ಕಲಬುರಗಿ : ಸಿಗರೇಟ್ ಪ್ಯಾಕೆಟ್ ಕಳ್ಳತನ (Theft) ಮಾಡಿದ ಆರೋಪದಲ್ಲಿ ಖಾಸಗಿ ಬ್ಲಡ್ ಬ್ಯಾಂಕ್ (Blood bank) ಮಾಲೀಕನೊಬ್ಬ ತನ್ನ ಬಳಿ ಕೆಲಸಕ್ಕಿದ್ದ ಯುವಕನನ್ನು ಥಳಿಸಿ ಹತ್ಯೆ (Murder Case) ಮಾಡಿರುವ ಘಟನೆ ಕಲಬುರಗಿ (Kalaburagi Crime news) ಎಂ.ಬಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ಸಂಜೆ ಈ ಕೊಲೆ ನಡೆದಿದ್ದು, ಪ್ರಗತಿ ಕಾಲೋನಿಯ ಶಶಿಕಾಂತ್ ನಾಟಿಕಾರ್ (25) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಮೃತ ಶಶಿಕಾಂತ್, ಚಂದ್ರಶೇಖರ ಪಾಟೀಲ್ ಬಳಿ ಕೆಲಸ ಮಾಡುತ್ತಿದ್ದ ಬ್ಲಡ್ ಬ್ಯಾಂಕ್ ನಲ್ಲಿ 1.40 ಲಕ್ಷ ರೂ. ಮೌಲ್ಯದ ಸಿಗರೇಟ್ ಬಾಕ್ಸ್ ಕಳವಾಗಿತ್ತು. ತನ್ನ ಬಳಿ ಕೆಲಸಕ್ಕಿದ್ದ ಶಶಿಕಾಂತ್, ಆಕಾಶ್ ಸಿಗರೇಟ್ ಬಾಕ್ಸ್ ಕದ್ದಿದ್ದಾರೆ ಎಂದು ಆರೋಪಿಸಿ ಮಾಲಕ ಚಂದ್ರಶೇಖರ್ ಅಷ್ಟೂ ಹಣವನ್ನು ಕೊಡುವಂತೆ ಅವರನ್ನು ಕೂಡಿ ಹಾಕಿ ತನ್ನ ಸಹಚರರಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಶಶಿಕಾಂತ್ ಪೋಷಕರಿಗೆ ಕರೆಸಿ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಹಲ್ಲೆಗೆ ಒಳಗಾದ ಶಶಿಕಾಂತ್ ಕೂಡಲೇ ಕುಸಿದು ಬಿದ್ದಿದ್ದು ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಶಶಿಕಾಂತ್ ಮೃತಪಟ್ಟಿದ್ದಾನೆ ಎಂದು ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ, ಹತ್ಯೆಯಾದ ಯುವಕ ಶಶಿಕಾಂತ್ ಅವರ ತಂದೆ ಮಲ್ಲಿಕಾರ್ಜುನ್ ರಾಣಪ್ಪ ನಾಟೀಕರ್ ಅವರು ದೂರು ನೀಡಿದ ಬೆನ್ನಲ್ಲೇ ಬ್ಲಡ್ ಬ್ಯಾಂಕ್ ಮಾಲಕ ಚಂದ್ರಶೇಖರ ಮಲ್ಲಿನಾಥ ಪಾಟೀಲ್, ಆದಿತ್ಯ ಅಲಿಯಾಸ್ ಆದೇಶ ಮರಾಠಾ, ಓಂ ಪ್ರಕಾಶ್ ಘೋರವಾಡಿ, ರಾಹುಲ್ ಪಾಟೀಲ್ ಹಾಗೂ ಅಷ್ಪಾಕ್ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಡ್ಯದಲ್ಲಿ ನೀರಿನ ಟ್ಯಾಂಕ್‌ಗೆ ನೇಣು ಬಿಗಿದುಕೊಂಡು ಇಂಜಿನಿಯರ್ ಆತ್ಮಹತ್ಯೆ
ಮಂಡ್ಯ : ನೀರಿನ ಟ್ಯಾಂಕ್ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರು ಪೋಲೀಸ್ ಠಾಣಾ ವ್ಯಾಪ್ತಿಯ ಕುರುಬರದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಜ್ಞಾನೇಷ್ (30) ಎಂಬವರು ಹೆಬ್ಬೆರಳು ಏತ ನೀರಾವರಿ ಬಳಿ ನೀರಿನ ಟ್ಯಾಂಕ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜ್ಞಾನೇಷ್ ಶಿಂಷಾ ಏತ ನೀರಾವರಿ ಯೋಜನೆಯ ಬಾಪೂಜಿ ಕನ್ಸ್ಟ್ರಕ್ಷನ್‌ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ನಿವಾಸಿ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಕೆಸ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Accident: ಕಾರು ಡಿಕ್ಕಿ ವ್ಯಕ್ತಿ ಹಾಗೂ ಹಸು ಸಾವು