Thursday, 12th December 2024

ನೂತನ ತಾಲ್ಲೂಕು ಕಚೇರಿ ಕಟ್ಟಡ ಆ. 10 ರಂದು ಲೋಕಾರ್ಪಣೆ

ಮೊಳಕಾಲ್ಮುರು: ತಾಲ್ಲೂಕಿನ ಬಹುದಿನಗಳ ಬೇಡಿಕೆಯಾಗಿದ್ದ ನೂತನ ತಾಲ್ಲೂಕು ಕಚೇರಿ ( ಮಿನಿ ವಿಧಾನಸೌಧ) ಕಟ್ಟಡವು ಆ. 10 ರಂದು ಲೋಕಾರ್ಪಣೆಯಾಗಲಿದೆ.

ಭಾಗದಲ್ಲಿ ಕಟ್ಟಿಗೆ ತೊಲೆಗಳು ಮುರಿದಿದ್ದು, ದುರಸ್ತಿ ಮಾಡಿಸಲಾಗಿತ್ತು. ಯಾವಾಗ ಬೇಕಾದರೂ ಬೀಳುವ ಸ್ಥಿತಿಯಲ್ಲಿದ್ದವು. ಕಚೇರಿ ಆವರಣ ಚಿಕ್ಕದಾಗಿದ್ದು ರಾಷ್ಟ್ರೀಯ ದಿನಾಚರಣೆ, ಜಯಂತಿಗಳ ಆಚರಣೆಗೂ ತೊಂದರೆಯಾಗಿತ್ತು. ಈ ಎಲ್ಲ ಕಾರಣ ಗಳಿಂದಾಗಿ ಹೊಸ ತಾಲ್ಲೂಕು ಕಚೇರಿ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಾಗಿತ್ತು.

5 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶ್ರೀನಿವಾಸ ಪ್ರಸಾದ್ ಕಂದಾಯ ಸಚಿವರಾಗಿದ್ದಾಗ ₹ 10 ಕೋಟಿ ವೆಚ್ಚದ ಕಟ್ಟಡಕ್ಕೆ ಮಂಜೂರಾತಿ ನೀಡಲಾಗಿತ್ತು. ಅದು ಚುನಾವಣಾ ವರ್ಷವಾಗಿದ್ದ ಕಾರಣ ತರಾತುರಿಯಲ್ಲಿ ಆಗಿನ ಶಾಸಕ ಎಸ್. ತಿಪ್ಪೇಸ್ವಾಮಿ 2018ರ ಮಾರ್ಚ್ 22 ರಂದು ಶಂಕುಸ್ಥಾಪನೆ ಮಾಡಿದ್ದರು. ಬಿ. ಶ್ರೀರಾಮುಲು ಶಾಸಕರಾಗಿ ಆಯ್ಕೆಯಾದ ನಂತರವೂ ಮತ್ತೊಮ್ಮೆ ಶಂಕುಸ್ಥಾಪನೆ ಮಾಡಲಾಯಿತು. ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು.

ತಹಶೀಲ್ದಾರ್ ಟಿ. ಸುರೇಶ್ ಕುಮಾರ್ ಮಾತನಾಡಿ, ‘ಇಂಟರ್‌ನೆಟ್ ವ್ಯವಸ್ಥೆಯನ್ನು ಸ್ಥಳಾಂತರ ಮಾಡಬೇಕಿದ್ದು, ಇದಕ್ಕಾಗಿ ₹ 5.80 ಲಕ್ಷವನ್ನು ನಿರ್ಮಿತಿ ಕೇಂದ್ರಕ್ಕೆ ತುಂಬಲಾಗಿದ್ದು, ಒಂದು ರಜಾ ದಿನದಂದು ಇದನ್ನು ಮಾಡಿದಲ್ಲಿ ಹೊಸ ತಾಲ್ಲೂಕು ಕಚೇರಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಅನುಕೂಲವಾಗಲಿದೆ’
ಎಂದರು.

ಕಂದಾಯ ಸಚಿವ ಆರ್. ಅಶೋಕ್ ಉದ್ಘಾಟನೆ ನೂತನ ಮಿನಿ ವಿಧಾನಸೌಧವನ್ನು ಕಂದಾಯ ಸಚಿವ ಆರ್. ಅಶೋಕ್
ಉದ್ಘಾಟಿಸಲಿದ್ದಾರೆ. ಸಚಿವ ಬಿ. ಶ್ರೀರಾಮುಲು ಅಧ್ಯಕ್ಷತೆ ವಹಿಸಲಿದ್ದಾರೆ.