವಿರೂಪಾಕ್ಷಪ್ಪ ಎನ್ನುವ ಶಾಸಕನ ಪುತ್ರ 6 ಕೋಟಿ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿರುವು ದನ್ನು ರಾಜ್ಯದ ಜನತೆ ನೋಡಿದ್ದಾರೆ ಒಬ್ಬ ಬಿಜೆಪಿ ಶಾಸಕ 6 ಕೋಟಿ ಲಂಚ ಪಡೆಯುತ್ತಾನೆ ಅಂದ್ರೆ ಬಿಜೆಪಿ ಸಚಿವರು ಎಷ್ಟರ ಮಟ್ಟಿಗೆ ಅಕ್ರಮದಲ್ಲಿ ತೊಡಗಿರಬಹುದು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಾಲ್ಕು ವರ್ಷ ಒಂಬತ್ತು ತಿಂಗಳು ಹಗಲಿರುಳು ಕೆಲಸ ಮಾಡಿದ್ದೆನೆ ಈ ಮೂರು ತಿಂಗಳು ನನ್ನ ಲೈಸೆನ್ಸ್ ನವೀಕರಣಕ್ಕೆ ಬಂದಿದೆ ಎಂದು ಮಾರ್ಮಿಕವಾಗಿ ಮತ್ತೊಮ್ಮೆ ಮತ ನೀಡಿ ಆಯ್ಕೆ ಮಾಡಲು ಮನವಿ ಮಾಡಿಕೊಂಡರು.
ಚುನಾವಣೆ ಸಮಯದಲ್ಲಿ ಮತ ನೀಡಿ ಎಂದು ಬರುವವರನ್ನ ಮತದಾರ ಪ್ರಭುಗಳು ನೀವು ಧೈರ್ಯವಾಗಿ ಪ್ರಶ್ನಿಸಿ ಯಾಕೆ ಮತ ನೀಡಬೇಕು, ನೀವು ಕೆಲಸ ಏನು ಮಾಡಿದ್ದಿರಿ, ಜನರಿಗೆ ಏನು ಅನುಕೂಲ ಮಾಡಿದ್ದಿರಿ ಎಂದು ಪ್ರಶ್ನಿಸಿ ಕೆಲಸ ಮಾಡಿದವರಿಗೆ ಮತ ನೀಡಿ ಎಂದು ಹೇಳಿದರು.
ಮುಖಂಡ ತಾನಾಜಿ ನಾಗರಾಳ ಮಾತನಾಡುತ್ತಾ ಶಾಸಕ ಶಿವಾನಂದ ಪಾಟೀಲರು ಮತಕ್ಷೇತ್ರದ ಪ್ರತಿ ಗ್ರಾಮಕ್ಕೂ ಆದ್ಯತೆ ನೀಡುವ ಮೂಲಕ ತಮ್ಮ ಇಚ್ಛಾ ಶಕ್ತಿಯಿಂದ ಅಭಿವೃದ್ಧಿ ಪಡಿಸಿದ್ದಾರೆ ಅವರಿಗೆ ಮತ್ತೊಮ್ಮೆ ಆಶಿರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ, ಲಕ್ಷ್ಮಣ ಮನಗೂಳಿ, ರಾಮನಗೌಡ ಬಿರಾದಾರ, ಪ್ರದೀಪ ಪಾಟೀಲ್, ಶಿವನಗೌಡ ಬಿರಾದಾರ, ಈರಪ್ಪ ಗೌಡ ಬಿರಾದಾರ, ಶ್ರೀಕಾಂತ ಗಣ , ಪುಟ್ಟು ಪಾಟೀಲ್ ಇದ್ದರು.