Thursday, 12th December 2024

Mohan Babu Family Dispute: ಬೀದಿಗೆ ಬಿತ್ತು ನಟ ಮೋಹನ್ ಬಾಬು ಕುಟುಂಬದ ಆಸ್ತಿ ಕಲಹ!

ಹಿರಿಯ ನಟ ಮೋಹನ್ ಬಾಬು ಅವರ ಕುಟುಂಬ ಜಗಳ (Mohan Babu Family Dispute) ಈಗ ಬೀದಿಗೆ ಬಂದಿದೆ. ಕಳೆದ ಕೆಲ ವರ್ಷಗಳಿಂದಲೂ ಮೋಹನ್ ಬಾಬು (Mohan Babu) ಅವರ ಮಂಚು ಕುಟುಂಬದಲ್ಲಿ ಆಂತರಿಕ ಕಲಹಗಳು ಇದ್ದವು. ಮೋಹನ್ ಬಾಬು ಕೊನೆಯ ಪುತ್ರ ಮಂಚು ಮನೋಜ್ (Manchu Manoj) ಹಾಗೂ ಮಂಚು ವಿಷ್ಣು (Manchu Vishnu) ನಡುವೆ ಭಿನ್ನಾಭಿಪ್ರಾಯಗಳು ಇದ್ದವು.

ಕೆಲ ದಿನದ ಹಿಂದಷ್ಟೆ ಮಂಚು ಮನೋಜ್, ತಂದೆ ಮೋಹನ್ ಬಾಬು ವಿರುದ್ಧ ಹಲ್ಲೆ ಆರೋಪ ಮಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮೋಹನ್ ಬಾಬು ಸಹ ಮಂಚು ಮನೋಜ್ ವಿರುದ್ಧ ಹಲ್ಲೆ ಆರೋಪ ಮಾಡಿ ದೂರು ನೀಡಿದ್ದರು.

ಇದೀಗ ಹಿರಿಯ ತೆಲುಗು ನಟ ಮತ್ತು ಚಲನಚಿತ್ರ ನಿರ್ಮಾಪಕರಾಗಿರುವ ಮೋಹನ್ ಬಾಬು ಅವರು ಈಗ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತೆಲುಗು ಲೋಕಲ್ ಮೀಡಿಯಾಗಳು ಈ ಬಗ್ಗೆ ವರದಿ ಮಾಡಿದೆ. ಅಪ್ಪ ಹಾಗೂ ಮಗನ ನಡುವೆಯೇ ಕಲಹ ಉಂಟಾಗಿದ್ದು ಅದು ಮೋಹನ್ ಬಾಬು ಅವರ ಮೇಲೆ ದೈಹಿಕ ಹಲ್ಲೆ ಮಾಡುವಷ್ಟು ಮುಂದುವರೆದಿದೆ. ಮಂಗಳವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಮೋಹನ್ ಬಾಬು ತಲೆಗೆ ಪೆಟ್ಟು ಬಿದ್ದಿದ್ದರಿಂದ ಮಂಚು ವಿಷ್ಣು ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: UP Horror: ಶಾಲೆಗೆ ಹೋಗಲು ಒತ್ತಾಯಿಸಿದ ತಾಯಿಯನ್ನು ಬರ್ಬರವಾಗಿ ಕೊಲೆಗೈದ ವಿಜ್ಞಾನಿಯ ಪುತ್ರ

ಜಾಲ್ ಪಲ್ಲಿ ಅವರ ನಿವಾಸದಲ್ಲಿ ಅವರ ಮಗ ಮನೋಜ್ ಜೊತೆಗೇ ಕಲಹವಾಗಿದೆ. ಅವರ ತಲೆಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಮೋಹನ್ ಬಾಬು ಅವರ ಆರೋಗ್ಯ ಬುಲೆಟಿನ್ ಇನ್ನೂ ಮಾಧ್ಯಮಗಳಿಗೆ ಲಭ್ಯವಾಗಿಲ್ಲ. ಇಂದು ಮಧ್ಯಾಹ್ನ ಆ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆ ಇದೆ. ನಟ ಮಂಚು ಮೋಹನ್‌ಬಾಬು ಕುಟುಂಬದಲ್ಲಿ ಕಳೆದ ಮೂರು ದಿನಗಳಿಂದ ಗಲಾಟೆ ನಡೆಯುತ್ತಲೇ ಇತ್ತು ಎಂದು ಹೇಳಲಾಗುತ್ತಿದೆ. ಅದೇ ಗಲಾಟೆ ಇನ್ನಷ್ಟು ಮುಂದುವರೆದು ಈ ರೀತಿಯಾಗಿದೆ.

2023ರಲ್ಲೂ ನಡೆದಿತ್ತು ಅಪ್ಪ, ಮಕ್ಕಳ ಕಲಹ

ಮಂಚು ಮನೋಜ್‌ ಹಾಗೂ ವಿಷ್ಣು ಈಗಾಗಲೇ ಬೇರೆ ಬೇರೆ ಮನೆ ಮಾಡಿ ಬದುಕುತ್ತಿದ್ದಾರೆ. ಮನೋಜ್‌ ಎರಡನೇ ಮದುವೆ ಆಗಿದ್ದರು. ಮೊದಲಿನಿಂದಲೇ ಅಣ್ಣ ತಮ್ಮಂದಿರ ನಡುವೆ ಆಸ್ತಿಗಾಗಿ ಗಲಾಟೆ ನಡೆಯುತ್ತಲೇ ಇತ್ತು. ಮೋಹನ್‌ ಬಾಬು ತಮ್ಮ ಆಸ್ತಿಯಲ್ಲಿ ಸ್ವಲ್ಪ ಭಾಗವನ್ನು ಮೂವರೂ ಮಕ್ಕಳಿಗೂ ಹಂಚಿದ್ದಾರಂತೆ. ಮೋಹನ್‌ ಬಾಬು ಹೈದರಾಬಾದ್‌ನ ಷಾದ್ ನಗರ್‌ ರಿಜಿಸ್ಟರ್ ಆಫೀಸ್‌ ಬಳಿ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ಧರು. ಅವರನ್ನು ಮಾತನಾಡಿಸಲು ಹೋದ ಮಾಧ್ಯಮ ಪ್ರತಿನಿಧಿಗಳ ಮೇಲೆ ಗರಂ ಆಗಿದ್ದರು. ಈ ವಿಡಿಯೋ ವೈರಲ್‌ ಆಗಿತ್ತು.