Saturday, 14th December 2024

ಸಚಿವ ಶಿವಾನಂದ ಪಾಟೀಲರು ಸದಾ ಅನ್ನದಾತರ ಪರ: ಎಂ ಆರ್ ಕಲಾದಗಿ

ಕೊಲ್ಹಾರ: ಸಚಿವ ಶಿವಾನಂದ ಪಾಟೀಲ್ ಸದಾಕಾಲ ಅನ್ನದಾತ ರೈತರ ಪರವಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಂ ಆರ್ ಕಲಾದಗಿ ಹೇಳಿದರು.
ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಚಿವರ ಏಳ್ಗೆ ಸಹಿಸದೆ ಬಿಜೆಪಿ ಪಕ್ಷದ ಮುಖಂಡರು ಸಚಿವರ ಭಾಷಣದ ಕೆಲ ತುಣುಕುಗಳನ್ನಿಟ್ಟುಕೊಂಡು ವಿನಾಕಾರಣ ಆರೋಪ ಮಾಡುತ್ತಿದ್ದಾರೆ.

ರೈತರಿಗೆ ಸಿಗಬೇಕಾದ ಬೆಲೆಗಳು ಸಿಕ್ಕರೆ ಸ್ವತಃ ರೈತಾಪಿ ವರ್ಗ ಸಾಲ ಕೊಡುವಷ್ಟು ಸಭಲರಾಗುತ್ತಾರೆ ಯಾವ ರೈತರು ಕೂಡ ಸಾಲ ಮನ್ನಾ ಮಾಡಿ ಎನ್ನುವು ದಿಲ್ಲ ಬರಗಾಲದ ಪರಿಹಾರಕ್ಕಾಗಿಯೂ ಕೂಡ ಕಾಯುವುದಿಲ್ಲ ಎನ್ನುವ ಅರ್ಥದ ಸಚಿವರ ಹೇಳಿಕೆಯನ್ನ ವಿರೋಧ ಪಕ್ಷದವರು ತಿರುಚಿ ಸುಖಾಸುಮ್ಮನೆ ಸಚಿವ ಶಿವಾನಂದ ಪಾಟೀಲರ ಮೇಲೆ ರೈತ ವಿರೋಧಿ ಎನ್ನುವ ಆರೋಪ ಮಾಡುತ್ತಿದ್ದಾರೆ. ಸಚಿವ ಶಿವಾನಂದ ಪಾಟೀಲರು ಸದಾಕಾಲ ಅನ್ನದಾತರ ಪರವಾಗಿದ್ದಾರೆ, ರೈತರ ಪರ ಅಪಾರ ಕಾಳಜಿ ಉಳ್ಳವರಾಗಿದ್ದಾರೆ ಎಂದರು.

ಕೇಂದ್ರ ಸರ್ಕಾರ ರೈತರಿಗೆ ನೀಡಬೇಕಾದ ನೈಜ ಬೆಲೆ ನೀಡುತ್ತಿಲ್ಲ, ವಾಣಿಜ್ಯ ಬೆಲೆ ಕಡಿತಗೊಳಿಸಿ ರೈತ ವಿರೋಧಿ ನೀತಿಯನ್ನ ಅನುಸರಿಸುತ್ತಿದೆ ಕೇಂದ್ರ ಸರ್ಕಾರದ ರೈತ ವಿರೋಧಿ ಹಾಗೂ ಇಬ್ಬಗೆಯ ನೀತಿಯನ್ನು ಮುಚ್ಚಿಕೊಳ್ಳಲು ರಾಜ್ಯ ಬಿಜೆಪಿ ನಾಯಕರು ಸುಖಾಸುಮ್ಮನೆ ಸಚಿವ ಶಿವಾನಂದ ಪಾಟೀಲರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ರಾಜ್ಯಾದಲ್ಲಿರಲಿ ಅಥವಾ ಕೇಂದ್ರದಲ್ಲಿರಲಿ ಅಕ್ರಮ, ಅನ್ಯಾಯ, ಭ್ರಷ್ಟಾಚಾರ ಮಾಡುತ್ತಾ ರೈತ ವಿರೋಧಿ ನೀತಿ ಅನುಸರಿಸುತ್ತಾ ಬರುತ್ತಿದೆ
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಅಧಿಕಾರ ಅವಧಿಯ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ (ಯತ್ನಾಳ್) ಬಹಿರಂಗ ಹೇಳಿಕೆ ನೀಡಿದ್ದಾರೆ. ಸುಮಾರು 40 ಸಾವಿರ ಕೋಟಿ ರೂಪಾಯಿ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಬಿಜೆಪಿ ನಾಯಕರ ಮೌನ ಯಾತಕ್ಕೆ ಎಂದು ಪ್ರಶ್ನಿಸಿದ್ದರು.