Sunday, 15th December 2024

Mysuru Dasara: ಮೈಸೂರು ದಸರಾ ವೈಭವದ ಫೋಟೊಗಳು ಇಲ್ಲಿವೆ

Mysuru Dasara

ಮೈಸೂರು: ನಾಡಹಬ್ಬ ಮೈಸೂರು ದಸರಾ (Mysuru Dasara) ಅಂಗವಾಗಿ ವಿಜಯದಶಮಿ ದಿನವಾದ ಶನಿವಾರ ಸಾಂಸ್ಕೃತಿಕ ನಗರಿಯಲ್ಲಿ ವಿಜೃಂಭನೆಯಿಂದ ಜಂಬೂ ಸವಾರಿ ನಡೆದಿದ್ದು, ರಾಜ್ಯ ಸೇರಿ ವಿವಿಧೆಡೆಯಿಂದ ಲಕ್ಷಾಂತರ ಜನರು ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರು ಮಧ್ಯಾಹ್ನ ಜಂಬೂ ಸವಾರಿಗೆ ಚಾಲನೆ ನೀಡಿದರು. ಮೆರವಣಿಗೆಯು ಅರಮನೆ ಆವರಣದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸಾಗಿತು. ಬಳಿಕ ಆಕರ್ಷಕ ಪಂಜಿನ ಕವಾಯತು ಮೂಲಕ ದಸರಾ ಮಹೋತ್ಸವಕ್ಕೆ ತೆರೆಬಿದ್ದಿತು. ಇದೇ ವೇಳೆ ನಡೆದ ಡ್ರೋನ್‌ ಶೋ ಹಾಗೂ ಬೈಕ್‌ ಸ್ಟಂಟ್‌ ನೋಡುಗರ ಗಮನ ಸೆಳೆಯಿತು. ಒಟ್ಟಾರೆ ದಸರಾ ವೈಭವದ ಸ್ಮರಣೀಯ ಚಿತ್ರಗಳು ಇಲ್ಲಿವೆ.