ಬೆಂಗಳೂರು: ಈಜುಕೊಳದಲ್ಲಿದ್ದ (Swimming Pool) ಯುವತಿಯರ ಫೋಟೋ ತೆಗೆದದ್ದನ್ನು ಪ್ರಶ್ನಿಸಿದ್ದೇ ವಿವಾದಕ್ಕೆ ಕಾರಣವಾಗಿ ಗಲಾಟೆಗೆ ತಿರುಗಿ ಒಬ್ಬನ ಹತ್ಯೆ (Murder Case) ಆಗಿದೆ. ಘಟನೆ ರಾಮನಗರ (Ramanagara news) ಜಿಲ್ಲೆಯ ಫಾರ್ಮ್ಹೌಸ್ನಲ್ಲಿ ನಡೆದಿದ್ದು, ಘಟನೆಗೆ (Crime Mews) ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ.
ಅಕ್ಟೋಬರ್ 26ರಂದು ಈ ಘಟನೆ ನಡೆದಿತ್ತು. ಹಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪುನೀತ್ ಮೃತಪಟ್ಟಿದ್ದು, ಆರ್ಎಸ್ಎಸ್ ಕಾರ್ಯಕರ್ತರು ಎಂದು ಹೇಳಲಾದ ನಾಗೇಶ್, ಚಂದ್ರು ಮತ್ತು ಮುರುಳಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಈ ಮೂವರೂ ವೀಕೆಂಡ್ ಕಳೆಯಲು ಯುವತಿಯರ ಜೊತೆ ಫಾರ್ಮ್ ಹೌಸ್ಗೆ ಬಂದಿದ್ದರು. ಇವರು ಈಜುಕೊಳದಲ್ಲಿ ಇದ್ದಾಗ ಫಾರ್ಮ್ ಹೌಸ್ಗೆ ನುಗ್ಗಿದ ಪುನೀತ್ ಮತ್ತತರ ಕೆಲ ಸ್ಥಳೀಯರು, ಯುವತಿಯರ ಫೋಟೊ ತೆಗೆಯಲು ಯತ್ನಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಬೆಂಗಳೂರಿನಿಂದ ಬಂದಿದ್ದ ಗುಂಪು ಮತ್ತು ಸ್ಥಳೀಯರ ನಡುವೆ ವಾಗ್ವಾದ ಸೃಷ್ಟಿಯಾಗಿದೆ.
ಈ ವೇಳೆ ಮೂವರು ಆರೋಪಿಗಳು ದೊಣ್ಣೆಯಿಂದ ಪುನೀತ್ ತಲೆಯ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡ ಪುನೀತ್ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Kadaba News: ಸ್ಕೂಟಿ ಮೇಲೆ ಬೃಹತ್ ಮರ ಬಿದ್ದು ಸವಾರ ಸ್ಥಳದಲ್ಲೇ ಸಾವು