ಆನೇಕಲ್: ಕಾರು ಹೋಗಲು ದಾರಿಬಿಡಿ ಎಂದು ಹಾರನ್ ಹಾಕಿ ಜೋರಾಗಿ ಹೇಳಿದ್ದಕ್ಕೆ ಕಾರಿನಲ್ಲಿದ್ದವರನ್ನು ಹೊರಗೆಳೆದು ಹಲ್ಲೆ(Assault Case) ಮಾಡಲಾಗಿದೆ. ಹಲ್ಲೆಯ ಬರ್ಬರತೆಗೆ ಕಾರಿನ ಸವಾರ ಸ್ಥಳದಲ್ಲಿಯೇ ದಾರುಣವಾಗಿ (Murder Case) ಸಾವಿಗೀಡಾಗಿದ್ದಾರೆ. ಬೆಂಗಳೂರಿನ (Bengaluru Crime News) ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಬಳಿಯ ಗೂಳಿಮಂಗಲ ಎಂಬಲ್ಲಿ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಆನೇಕಲ್ ತಾಲೂಕಿನ ಲಕ್ಷ್ಮೀನಾರಾಯಣಪುರದ ಚೈತನ್ಯ ಟೆಕ್ನೋ ಶಾಲೆಯ ಪಿಯು ಕಾಲೇಜಿನ ಡೀನ್ ಶ್ರೀನಿವಾಸ ಮನೋಹರ ರೆಡ್ಡಿ (53) ಎಂದು ಗುರುತಿಸಲಾಗಿದೆ. ಪ್ರತಿದಿನ ಕಾಲೇಜಿಗೆ ಹೋಗುವ ದಾರಿಯಲ್ಲಿಯೇ ಕಾರಿನಲ್ಲಿ ಕಾಲೇಜಿಗೆ ಹೋಗುವಾಗ ಮುಂದೆ ನಿಲ್ಲಿಸಿದ್ದ ಜೆಸಿಬಿ ಸೈಡಿಗೆ ತೆಗದುಕೊಂಡು ನನ್ನ ಕಾರು ಹೋಗಲು ದಾರಿ ಬಿಡಿ ಎಂದು ಶ್ರೀನಿವಾಸ ಮನೋಹರ ರೆಡ್ಡಿ ಅವರು ಹಾರನ್ ಹಾಕಿ, ಜೋರಾಗಿ ಮಾತನಾಡಿದ್ದಾರೆ. ಈ ಕಾರಣದಿಂದ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ರಸ್ತೆಯ ಪಕ್ಕದಲ್ಲಿ ಪೈಪ್ಲೈನ್ ಕಾಮಗಾರಿ ಮಾಡಲು ಬಂದ ಜೆಸಿಬಿ ಇಡೀ ರಸ್ತೆಗೆ ಅಡ್ಡಲಾಗಿ ನಿಂತಿತ್ತು. ಕಾಲೇಜಿಗೆ ತಡವಾಗುತ್ತಿದೆ ಎಂದು ಶ್ರೀನಿವಾಸ ರೆಡ್ಡಿ ಜೋರಾಗಿ ಹಾರನ್ ಹಾಕಿ ದಾರಿ ಬಿಡಿ ಎಂದು ಕೇಳಿದ್ದಾರೆ. ಜೆಸಿಬಿಯವರು ಅದಕ್ಕೆ ಬಗ್ಗಿಲ್ಲ. ಜೆಸಿಬಿಯ ನವೀನ್ ಎಂಬಾತ ನಾವು ದಾರಿ ಬಿಡುವುದಿಲ್ಲ ಎಂದು ಜೋರಾಗಿ ಅವಾಜ್ ಹಾಕಿದ್ದಾನೆ. ಕೋಪಗೊಂಡ ರೆಡ್ಡಿ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಮಾಡಬಾರದು ಎಂದು ಕೋಪದಿಂದ ಗುಡುಗಿದ್ದಾರೆ. ಇದರಿಂದ ಕೋಪಗೊಂಡ ನವೀನ್ ರೆಡ್ಡಿ ಕಾರಿನಲ್ಲಿದ್ದ ಶ್ರೀನಿವಾಸ ಮನೋಹರ ರೆಡ್ಡಿ ಅವರನ್ನು ಹೊರಗೆಳೆದು ಬರ್ಬರವಾಗಿ ಹಲ್ಲೆ ಮಾಡಿದ್ದಾನೆ.
ಕಾಲೇಜು ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಡೀನ್ ಕುಸಿದು ಬಿದ್ದು ಸಾವಿಗೀಡಾಗಿದ್ದರು. ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಠಾಣಾ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: Murder Case: ಸಿಗರೇಟ್ ಪ್ಯಾಕ್ ಕದ್ದನೆಂದು ಯುವಕನ ಥಳಿಸಿ ಕೊಲೆ